ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ 2nd ODI: ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ವಿವರ!

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡ ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ನೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್ ಬಲವಾಗಿದ್ದರೆ, ಮೊಹಮ್ಮದ್ ಸಿರಾಜ್ ಎರಡನೇ ಪಂದ್ಯಕ್ಕೆ ಮರಳುವ ಮೂಲಕ ವೇಗದ ಬೌಲಿಂಗ್‌ ವಿಭಾಗಕ್ಕೆ ಬಲವನ್ನು ತಂದುಕೊಡಲಿದ್ದಾರೆ.

IND vs NZ 2nd ODI: ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಭಾರತ vs ನ್ಯೂಜಿಲೆಂಡ್‌ ನಡುವಣ ಎರಡನೇ ಏಕದಿನ ಪಂದ್ಯ. -

Profile
Ramesh Kote Nov 6, 2026 3:52 PM

ವೆಲ್ಲಿಂಗ್ಟನ್‌: ಮೊದಲನೇ ಪಂದ್ಯದ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಭಾರತ ತಂಡ, ಇದೀಗ ಎರಡನೇ ಪಂದ್ಯದಲ್ಲಿಯೂ (IND vs NZ) ನ್ಯೂಜಿಲೆಂಡ್‌ ಎದುರು ಗೆಲುವು ಪಡೆಯಲು ಸಜ್ಜಾಗುತ್ತಿದೆ. ನವೆಂಬರ್ 7ರ ಶನಿವಾರ ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಮೊದಲನೇ ಪಂದ್ಯದ ಗೆಲುವಿನ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಟೀಮ್‌ ಇಂಡಿಯಾ, ಗೆಲುವಿನ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದೆ.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀರಸ ಪ್ರದರ್ಶನ ನೀಡಿತ್ತು. ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಕೇವಲ 185 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ್ದರಿಂದ ಡೆಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 32 ಓವರ್‌ಗಳಿಗೆ 143 ರನ್‌ಗಳ ಗೆಲುವಿನ ಗುರಿಯನ್ನು ನೀಡಲಾಗಿತ್ತು. ಅಂತಿಮವಾಗಿ ಭಾರತ ವಿರಾಟ್‌ ಕೊಹ್ಲಿಯ ಅರ್ಧಶತಕದ ಬಲದಿಂದ 22.4 ಓವರ್‌ಗಳಿಗೆ ಗೆಲುವು ದಾಖಲಿಸಿತ್ತು.

IND vs NZ: ಎರಡನೇ ಒಡಿಐಗೂ ಮುನ್ನ ನ್ಯೂಜಿಲೆಂಡ್‌ಗೆ ಮತ್ತೊಂದು ಆಘಾತ, ಡೆವೋನ್‌ ಕಾನ್ವೆ ಔಟ್‌!

ಇನ್ನೊಂದೆಡೆ, ಸರಣಿ ಆರಂಭಕ್ಕೂ ಮುನ್ನ ಭಾರತ ತಂಡದ ಗೆಲುವಿನ ನಿರೀಕ್ಷೆ ಕಡಿಮೆಯಾಗಿತ್ತು. ಏಕೆಂದರೆ ತಂಡದ ಪ್ರಮುಖ ವೇಗದ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿದಿತ್ತು. ಆದರೆ ಅನುಭವದ ಕೊರತೆಯಿದ್ದ ಅನ್ಶುಲ್ ಕಾಂಬೋಜ್, ಗುರ್ನೂರ್‌ ಬ್ರಾರ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನೊಳಗೊಂಡ ಬೌಲಿಂಗ್ ಪಡೆ ಅತ್ಯುತ್ತಮ ಪ್ರದರ್ಶನ ನೀಡಿತು. ಒತ್ತಡದ ಸಂದರ್ಭದಲ್ಲೂ ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ಈ ಯುವ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ನಿರಂತರ ಸವಾಲೊಡ್ಡಿ ಗಮನಾರ್ಹ ಪ್ರದರ್ಶನ ನೀಡಿದರು.

ಪಂದ್ಯದ ವಿವರ

ಎರಡನೇ ಏಕದಿನ ಪಂದ್ಯ

ಭಾರತ vs ನ್ಯೂಜಿಲೆಂಡ್‌

ದಿನಾಂಕ: ನವೆಂಬರ್‌ 7, 2026

ಸಮಯ: ಬೆಳಗ್ಗೆ 07: 30ಕ್ಕೆ (ಭಾರತೀಯತ ಕಾಲಮಾನ)

ಸ್ಥಳ: ಹೆನ್ರಿ ಸ್ಟೇಡಿಯಂ, ವೆಲ್ಲಿಂಗ್ಟನ್‌

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌

ಲೈವ್‌ ಸ್ಟ್ರೀಮಿಂಗ್‌: ಸೋನಿ ಲಿವ್‌

IND vs NZ: ಭಾರತದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ ಆಕಾಶ್‌ ಚೋಪ್ರಾ!

ಹೆನ್ರಿ ಸ್ಟೇಡಿಯಂ ಪಿಚ್‌ ರಿಪೋರ್ಟ್‌

ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನ ಪಿಚ್ ನ್ಯೂಜಿಲೆಂಡ್‌ನ ಅತ್ಯಂತ ಸಮತೋಲಿತ ಪಿಚ್‌ಗಳಲ್ಲಿ ಒಂದಾಗಿದೆ. ಹೀಗಾಗಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಉತ್ತಮ ಪೈಪೋಟಿ ನಿರೀಕ್ಷಿಸಬಹುದು. ಪಂದ್ಯದುದ್ದಕ್ಕೂ ಬೌಲರ್‌ಗಳಿಗೆ ನೆರವು ದೊರೆಯುವ ಸಾಧ್ಯತೆಯಿದ್ದರೂ, ಬ್ಯಾಟರ್‌ಗಳು ಆರಂಭದಲ್ಲಿ ಪಿಚ್‌ನ ಪರಿಸ್ಥಿತಿಯನ್ನು ಅರಿತುಕೊಂಡು ಕ್ರೀಸ್‌ನಲ್ಲಿ ನೆಲೆಯೂರಿದ ಬಳಿಕ ರನ್ ಗಳಿಸುವತ್ತ ಗಮನಹರಿಸಬೇಕಾಗುತ್ತದೆ.

ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯ ಕಡಿಮೆ ಮೊತ್ತದ ಪಂದ್ಯವಾಗಿತ್ತು. ಆದರೆ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲಕರವಾದ ಪಿಚ್ ಸಿಗುವ ನಿರೀಕ್ಷೆಯಿದೆ. ಇಲ್ಲಿ 300ರಿಂದ 320 ರನ್‌ಗಳವರೆಗಿನ ಮೊತ್ತವನ್ನು ಸುಲಭವಾಗಿ ದಾಖಲಿಸುವ ಸಾಧ್ಯತೆಯಿದೆ.

IND vs NZ: ಮೊಹಮ್ಮದ್‌ ಸಿರಾಜ್‌ ಇನ್‌? ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 124

ಭಾರತದ ಗೆಲುವು: 52

ನ್ಯೂಜಿಲೆಂಡ್‌ ಗೆಲುವು: 64

ಫಲಿತಾಂಶವಿಲ್ಲ: 07

ಟೈ: 01

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ನಮನ್ ಧೀರ್, ಆನ್ಶುಲ್ ಕಾಂಬೋಜ್, ಗುರ್‌ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್‌: ವಿಲ್‌ ಯಂಗ್‌, ಟಿಮ್‌ ಸೈಫರ್ಟ್‌ (ವಿಕೆಟ್‌ ಕೀಪರ್‌), ಹೆನ್ರಿ ನಿಕೋಲ್ಸ್‌, ಡ್ಯಾರಿಲ್‌ ಮಿಚೆಲ್‌, ಟಾಮ್‌ ಲೇಥಮ್‌, ಗ್ಲೆನ್‌ ಫಿಲಿಪ್ಸ್‌, ಮೈಕಲ್‌ ಬ್ರೇಸ್‌ವೆಲ್‌, ಮಿಚೆಲ್‌ ಸ್ಯಾಂಟ್ನರ್‌, ಕೈಲ್‌ ಜೇಮಿಸನ್‌, ಜೇಕವ್‌ ಡಫಿ, ಬ್ಲೈರ್‌ ಟಿಕ್ನರ್‌