Ranji Trophy 2026-27: ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ ಕರ್ನಾಟಕಕ್ಕೆ ಕರುಣ್ ನಾಯರ್ ಆಸರೆ!
KAR vs AP Ranji Trophy 2026-27: ಆಂಧ್ರ ಪ್ರದೇಶ ವಿರುದ್ಧದ 2026-27ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದ ಕರ್ನಾಟಕ ತಂಡಕ್ಕೆ ಕರುಣ್ ನಾಯರ್ ಆಸರೆಯಾಗಿದ್ದಾರೆ. ಅಜೇಯ 81 ರನ್ ಗಳಿಸಿದ ಅವರು ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ ಕರ್ನಾಟಕಕ್ಕೆ ಕರುಣ್ ನಾಯರ್ ಆಸರೆ. -
ವಿಜಯವಾಡ: ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಆಂಧ್ರ (KAR vs AP) ನಡುವಣ 2026-27ರ ಸಾಲಿನ ರಣಜಿ ಟ್ರೋಫಿ (Ranji Trophy 2026-27) ಟೂರ್ನಿಯ ಎಲೈಟ್ ಬಿ ಪಂದ್ಯ ಡ್ರಾನತ್ತ ಮುಖ ಮಾಡಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಆಂಧ್ರ ತಂಡ ದೊಡ್ಡ ಮುನ್ನಡೆ ಪಡೆದ ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಕರುಣ್ ನಾಯರ್ (Karun Nari) ಬ್ಯಾಟಿಂಗ್ ಬಲದಿಂದ ಮೂರನೇ ದಿನದಾಟದ ಅಂತ್ಯಕ್ಕೆ ಅಲ್ಪ ಮುನ್ನಡೆಯನ್ನು ಪಡೆದುಕೊಂಡಿದೆ. ಇನ್ನು ಪಂದ್ಯಕ್ಕೆ ಕೇವಲ ಒಂದೇ ಒಂದು ದಿನ ಬಾಕಿಯಿದ್ದು, ಡ್ರಾನಲ್ಲಿ ಅಂತ್ಯವಾಗುವ ಸಾಧ್ಯತೆ ಇದೆ.
ಮಂಗಳವಾರ ಇಲ್ಲಿನ ಡಾ. ಗೋಕರಾಜು ಮೈದಾನದಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 331 ರನ್‌ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಆಂಧ್ರ ತಂಡ, ಸೀರಾಮ್ ಅವರ ಶತಕದ ಬಲದಿಂದ 121.5 ಓವರ್‌ಗಳಿಗೆ 418 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ144 ರನ್‌ಗಳ ಮುನ್ನಡೆಯನ್ನು ಪಡೆಯಿತು. ಸೀರಾಮ್ ವೆಂಕಟ ರಾಹುಲ್ 119 ರನ್‌ಗಳನ್ನು ಗಳಿಸಿದ ಬಳಿಕ ಮೂರನೇ ದಿನ ವಿಕೆಟ್ ಒಪ್ಪಿಸಿದರು. ಸಸಿಕಾಂತ್ 39 ರನ್‌ಗಳ ಕೊಡುಗೆಯನ್ನು ನೀಡಿದರು. ಕರ್ನಾಟಕ ತಂಡದ ಪರ ಶ್ರೀಕಾರ್ ಶೆಟ್ಟಿ 6 ವಿಕೆಟ್‌ಗಳನ್ನು ಕಬಳಿಸಿದರು.
Ranji Trophy 2026-27: ಸೀರಾಮ್ ರಾಹುಲ್ ಶತಕ, ಕರ್ನಾಟಕ ಎದುರು ಎರಡನೇ ದಿನ ಆಂಧ್ರಕ್ಕೆ ಮೇಲುಗೈ!
ಕರ್ನಾಟಕ ತಂಡಕ್ಕೆ ಆರಂಭಿಕ ಹಿನ್ನಡೆ
ದೊಡ್ಡ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 43 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತವನ್ನು ಅನುಭವಿಸಿತು. ಪ್ರಥಮ ಇನಿಂಗ್ಸ್‌ನಲ್ಲಿ4 ರನ್‌ಗೆ ವಿಕೆಟ್ ಒಪ್ಪಿಸಿದ್ದ ರಾಹುಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ ಒಂದು ರನ್‌ಗೆ ವಿಕೆಟ್ ಒಪ್ಪಿಸಿ ನ್ಯೂಜಿಲೆಂಡ್ ಸರಣಿಗೂ ಮುನ್ನ ನಿರಾಶೆ ಮೂಡಿಸಿದರು. ಇದಕ್ಕೂ ಮುನ್ನ ಮಯಾಂಕ್ ಅಗರ್ವಾಲ್ ಔಟ್ ಆಗಿದ್ದರು. ಬಳಿಕ ಅನೀಶ್ ಕೂಡ ನಿರಾಶೆ ಮೂಡಿಸಿದರು.
ಕರುಣ್-ಮನ್ವಂತ್ ಜುಗಲ್‌ಬಂದಿ
43 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕರ್ನಾಟಕ ತಂಡವನ್ನು ಕರುಣ್ ನಾಯರ್ ಹಾಗೂ ಮನ್ವಂತ್ ಕುಮಾರ್ ಪಾರು ಮಾಡಿದರು. ಈ ಇಬ್ಬರೂ 94 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಂಡದ ಮೊತ್ತವನ್ನು 130ಕ್ಕೆ ಏರಿಸಿದರು. ಕರುಣ್ ಜೊತೆಗೆ ಮತ್ತೊಂದು ತುದಿಯಲ್ಲಿ ತಾಳ್ಮೆಯ ಆಟವನ್ನು ಪ್ರದರ್ಶಿಸಿದ ಮನ್ವಂತ್ 110 ಎಸೆತಗಳಲ್ಲಿ 44 ರನ್ ಗಳಿಸಿದ ಬಳಿಕ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾ ವೈಟ್‌ಬಾಲ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ, ಜೋಫ್ರಾ ಆರ್ಚರ್ ಕಮ್‌ಬ್ಯಾಕ್!
ಕರ್ನಾಟಕ ತಂಡಕ್ಕೆ ಕರುಣ್ ನಾಯರ್ ಆಸರೆ
ಪ್ರಥಮ ಇನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಕರುಣ್ ನಾಯರ್, ದ್ವಿತೀಯ ಇನಿಂಗ್ಸ್‌ನಲ್ಲಿ ಜವಾಬ್ದಾರಿಯುತ ಆಟವನ್ನು ಆಡಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆಡಿದ ಕರುಣ್, ಮೂರನೇ ದಿನದಾಟದ ಅಂತ್ಯಕ್ಕೆ 130 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 81 ರನ್ ಗಳಿಸಿದ್ದು, ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ನಾಯಕ ಸ್ಮರಣ್ ರವಿಚಂದ್ರನ್ ಅವರು ಅಜೇಯ 21 ರನ್ ಗಳಿಸಿದ್ದಾರೆ.
ಡ್ರಾನತ್ತ ಕರ್ನಾಟಕ VS ಆಂಧ್ರ ಪಂದ್ಯ
ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 60 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 176 ರನ್‌ಗಳನ್ನು ಕಲೆ ಹಾಕಿದೆ ಹಾಗೂ 32 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದಿದೆ. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ಕರ್ನಾಟಕ 274 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಪಂದ್ಯಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಅಂತಿಮ ದಿನ ಕರ್ನಾಟಕ ತಂಡ ದಿನಪೂರ್ತಿ ಬ್ಯಾಟ್ ಮಾಡಿದರೂ ಅಥವಾ ಕೊನೆಯ ಸೆಷನ್‌ನಲ್ಲಿ ಆಂಧ್ರ ತಂಡಕ್ಕೆ ಬ್ಯಾಟಿಂಗ್ ನೀಡಬಹುದು. ಹಾಗಾಗಿ ಈ ಪಂದ್ಯ ಡ್ರಾನಲ್ಲಿ ಮುಗಿಯುವುದು ಬಹುತೇಕ ಖಚಿತ. ಒಂದು ವೇಳೆ ಡ್ರಾನಲ್ಲಿ ಅಂತ್ಯವಾದರೆ, ಪ್ರಥಮ ಇನಿಂಗ್ಸ್‌ನ ಮುನ್ನಡೆಯ ಆಧಾರದ ಮೇಲೆ ಆಂಧ್ರ ಎರಡು ಅಂಕ ಹಾಗೂ ಕರ್ನಾಟಕಕ್ಕೆ ಒಂದು ಅಂಕ ಸಿಗಲಿದೆ.