Arjun Tendulkar: ರಣಜಿ ಟ್ರೋಫಿ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಮರಿ ತೆಂಡೂಲ್ಕರ್!
ರಣಜಿ ಟ್ರೋಫಿ ಟೂರ್ನಿಯಲ್ಲಿ ಮಾಸ್ಟರ್-ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಇವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೆ ತಮ್ಮ ತಂದೆಯ ದಾಖಲೆಯನ್ನು ಮುರಿಯಲು ಇವರಿಗೆ ಇನ್ನು ಕೇವಲ 21 ವಿಕೆಟ್‌ಗಳ ಅಗತ್ಯವಿದೆ.
50 ಪ್ರಥಮ ದರ್ಜೆ ವಿಕೆಟ್ ಪಡೆದ ಅರ್ಜುನ್ ತೆಂಡೂಲ್ಕರ್. -
ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರು ರಣಜಿ ಟ್ರೋಫಿ (Ranji Trophy 2026) ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಹಲವು ವರ್ಷಗಳಿಂದ ಗೋವಾ ತಂಡದ ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ಇದೀಗ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೆ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲು ಇನ್ನೂ 21 ವಿಕೆಟ್‌ಗಳ ಅಗತ್ಯವಿದೆ. ಮಹಾರಾಷ್ಟ್ರ ವಿರುದ್ಧದ ಕಳೆದ ಪಂದ್ಯದಲ್ಲಿ ಗೋವಾ ಆಲ್‌ರೌಂಡರ್ ಈ ಮೈಲುಗಲ್ಲು ತಲುಪಿದ್ದರು.
2022-23ರ ಸಾಲಿನಲ್ಲಿ ಗೋವಾ ತಂಡದ ಪರ ರಣಜಿ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಗೋವಾ ತಂಡದ ಪರ ಆಡುವುದನ್ನು ಮುಂದುವರಿಸಿದ್ದಾರೆ. ಅಂದ ಹಾಗೆ ರಾಜಸ್ಥಾನ್ ವಿರುದ್ಧದ ತಮ್ಮ ರಣಜಿ ಪದಾರ್ಪಣೆ ಪಂದ್ಯದಲ್ಲಿಯೇ ಶತಕವನ್ನು ಬಾರಿಸಿದ್ದರು. ಇದರ ಜೊತೆಗೆ ಇದೇ ಪಂದ್ಯದಲ್ಲಿಯೇ 5 ವಿಕೆಟ್‌ಗಳ ಸಾಧನೆಯನ್ನು ಕೂಡ ಮಾಡಿದ್ದಾರೆ.
ರೋಹಿತ್ ಶರ್ಮಾರ ಟಿ20ಐ ವಿಶ್ವ ದಾಖಲೆಯನ್ನು ಮುರಿದ ಪಾಲ್ ಸ್ಟರ್ಲಿಂಗ್!
ಅರ್ಜುನ್ ತೆಂಡೂಲ್ಕರ್ ಅವರ ತಂದೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ 71 ವಿಕೆಟ್‌ಗಳನ್ನು ಕಬಳಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್‌ಗಳು ಹಾಗೂ 25 ಇತರೆ ಪಂದ್ಯಗಳಲ್ಲಿ ಕಬಳಿಸಿದ್ದಾರೆ. ಇನ್ನು ಒಡಿಐ ಕ್ರಿಕೆಟ್‌ನಲ್ಲಿ 154 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು ಟಿ20ಐ ಕ್ರಿಕೆಟ್‌ನಲ್ಲಿ ಒಂದು ಪಂದ್ಯವನ್ನು ಆಡಿದ್ದಾರೆ ಹಾಗೂ ಒಂದು ವಿಕೆಟ್ ಪಡೆದಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಪ್ರದರ್ಶನ
ಅರ್ಜುನ್ ತೆಂಡೂಲ್ಕರ್ ಅವರು ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿದ ಆರು ಪಂದ್ಯಗಳಿಂದ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಗೋವಾ ಪರ ನಾಲ್ಕನೇ ಅತಿ ಹೆಚ್ಚು ವಿಕೆಟ್‌ಗಳ ಪಡೆದ ಬೌಲರ್ ಆಗಿದ್ದಾರೆ. ಗೋವಾ ತಂಡ ಇಲ್ಲಿಯವರೆಗೂ ಆಡಿದ ಆರು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಪಡೆದಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭೀತಿ ಹುಟ್ಟಿಸಿರುವ ತಂಡವನ್ನು ಹೆಸರಿಸಿದ ಫಿಲ್ ಸಾಲ್ಟ್!
ಲಖನೌ ಸೂಪರ್ ಜಯಂಟ್ಸ್ ಪರ ಆಡಲಿರುವ ಅರ್ಜುನ್
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಲಖನೌ ಸೂಪರ್ ಜಯಂಟ್ಸ್ ತಂಡ ಖರೀದಿಸಿತ್ತು. 2021 ರಿಂದ 2025ರ ವರೆಗೆ ಅರ್ಜುನ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಮರಿ ತೆಂಡೂಲ್ಕರ್ ಅವರನ್ನು ಮುಂಬೈ ಫ್ರಾಂಚೈಸಿಯಿಂದ ಲಖನೌ ಫ್ರಾಂಚೈಸಿ ಟ್ರೇಡ್ ಡೀಲ್ ಮಾಡಿಕೊಂಡಿತ್ತು.
2021ರ ಐಪಿಎಲ್ ಮಿನಿ-ಹರಾಜಿನಲ್ಲಿ 20 ಲಕ್ಷ ರು. ಗಳಿಗೆ ಅರ್ಜುನ್ ಮುಂಬೈ ತಂಡವನ್ನು ಸೇರಿಕೊಂಡಿದ್ದರು. ಅವರು 2022ರ ಐಪಿಎಲ್ ಹರಾಜಿನಲ್ಲಿ ಮತ್ತೆ ಭಾಗವಹಿಸಿದ್ದರು. ಗುಜರಾತ್ ಟೈಟನ್ಸ್ ಕೂಡ ಐಪಿಎಲ್ 2022 ರ ಮೆಗಾ-ಹರಾಜಿನಲ್ಲಿ ಅರ್ಜುನ್‌ಗಾಗಿ ಒಂದು ಬಿಡ್ ಮಾಡಿತು. ಅವರು ಮುಂಬೈ ತಂಡವನ್ನು 30 ಲಕ್ಷ ರೂ.ಗಳಿಗೆ ಸೇರಿಕೊಂಡರು. ಅರ್ಜುನ್ 2023 ರಲ್ಲಿ ತಮ್ಮ ಬಹುನಿರೀಕ್ಷಿತ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು ಮತ್ತು ಆ ಋತುವಿನಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದರು.