ಮುಂಬೈ: ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್(Arjun Tendulkar) ಇಂದು (ಮಾರ್ಚ್ 5) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಗೆಳತಿ ಸಾನಿಯಾ ಚಾಂದೋಕ್ (Saaniya chandok) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಕಳೆದ ವರ್ಷ ಆಗಸ್ಟ್ತಿಂಗಳಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸಫ್ ಪಠಾಣ್ ಮತ್ತು ಅಜಿತ್ ಅಗರ್ಕರ್ ಸೇರಿದಂತೆ ಹಲವರು ಮರಿ ತೆಂಡೂಲ್ಕರ್ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿವಾಹ ಕಾರ್ಯಕ್ರಮದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಪತ್ನಿ ಸಾಕ್ಷಿ ಧೋನಿ ಹಾಗೂ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಪತ್ನಿ ನತಾಶಾ ಜೈನ್ ಸಮೇತ ಭಾಗಿಯಾಗಿರುವುದು ಎಲ್ಲರ ಗಮನ ಸೆಳೆಯಿತು. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜಯ ಶಾ ಮತ್ತು ಭಾರತದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಭಾಗವಹಿಸಿದ್ದರು.
Arjun Tendulkar: ರಣಜಿ ಟ್ರೋಫಿ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಮರಿ ತೆಂಡೂಲ್ಕರ್!
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲ, ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುವರಾಜ್ ಸಿಂಗ್ ತಮ್ಮ ಪತ್ನಿ ಹೇಝಲ್ ಕೀಚ್, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮತ್ತು ಅವರ ಸಹೋದರ ಯೂಸಫ್ ಪಠಾಣ್, ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರ ಪತ್ನಿ ಪ್ರಿಯಾಂಕಾ ಚೌಧರಿ ಮತ್ತು ಆಕಾಶ್ ಚೋಪ್ರಾ ಅವರ ಪತ್ನಿ ಆಕ್ಷಿ ಮಾಥುರ್ ಕೂಡ ಭಾಗವಹಿಸಿದ್ದರು.
ಭಾರತದ ಮಾಜಿ ವೇಗಿ ಜಹೀರ್ ಖಾನ್ ತಮ್ಮ ಪತ್ನಿ ಸಾಗರಿಕಾ ಘಾಟ್ಗೆ, ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಪತ್ನಿ ಗೀತಾ ಬಸ್ರಾ ಸೇರಿದಂತೆ ಹಲವರು ಕಾಣಿಸಿಕೊಂಡರು.
ಸಾನಿಯಾ ಚಾಂದೋಕ್ ಯಾರು?
ಸಾನಿಯಾ ಚಾಂದೋಕ್ ಮುಂಬೈ ಮೂಲದ ಪ್ರಸಿದ್ಧ ಘಾಯ್ ಕುಟುಂಬದ ಸದಸ್ಯೆಯಾಗಿದ್ದು, ವ್ಯವಹಾರ ಮತ್ತು ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪದವಿ ಪಡೆದಿದ್ದಾರೆ.
ಇವರ ಕುಟುಂಬದ ವ್ಯಾಪಾರ ಮೂಲಗಳು ಇಕ್ಬಾಲ್ ಕೃಷ್ಣ “ಐಕೆ” ಘಾಯಿ ಅವರಿಂದ ಪ್ರಾರಂಭವಾಗಿವೆ, ಅವರು ಪ್ರಸಿದ್ಧ ಕ್ವಾಲಿಟಿ ಐಸ್ ಕ್ರೀಮ್ ಬ್ರ್ಯಾಂಡ್ ಮತ್ತು ಮುಂಬೈನ ಮಾರೈನ್ ಡ್ರೈವ್‌ನ ಇಂಟರ್‌ಕಾಂಟಿನೆಂಟಲ್ ಹೋಟೆಲ್‌ನ ಸಂಸ್ಥಾಪಕರಾಗಿದ್ದರು. ಈ ಪರಂಪರೆ Graviss Hospitality Ltd ಮೂಲಕ ಮುಂದುವರಿದಿದ್ದು, ಬಾಸ್ಕಿನ್-ರಾಬಿನ್‌ಸ್ ಇಂಡಿಯಾ ಸಂಸ್ಥೆಯನ್ನು ರವಿ ಇಕ್ಬಲ್ ಘಾಯಿ ನಡೆಸುತ್ತಿದ್ದಾರೆ.
ಮುಂದಿನ ವರ್ಷಗಳಲ್ಲಿ, ಕುಟುಂಬವು ಹೊಸ ವ್ಯವಹಾರಗಳಿಗೂ ಬೆಂಬಲ ನೀಡಿದೆ, ಉದಾಹರಣೆಗೆ ರವಿ ಘಾಯಿಯ ಮೊಮ್ಮಗ ಶಿವಾನ್ ಘಾಯಿ ಪ್ರಾರಂಭಿಸಿದ ಆಧುನಿಕ ಆರೋಗ್ಯ-ಪ್ರಮುಖ ಐಸ್ ಕ್ರೀಮ್ ಬ್ರಾಂಡ್ ದಿ ಬ್ರೂಕ್ಲಿನ್ ಕ್ರೀಮರಿ. ಸಾನಿಯಾ ಸ್ವತಃ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪದವಿ ಪಡೆದ ಅವರು ವೇಟರಿನರಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಾರೆ ಮತ್ತು ಮುಂಬೈನಲ್ಲಿ ಆಧಾರಿತ ಲಕ್ಸುರಿ ಪೆಟ್ ಸ್ಪಾ “Mr Paws” ಅನ್ನು ನಡೆಸುತ್ತಾರೆ.