ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿಯನ್ನು ಕೈ ಬಿಟ್ಟು ಟಾಪ್‌ 5 ಕ್ರಿಕೆಟಿಗರನ್ನು ಆರಿಸಿದ ಎಬಿ ಡಿ ವಿಲಿಯರ್ಸ್‌!

ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಆಡಿದ ಅಥವಾ ಎದುರಾಗಿ ಆಡಿದ ಆಟಗಾರರನ್ನು ಒಳಗೊಂಡ ತಮ್ಮ ನೆಚ್ಚಿನ ಐವರು ಕ್ರಿಕೆಟಿಗರನ್ನು ದಕ್ಷಿಣ ಆಫ್ರಿಕಾ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ ಆಯ್ಕೆ ಮಾಡಿದ್ದಾರೆ. ಆದರೆ, ತಮ್ಮ ಗೆಳೆಯ ವಿರಾಟ್‌ ಕೊಹ್ಲಿಯನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ತಮ್ಮ ನೆಚ್ಚಿನ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ ಎಬಿಡಿ.

ನವದೆಹಲಿ: ತಮ್ಮ ಜೊತೆ ಆಡಿದ ಹಾಗೂ ಎದುರಾಳಿಯಾಗಿ ಆಡಿದ ಆಟಗಾರರನ್ನು ಒಳಗೊಂಡ ಅಗ್ರ ಐವರು ಅತ್ಯುತ್ತಮ ಕ್ರಿಕೆಟಿಗರನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ (AB De Villiers) ಆಯ್ಕೆ ಮಾಡಿದ್ದಾರೆ. ಆದರೆ, ಒಂದು ದಶಕಕ್ಕೂ ಅಧಿಕ ಸಮಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ತಮ್ಮ ಜೊತೆ ಆಡಿದ್ದ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು(Virat Kohli) ಕೈ ಬಿಡುವ ಮೂಲಕ ಎಬಿಡಿ ಅಚ್ಚರಿ ಮೂಡಿಸಿದ್ದಾರೆ. ಆದರೆ, ತಮ್ಮ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ಮೊಹಮ್ಮದ್‌ ಆಸಿಫ್‌ (Mohammad Asif) ಅವರನ್ನು ಆಯ್ಕೆ ಮಾಡಿದ್ದಾರೆ.

ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಎಬಿ ಡಿ ವಿಲಿಯರ್ಸ್‌ಗೆ ತಮ್ಮ ನೆಚ್ಚಿನ ಐವರು ಆಟಗಾರರನ್ನು ಆರಿಸಲು ಕೇಳಲಾಯಿತು. ಅವರು ತಮ್ಮದೇ ದೇಶದ ದಿಗ್ಗಜ ಜಾಕ್‌ ಕಾಲಿಸ್‌, ಇಂಗ್ಲೆಂಡ್‌ ಆಲ್‌ರೌಂಡರ್‌ ಆಂಡ್ರೆ ಫ್ಲಿಂಟಾಫ್‌, ಆಸ್ಟ್ರೇಲಿಯಾ ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್‌ ಹಾಗೂ ಭಾರತದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್‌ ಆಸಿಫ್‌ ಅವರನ್ನು ಆರಿಸಿದ್ದಾರೆ. ಆದರೆ, ತಮ್ಮ ಗೆಳೆಯ ವಿರಾಟ್‌ ಕೊಹ್ಲಿಯನ್ನು ಕೈ ಬಿಟ್ಟಿದ್ದಾರೆ.

ʻರಾಹುಲ್‌ ದ್ರಾವಿಡ್‌ಗೆ ಗೇಟ್‌ ಪಾಸ್‌ʼ: ರಾಜಸ್ಥಾನ್‌ ರಾಯಲ್ಸ್‌ ಬಗ್ಗೆ ಎಬಿಡಿ ಅಚ್ಚರಿ ಹೇಳಿಕೆ!

"ಕಾಲಿಸ್‌, ಫ್ಲಿಂಟಾಫ್‌, ಮೊಹಮ್ಮದ್‌ ಆಸಿಪ್‌, ಶೇನ್‌ ವಾರ್ನ್‌ ಹಾಗೂ ಸಚಿನ್‌ ತೆಂಡೂಲ್ಕರ್‌. ಮೈದಾನಕ್ಕೆ ಆಗಮಿಸುವ ವೇಳೆ ಸಚಿನ್‌ ತೆಂಡೂಲ್ಕರ್‌ಗೆ ಸಿಗುತ್ತಿದ್ದ ಬೆಂಬಲ ಅದ್ಭುತವಾಗಿತ್ತು. ಅವರ ಬ್ಯಾಟಿಂಗ್‌ ನೋಡುವುದು ಅತ್ಯುತ್ತಮವಾಗಿದೆ. ವಿರಾಟ್‌ ನನ್ನನ್ನು ಕ್ಷಮಿಸಿ, ಸಚಿನ್‌. ಈ ಕಾರಣದಿಂದಲೇ ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟವಾಗಿದೆ," ಎಂದು ಎಬಿ ಡಿವಿಲಿಯರ್ಸ್‌ ತಿಳಿಸಿದ್ದಾರೆ.

ಜಾಕ್‌ ಕಾಲಿಸ್‌ ವಿಶ್ವದ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಹೇಳಿದ ಎಬಿಡಿ, ತನಗೆ ಯಾರ್ಕರ್‌ ಹಾಕಿ ಔಟ್‌ ಮಾಡಿದ್ದ ಆಂಡ್ರೆ ಫ್ಲಿಂಟಾಪ್‌ ಅವರನ್ನು ಸ್ಮರಿಸಿಕೊಂಡರು.

"ಜಾಕ್‌ ಕಾಲಿಸ್‌ ಅತ್ಯುತ್ತಮ ಆಲ್‌ರೌಂಡರ್‌ ಅಥವಾ ಸಾರ್ವಕಾಲಿಕ ಅತ್ಯುತ್ತಮ ಆಟಗಾರ. ನಾನು ನೋಡಿದ ಅತ್ಯುತ್ತಮ ವೇಗದ ಬೌಲರ್‌ ಮೊಹಮ್ಮದ್‌ ಆಸಿಫ್‌. ಶೇನ್‌ ವಾರ್ನ್‌ ವಿರುದ್ಧ ಆಡುವುದನ್ನು ನಾನು ಇಷ್ಟಪಡುತ್ತೇನೆ. ಆದರೆ, ಇವರನ್ನು ಒಮ್ಮೆಯೂ ಎದುರಿಸಿಲ್ಲ. ಅವರ ನೋಟ, ನಡೆ ಹಾಗೂ ನುಡಿಯನ್ನು ನಾನು ಇಷ್ಟಪಟ್ಟಿದ್ದೇನೆ. ಆಂಡ್ರೆ ಫ್ಲಿಂಟಾಫ್‌ ದೊಡ್ಡ ಮ್ಯಾಚ್‌ ವಿನ್ನರ್‌. ಜಾಕ್‌ ಕಾಲಿಸ್‌ಗೆ ಯಾರ್ಕರ್‌ ಹಾಕಿ ಬೌಲ್ಡ್‌ ಮಾಡಿದ್ದು ನಾನು ನೀಡಿದ ಅತ್ಯುತ್ತಮ ಎಸೆತ," ಎಂದು ಎಬಿಡಿ ತಿಳಿಸಿದ್ದಾರೆ.

Asia Cup 2025: ʻಜಸ್‌ಪ್ರೀತ್‌ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡಲ್ಲʼ-ಎಬಿಡಿ ಅಚ್ಚರಿ ಹೇಳಿಕೆ!

ಇತ್ತೀಚೆಗೆ ಎಬಿ ಡಿ ವಿಲಿಯರ್ಸ್‌ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ತಂಡ ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಪಾಕಿಸ್ತಾನ ವಿರುದ್ದದ ಫೈನಲ್‌ ಪಂದ್ಯದಲ್ಲಿ ಎಬಿಡಿ ಶತಕವನ್ನು ಬಾರಿಸಿದ್ದರು. ಈ ಟೂರ್ನಿಯಲ್ಲಿ ಮೂರನೇ ಶತಕವನ್ನು ಸಿಡಿಸಿದ್ದರು. ಪಾಕ್‌ ನೀಡಿದ್ದ 196 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ, 16.5 ಓವರ್‌ಗಳಿಗೆ ಗೆಲುವಿನ ದಡ ಸೇರಿಸಿತ್ತು.