ಅಸ್ಸಾಂ: ಕಾಜಿರಂಗ (Kaziranga tour) ನಿಜವಾಗಿಯೂ ಮುದ್ದಾಗಿದೆ. ಇಲ್ಲಿನ ಸೌಂದರ್ಯ ನೋಡಿ ನಾನು ಮೋಡಿಗೊಂಡಿದ್ದೇನೆ. ಇದೊಂದು ಅದ್ಬುತ ಲೋಕ ಎಂದು ಭಾರತದ ಮಾಜಿ ಕ್ರಿಕೆಟಿಗ (Former Indian cricketer) ಅನಿಲ್ ಕುಂಬ್ಳೆ ( legendary spinner Anil Kumble ) ಹೇಳಿದರು. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ (Kaziranga National Park) ಪತ್ನಿಯೊಂದಿಗೆ ಮಂಗಳವಾರ ಪ್ರವಾಸ ಮಾಡಿದ ಅವರು ಅಲ್ಲಿನ ಜೀಪ್ ಸಫಾರಿಯಲ್ಲಿ ಬಾಗೋರಿ ಅರಣ್ಯ ಶ್ರೇಣಿಯಲ್ಲಿ ಸುತ್ತಾಡಿದರು. ಉದ್ಯಾನವನದ ಸೌಂದರ್ಯ, ವನ್ಯಜೀವಿಗಳು ಮತ್ತು ನಿರ್ವಹಣೆ ಬಗ್ಗೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಎರಡು ದಿನಗಳ ಕಾಜಿರಂಗ ಪ್ರವಾಸದ ಸಂದರ್ಭದಲ್ಲಿ ಅವರು ಪತ್ನಿಯೊಂದಿಗೆ ಬಾಗೋರಿ ಶ್ರೇಣಿಯ ಪ್ರವೇಶ ಭಾಗದಲ್ಲಿರುವ ಸಾಂಪ್ರದಾಯಿಕ ಕೈಮಗ್ಗ ಮಳಿಗೆಗಳಿಗೆ ಭೇಟಿ ನೀಡಿದರು.
ಇದನ್ನೂ ಓದಿ: Bengaluru Robbery Case: ಸುಳಿವು ಸಿಕ್ಕಿದ್ದರೂ ದರೋಡೆಕೋರರನ್ನು ಯಾಕೆ ಬಂಧಿಸಿಲ್ಲ?: ಆರ್.ಅಶೋಕ್ ಪ್ರಶ್ನೆ
ಕಾಜಿರಂಗ ಪ್ರವಾಸದ ಅನುಭವವು ಉಲ್ಲಾಸಕರ ಮತ್ತು ಸ್ಮರಣೀಯವಾಗಿದೆ. ಈ ಉದ್ಯಾನವನವು ಅತ್ಯಂತ ಸುಂದರವಾಗಿದೆ. ಹೂಲಾಕ್ ಗಿಬ್ಬನ್‌ಗಳು, ಘೇಂಡಾಮೃಗಗಳು ಮತ್ತು ಹಲವಾರು ಪಕ್ಷಿ ಪ್ರಭೇದಗಳನ್ನು ಇಲ್ಲಿ ನಾನು ನೋಡಿದೆ. ಇದು ಅದ್ಭುತವೆನಿಸಿತು. ಉದ್ಯಾನದ ಪ್ರಶಾಂತ ವಾತಾವರಣಕ್ಕೆ ಮನಸೋತ ಕ್ರಿಕೆಟಿಗ, ಮಹಿಳಾ ಅರಣ್ಯ ಸಿಬ್ಬಂದಿ ಉಪಸ್ಥಿತಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಾನವನದ ನಿರ್ವಹಣೆ ಅತ್ಯುತ್ತಮವಾಗಿದೆ ಎಂದ ಅವರು,ಪರಿಸರ ಪ್ರಿಯರು ಮತ್ತು ಪ್ರವಾಸಿಗರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಜಿರಂಗಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.
ಭಾರತದಾದ್ಯಂತ ಸೌಂದರ್ಯ ಇದೆ. ಆದರೆ ಕಾಜಿರಂಗದಲ್ಲಿ ವನ್ಯಜೀವಿಗಳನ್ನು ಹತ್ತಿರದಿಂದ ನೋಡುವ ರೋಮಾಂಚನವನ್ನು ಆನಂದಿಸಬಹುದು ಎಂದರು.
ಆಟಗಾರನಾಗಿ ಅಸ್ಸಾಂಗೆ ತಾವು ಹಿಂದೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಅವರು, ವರ್ಷಗಳಲ್ಲಿ ತಾವು ಆಡಿರುವ ಸ್ಥಳಗಳು ಹೇಗೆ ರೂಪಾಂತರಗೊಂಡಿವೆ ಎಂಬುದನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ವಿಕೆಟ್ ಕೀಪರ್-ಬ್ಯಾಟರ್ ಉಮಾ ಚೆಟ್ರಿ, ಬಲಗೈ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಿಯಾನ್ ಈಗಾಗಲೇ ಭಾರತಕ್ಕಾಗಿ ಎರಡು ಪಂದ್ಯಗಳನ್ನು ಆಡಿದ್ದಾರೆ. ಅವರನ್ನು ಐಪಿಎಲ್‌ನಲ್ಲಿಯೂ ನೋಡಬಹುದು. ದೇಶೀಯ ಕ್ರಿಕೆಟ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ಬಲಗೈ ಲೆಗ್ ಸ್ಪಿನ್ ಬೌಲರ್ ಮತ್ತು ಮಾಜಿ ಮುಖ್ಯ ತರಬೇತುದಾರರಾದ ಅನಿಲ್ ಕುಂಬ್ಳೆ ಅವರು ಲೆಗ್ ಬ್ರೇಕ್ ಗೂಗ್ಲಿಗೆ ಹೆಸರುವಾಸಿಯಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್‌ಗಳನ್ನು ಪಡೆದಿರುವ ಇವರು 1999 ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು.
ಇದನ್ನೂ ಓದಿ: IND vs SA: ಮೊಹಮ್ಮದ್ ಶಮಿಯನ್ನು ಕಡೆಗಣಿಸಿದ ಬಿಸಿಸಿಐ ವಿರುದ್ಧ ಮನೋಜ್ ತಿವಾರಿ ಕಿಡಿ!
ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡುತ್ತಿದ್ದ ಕಠಿಣ ಬೌಲರ್ ಆಗಿದ್ದ ಕುಂಬ್ಳೆ ಅವರಿಗೆ "ಜಂಬೊ" ಎನ್ನುವ ಅಡ್ಡ ಹೆಸರು ಕೂಡ ಇದೆ. 1993 ರಲ್ಲಿ ಇವರನ್ನು ವರ್ಷದ ಭಾರತೀಯ ಕ್ರಿಕೆಟಿಗ ಮತ್ತು 1996ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗರಲ್ಲಿ ಒಬ್ಬರಾಗಿ ಆಯ್ಕೆ ಮಾಡಲಾಗಿದೆ. ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಚಿನ್ ತೆಂಡೂಲ್ಕರ್ ಅವರು ಕೂಡ ಇತ್ತೀಚೆಗೆ ಕಾಜಿರಂಗಕ್ಕೆ ಭೇಟಿ ನೀಡಿದ್ದರು.