ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಭಾರತ ತಂಡದ (Indian Cricket team) ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಭಾಗವಾಗಿ, ಹತ್ತಿರದಲ್ಲಿ ಯಾವುದೇ ವಿಶ್ವಕಪ್ ಇಲ್ಲದಿರುವಾಗ ಅವರನ್ನು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಎಚ್ಚರಿಕೆಯಿಂದ ಬಳಸಲಾಗುತ್ತಿದೆ. ಇದೇ ಕಾರಣದಿಂದ 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಬುಮ್ರಾ ಮೊದಲ ಬಾರಿ 50 ಓವರ್‌ಗಳ ಕ್ರಿಕೆಟ್‌ಗೆ ಮರಳಿದ್ದು, ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು.
ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಆದ್ಯತೆ ನೀಡಲಾಗುತ್ತಿರುವ ಸಂದರ್ಭದಲ್ಲಿ ಭಾರತ ಈ ಹಿಂದಿನ ವಿಧಾನದಿಂದ ಸ್ವಲ್ಪ ಬದಲಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಟಿ20ಐ ಪಂದ್ಯಗಳು ಹಾಗೂ ಏಷ್ಯನ್ ಗೇಮ್ಸ್‌ಗಾಗಿ ಬುಮ್ರಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿರುವ ಬುಮ್ರಾಗೆ ಈ ಹಂತದಲ್ಲಿ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳಲ್ಲಿ ಆಡುವ ಅವಕಾಶ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ನಾಯಕ ಶ್ರೇಯಸ್ ಅಯ್ಯರ್ ಶನಿವಾರ ಹೇಳಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ನಾಯಕ ಎಂಎಸ್ ಧೋನಿ ಎಂದ ರಾಹುಲ್ ದ್ರಾವಿಡ್!
‘ಬುಮ್ರಾಗೆ ಗೇಮ್ ಟೈಮ್ ಅಗತ್ಯ’: ಶ್ರೇಯಸ್ ಅಯ್ಯರ್
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೇಯಸ್ ಅಯ್ಯರ್, “ಬುಮ್ರಾ ಗಾಯದಿಂದ ಚೇತರಿಸಿಕೊಂಡು ಬರುತ್ತಿರುವುದರಿಂದ ಅವರಿಗೆ ಗೇಮ್ ಟೈಮ್ ಸಿಗುವುದು ಬಹಳ ಮುಖ್ಯ. ಪಂದ್ಯಕ್ಕೆ ಮರಳುವಾಗ ಆ ರೀತಿಯ ಆತ್ಮವಿಶ್ವಾಸ ಅಗತ್ಯ. ಅವರು ಅಪಾರ ಅನುಭವ ಹೊಂದಿದ್ದಾರೆ. ಆದರೆ ನನ್ನ ಪ್ರಕಾರ, ಒಂದು ಪ್ರಮುಖ ಟೂರ್ನಿಗೆ ಮುನ್ನ ಅವರಿಗೆ ಇನ್ನಷ್ಟು ಪಂದ್ಯಾವಕಾಶ ಹಾಗೂ ಆತ್ಮವಿಶ್ವಾಸ ಬೇಕು,” ಎಂದು ತಿಳಿಸಿದ್ದಾರೆ.
“ನಾನು ಅವರೊಂದಿಗೆ ಮಾತನಾಡಿದ್ದೇನೆ. ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಬೇಕು ಹಾಗೂ ನಾವು ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂಬ ಮನಸ್ಥಿತಿಯಲ್ಲಿದ್ದಾರೆ,” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
IND vs AFG: ಸಂಜು or ಅಭಿ or ವೈಭವ್? ಆರಂಭಿಕರ ಬಗ್ಗೆ ತಲೆ ನೋವಾಗಿದೆ ಎಂದ ಶ್ರೇಯಸ್ ಅಯ್ಯರ್!
ವಾಷಿಂಗ್ಟನ್, ನಿತೀಶ್ ಕೂಡ ಕಮ್‌ಬ್ಯಾಕ್
ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ಕೂಡ ಇದೀಗ ತಂಡಕ್ಕೆ ಮರಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಟಗಾರರ ಗಾಯದ ಸಮಸ್ಯೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐಯ ವೈದ್ಯಕೀಯ ಸಿಬ್ಬಂದಿಯ ಕಾರ್ಯವೈಖರಿಯ ಮೇಲೂ ಗಮನ ಹರಿದಿದೆ. ಗಾಯದ ಸಮಸ್ಯೆಗಳಿಂದ ತಾವೂ ಹಿಂದೆ ಬಳಲಿರುವ ಶ್ರೇಯಸ್ ಅಯ್ಯರ್, ಈ ಆಟಗಾರರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
“ಇದು ನಿರಾಶಾದಾಯಕ ಎಂದು ನಾನು ಭಾವಿಸುವುದಿಲ್ಲ. ಆಟಗಾರರು ತಂಡಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಆ ಪ್ರಯತ್ನದ ಫಲಿತಾಂಶ ನಕಾರಾತ್ಮಕವಾಗಿದ್ದರೆ, ಅದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ,” ಎಂದು ಶ್ರೇಯಸ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ಆಂಗ್ಲರ ನಾಡಿನಲ್ಲಿ ಪಾಕಿಸ್ತಾನಕ್ಕೆ ಮುಖಭಂಗ: ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಇಂಗ್ಲೆಂಡ್!
ಇಶಾನ್ ಕಿಶನ್ ಗಾಯದ ಬಗ್ಗೆ ಅಯ್ಯರ್ ಸ್ಪಷ್ಟನೆ
ಶುಕ್ರವಾರ ಅಭ್ಯಾಸದ ವೇಳೆ ಮತ್ತೊಂದು ಗಾಯದ ಆತಂಕ ಎದುರಾಗಿತ್ತು. ಬ್ಯಾಟ್ ಮಾಡುತ್ತಿದ್ದ ಇಶಾನ್ ಕಿಶನ್ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಂಡು ಅಸ್ವಸ್ಥರಾದಂತೆ ಕಂಡುಬಂದಿದ್ದರು. ಆದರೆ ಇಶಾನ್ ಕಿಶನ್ ಅವರ ಫಿಟ್‌ನೆಸ್ ಬಗ್ಗೆ ಶ್ರೇಯಸ್ ಅಯ್ಯರ್ ಸ್ಪಷ್ಟನೆ ನೀಡಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
“ಇಶಾನ್ ಕಿಶನ್ ಸದ್ಯಕ್ಕೆ ಆರಾಮವಾಗಿದ್ದಾರೆ. ಅಭ್ಯಾಸದ ಬಳಿಕ ನಾನು ಅವರೊಂದಿಗೆ ಮಾತನಾಡಿದ್ದೇನೆ. ಅದು ಕೇವಲ ಸಣ್ಣ ಪ್ರಮಾಣದ ಸಮಸ್ಯೆಯಾಗಿತ್ತು,” ಎಂದು ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.