ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻತಮ್ಮ ಓಪನಿಂಗ್‌ ಸ್ಥಾನವನ್ನು ತ್ಯಾಗ ಮಾಡಿದ್ದಾರೆʼ: ಸಂಜು ಸ್ಯಾಮ್ಸನ್‌ ನಿಸ್ವಾರ್ಥ ಮನೋಭಾವವನ್ನು ಶ್ಲಾಘಿಸಿದ ಅಭಿಷೇಕ್‌ ಶರ್ಮಾ!

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಆರಂಭಿಕ ಸ್ಥಾನ ಬಿಟ್ಟುಕೊಟ್ಟ ಸಂಜು ಸ್ಯಾಮ್ಸನ್ ಅವರನ್ನು ಅಭಿಷೇಕ್ ಶರ್ಮಾ ಶ್ಲಾಘಿಸಿದ್ದಾರೆ. ಅಭಿಷೇಕ್ 113 ರನ್, ವೈಭವ್ 45 ರನ್ ಸಿಡಿಸಿ ಭಾರತಕ್ಕೆ ಆರು ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.

ಸಂಜು ಸ್ಯಾಮ್ಸನ್‌ಗೆ ಅಭಿಷೇಕ್‌ ಶರ್ಮಾ ಮೆಚ್ಚುಗೆ.

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ (IND vs NZ) ಯುವ ಆಟಗಾರ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಆರಂಭಿಕ ಸ್ಥಾನ ಬಿಟ್ಟುಕೊಟ್ಟ ಸಂಜು ಸ್ಯಾಮ್ಸನ್ (Sanju samson) ಅವರ ನಿರ್ಧಾರವನ್ನು ಅಭಿಷೇಕ್ ಶರ್ಮಾ ಶ್ಲಾಘಿಸಿದ್ದಾರೆ. ವೈಯಕ್ತಿಕ ಆದ್ಯತೆಗಳಿಗಿಂತ ತಂಡದ ಹಿತಕ್ಕೆ ಹೆಚ್ಚಿನ ಮಹತ್ವ ನೀಡಿದ ಸಂಜು ಅವರ ನಡೆ ಭಾರತೀಯ ತಂಡದ ನಿಸ್ವಾರ್ಥ ಮನೋಭಾವವನ್ನು ತೋರಿಸುತ್ತದೆ ಎಂದು ಅಭಿಷೇಕ್ ಹೇಳಿದ್ದಾರೆ. ಈ ನಿರ್ಧಾರ ಫಲ ನೀಡಿದ್ದು, ಅಭಿಷೇಕ್ ಮತ್ತು ವೈಭವ್ ಅವರ ಸ್ಫೋಟಕ ಆರಂಭದ ನೆರವಿನಿಂದ ಭಾರತ ಆರು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಅಭಿಷೇಕ್ ಶರ್ಮಾ ಕೇವಲ 38 ಎಸೆತಗಳಲ್ಲಿ 113 ರನ್ ಸಿಡಿಸಿದರೆ, ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್ ಗಳಿಸಿದರು. ಈ ಜೋಡಿ ಕೇವಲ ಏಳು ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 133 ರನ್‌ಗಳ ಜೊತೆಯಾಟವಾಡಿತು. ಹಿಂದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ 15ರ ವಯಸ್ಸಿನ ವೈಭವ್ ಅವರನ್ನು ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಸಲಾಗಿತ್ತು.

ಇಶಾನ್ ಕಿಶನ್ ತೊಡೆಸಂದು ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ವೈಭವ್‌ಗೆ ಆರಂಭಿಕ ಸ್ಥಾನದಲ್ಲಿ ಅವಕಾಶ ನೀಡಲಾಯಿತು. ವೆಲ್ಲಿಂಗ್ಟನ್ ಪಂದ್ಯಕ್ಕೂ ಮುನ್ನ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ 61 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸಂಜು ಸ್ಯಾಮ್ಸನ್, ಯುವ ಆಟಗಾರನಿಗೆ ಅವಕಾಶ ಮಾಡಿಕೊಡಲು ತಮ್ಮ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟರು.

IND vs NZ: ಟಿ20ಐ ಸರಣಿಯ ಬಳಿಕ ದೇಶಿ ಕ್ರಿಕೆಟ್‌ಗೆ ಮರಳಲು ಸಿದ್ದ ಎಂದ ಭುವನೇಶ್ವರ್‌ ಕುಮಾರ್‌!

ಸಂಜು ಅವರ ಈ ನಿರ್ಧಾರ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ. ಭಾರತ ತಂಡದ ಪ್ರತಿಯೊಬ್ಬ ಆಟಗಾರರೂ ನಿಸ್ವಾರ್ಥ ಮನೋಭಾವದಿಂದ ಆಡುತ್ತಿದ್ದು, ಸಹ ಆಟಗಾರರ ಯಶಸ್ಸಿಗೆ ಸಂತೋಷಪಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಕಳೆದ ಪಂದ್ಯದಲ್ಲಿ ಸಂಜು ಭಾಯ್ ಆಡಿದ ರೀತಿಯನ್ನು ನೋಡಿದರೆ, ತಮಗೆ ಪರಿಚಿತವಾಗಿರುವ ಬ್ಯಾಟಿಂಗ್ ಕ್ರಮಾಂಕವನ್ನು ಬಿಟ್ಟುಕೊಡುವುದು ಸುಲಭವಲ್ಲ. ಆದರೆ, ಅವರು ತಮ್ಮ ಸ್ಥಾನವನ್ನು ಬೇರೊಬ್ಬರಿಗೆ ಬಿಟ್ಟುಕೊಟ್ಟಿದ್ದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ನಮ್ಮ ತಂಡದಲ್ಲಿ ಪ್ರತಿಯೊಬ್ಬರೂ ನಿಸ್ವಾರ್ಥಿಗಳಾಗಿದ್ದಾರೆ. ಎಲ್ಲರೂ ಇತರರ ಯಶಸ್ಸನ್ನು ಕಂಡು ಸಂತೋಷಪಡುತ್ತಾರೆ. ಇದು ಉತ್ತಮ ತಂಡದ ಪ್ರಮುಖ ಲಕ್ಷಣವಾಗಿದೆ,” ಎಂದು ಅಭಿಷೇಕ್, ಬಿಸಿಸಿಐ ಟಿವಿ ಆಯೋಜಿಸಿದ್ದ ಸಂಭಾಷಣೆಯಲ್ಲಿ ವೈಭವ್ ಸೂರ್ಯವಂಶಿ ಅವರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ವೈಭವ್ ನೀಡಿದ ಆಕ್ರಮಣಕಾರಿ ಆರಂಭವನ್ನೂ ಅಭಿಷೇಕ್‌ ಗುಣಗಾನ ಮಾಡಿದ್ದಾರೆ. ವೈಭವ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಇನಿಂಗ್ಸ್‌ ವೇಗ ನೀಡಿದರು. ನಾನ್‌ಸ್ಟ್ರೈಕರ್ ತುದಿಯಲ್ಲಿದ್ದ ಅಭಿಷೇಕ್ ಅವರ ಈ ಹೊಡೆತವನ್ನು ಗಮನಿಸಿ ಮತ್ತಷ್ಟು ಉತ್ಸಾಹಗೊಂಡರು.

ʻನ್ಯೂಜಿಲೆಂಡ್‌ನಲ್ಲಿ ಕೊನೆಯ ಬಾರಿ ರೋಹಿತ್‌, ಕೊಹ್ಲಿಯನ್ನು ಎದುರಿಸುತ್ತೇನೆʼ:ಕೈಲ್‌ ಜೇಮಿಸನ್‌!

“ವೈಭವ್ ಮೊದಲ ಎಸೆತದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ನಾನು ನಾನ್‌ಸ್ಟ್ರೈಕರ್ ತುದಿಯಿಂದ ಅದನ್ನು ನೋಡುತ್ತಿದ್ದೆ. ಇಂತಹ ಹೊಡೆತವನ್ನು ನೋಡಿದಾಗ ಸಹಜವಾಗಿಯೇ ನಮಗೂ ಉತ್ಸಾಹ ಹೆಚ್ಚುತ್ತದೆ. ವೈಭವ್ ಆಡಿದ ರೀತಿಗೆ ವಿಶೇಷವಾಗಿ ಮೆಚ್ಚುಗೆ ಮತ್ತು ಶ್ರೇಯಸ್ಸು ಸಲ್ಲಿಸಬೇಕು,” ಎಂದು ಅಭಿಷೇಕ್ ಶರ್ಮಾ ತಿಳಿಸಿದ್ದಾರೆ.

ಅಭಿಷೇಕ್ ಅವರ ಸ್ಫೋಟಕ ಆಟಕ್ಕೆ ವೈಭವ್ ಫಿದಾ

ನ್ಯೂಜಿಲೆಂಡ್ ಬೌಲರ್‌ಗಳ ವಿರುದ್ಧ ಅಭಿಷೇಕ್ ಶರ್ಮಾ ನಡೆಸಿದ ಸಿಕ್ಸರ್‌ಗಳ ಸುರಿಮಳೆಗೆ ವೈಭವ್ ಸೂರ್ಯವಂಶಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಅಭಿಷೇಕ್ ಅವರ ಅದ್ಭುತ ಇನಿಂಗ್ಸ್‌ ಅನ್ನು ಹಾಸ್ಯಭರಿತವಾಗಿ ವಿವರಿಸಿದ ವೈಭವ್, ಪಂದ್ಯವನ್ನು ನೇರಪ್ರಸಾರ ಮಾಡದಿದ್ದರೆ ತಮ್ಮ ಊರಿನ ಜನರು ಸ್ಕೋರ್‌ಕಾರ್ಡ್ ನೋಡಿ ನಂಬುತ್ತಿರಲಿಲ್ಲ ಎಂದು ಹೇಳಿದರು.

“ಅಭಿಷೇಕ್ ಭಾಯ್ ಆಡಿದ ರೀತಿಗೆ ಎದುರಾಳಿ ತಂಡ ಪಂದ್ಯದಿಂದಲೇ ಹೊರಬಿದ್ದಂತಾಯಿತು. ಪಂದ್ಯ ನೇರಪ್ರಸಾರವಾಗದಿದ್ದರೆ, ನಮ್ಮ ಊರಿನ ಜನರು ಸ್ಕೋರ್‌ಕಾರ್ಡ್ ನೋಡಿ, ಈ ಪಂದ್ಯ ಯಾವುದೋ ಮನೆಯ ಮೇಲ್ಛಾವಣಿಯಲ್ಲಿ ನಡೆದಿರಬೇಕು ಎಂದು ಹೇಳುತ್ತಿದ್ದರು,” ಎಂದು ವೈಭವ್ ತಮಾಷೆಯಾಗಿ ಹೇಳಿದರು.