ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: 4 ವಿಕೆಟ್‌ನೊಂದಿಗೆ ಜಾವಗಲ್‌ ಶ್ರೀನಾಥ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಅರ್ಷದೀಪ್‌ ಸಿಂಗ್‌!

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 70 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಆ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಭಾರತೀಯ ವೇಗದ ಬೌಲರ್‌ಗಳ ಅತ್ಯುತ್ತಮ ಬೌಲಿಂಗ್ ಸಾಧನೆಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ತಮ್ಮ ವಿಶೇಷ ಸಂಭ್ರಮವನ್ನು ಗೆಳತಿಗೆ ಅರ್ಪಿಸಿದ್ದಾರೆ.

4 ವಿಕೆಟ್‌ ಕಿತ್ತು ಸಂಭ್ರಮಿಸಿದ ಅರ್ಷದೀಪ್‌ ಸಿಂಗ್‌.

ಆಕ್ಲೆಂಡ್‌: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ (IND vs NZ) ಟೀಮ್‌ ಇಂಡಿಯಾದ ಎಡಗೈ ವೇಗಿ ಅರ್ಷದೀಪ್ ಸಿಂಗ್ (Arshdeep Singh) ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 10 ಓವರ್‌ಗಳ ಸಂಪೂರ್ಣ ಕೋಟಾ ಬೌಲ್‌ ಮಾಡಿದ ಅರ್ಷದೀಪ್ 70 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಆ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಅತ್ಯುತ್ತಮ ಏಕದಿನ ಬೌಲಿಂಗ್ ಪ್ರದರ್ಶನ ನೀಡಿದ ಭಾರತೀಯ ವೇಗದ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಅರ್ಷದೀಪ್ ಸಿಂಗ್ ಉತ್ತಮ ಆರಂಭ ನೀಡಿದರು. ಅವರ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತ ತಂಡಕ್ಕೆ ಕಿವೀಸ್‌ 186 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ.

IND vs NZ 1st ODI: ಅರ್ಷದೀಪ್‌ ಸಿಂಗ್‌ ಮಾರಕ ವೇಗಕ್ಕೆ 185ಕ್ಕೆ ನ್ಯೂಜಿಲೆಂಡ್‌ ಆಲ್‌ಔಟ್‌!

ಶ್ರೀನಾಥ್, ಶಮಿ ದಾಖಲೆ ಪಟ್ಟಿಗೆ ಅರ್ಷದೀಪ್ ಸೇರ್ಪಡೆ

ನ್ಯೂಜಿಲೆಂಡ್ ನೆಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ವೇಗದ ಬೌಲರ್‌ಗಳ ಅತ್ಯುತ್ತಮ ಬೌಲಿಂಗ್ ಸಾಧನೆಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಭಾರತೀಯ ವೇಗದ ಬೌಲರ್‌ಗಳ ಅತ್ಯುತ್ತಮ ಏಕದಿನ ಬೌಲಿಂಗ್ ಅಂಕಿಅಂಶಗಳು

ಜಾವಗಲ್ ಶ್ರೀನಾಥ್: 4/23 (ಆಕ್ಲೆಂಡ್, 2003)

ಜಾವಗಲ್ ಶ್ರೀನಾಥ್: 4/52 (ನೇಪಿಯರ್, 1995)

ಮೊಹಮ್ಮದ್ ಶಮಿ: 4/55 (ನೇಪಿಯರ್, 2014)

ಅರ್ಷದೀಪ್ ಸಿಂಗ್: 4/70 (ಆಕ್ಲೆಂಡ್, 2026)

ಈ ಸಾಧನೆಯೊಂದಿಗೆ ಅರ್ಷದೀಪ್ ಸಿಂಗ್ ಭಾರತದ ಮಾಜಿ ವೇಗದ ಬೌಲರ್‌ಗಳಾದ ಜಾವಗಲ್ ಶ್ರೀನಾಥ್ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ವಿಶೇಷ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

IND vs NZ: ಡ್ಯಾರಿಲ್‌ ಮಿಚೆಲ್‌ರನ್ನು ಮಿಂಚಿನಂತೆ ರನ್‌ಔಟ್‌ ಮಾಡಿದ ರೋಹಿತ್‌ ಶರ್ಮಾ! ವಿಡಿಯೊ

ತಮ್ಮ ಸಂಭ್ರಮದ ಹಿಂದಿನ ಕಾರಣ ತಿಳಿಸಿದ ಅರ್ಷದೀಪ್

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ ಅರ್ಷದೀಪ್ ಸಿಂಗ್, ಪಂದ್ಯದ ಬಳಿಕ ತಮ್ಮ ಬೌಲಿಂಗ್ ಪ್ರದರ್ಶನ ಮತ್ತು ವಿಕೆಟ್ ಪಡೆದ ನಂತರದ ಸಂಭ್ರಮದ ಕುರಿತು ಮಾತನಾಡಿದರು.

"ಇಲ್ಲಿನ ವಾತಾವರಣವನ್ನು ತುಂಬಾ ಇಷ್ಟಪಡುತ್ತಿದ್ದೇನೆ. ಪಿಚ್‌ನಿಂದಲೂ ಬೌಲರ್‌ಗಳಿಗೆ ಉತ್ತಮ ನೆರವು ಸಿಗುತ್ತಿದೆ. ಉಪಖಂಡದ ಪರಿಸ್ಥಿತಿಯಿಂದ ಇಲ್ಲಿಗೆ ಬಂದಾಗ ಪಿಚ್‌ನಲ್ಲಿ ಸ್ವಲ್ಪ ಜೀವಂತಿಕೆ ಇದ್ದರೆ ಬೌಲ್‌ ಮಾಡಲು ಖುಷಿಯಾಗುತ್ತದೆ. ಗಾಳಿಯೂ ಬೌಲಿಂಗ್‌ಗೆ ಸಹಾಯ ಮಾಡುತ್ತಿದೆ," ಎಂದು ಅರ್ಷದೀಪ್ ಹೇಳಿದ್ದಾರೆ.



ವಿಶೇಷ ಸಂಭ್ರಮಕ್ಕೆ ಕಾರಣ ತಿಳಿಸಿದ ಅರ್ಷದೀಪ್‌

"ಇದು ನನ್ನ ಗೆಳತಿಗಾಗಿ. ನಾವು ಹೊರಗೆ ವಾಕಿಂಗ್‌ಗೆ ಹೋದಾಗ ಇಂತಹ ನೃತ್ಯದ ಹೆಜ್ಜೆಗಳನ್ನು ಹಾಕುತ್ತೇವೆ. ಕೆಲವೊಮ್ಮೆ ಮನಸ್ಥಿತಿ ಸ್ವಲ್ಪ ಸರಿಯಿಲ್ಲದಿದ್ದಾಗ ಪರಸ್ಪರ ಸಂತೋಷಪಡಿಸಲು ಈ ರೀತಿಯ ಸಂಭ್ರಮ ಮಾಡುತ್ತೇವೆ. ಹೀಗಾಗಿ ಈ ಸಂಭ್ರಮ ಅವಳಿಗಾಗಿ," ಎಂದು ಅರ್ಷದೀಪ್ ಸಿಂಗ್‌ ತಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಹಂಚಿಕೊಂಡರು.

186 ರನ್‌ಗಳ ಗುರಿ ಬೆನ್ನಟ್ಟಲು ಸಿದ್ಧ ಎಂದ ವೇಗಿ

ನ್ಯೂಜಿಲೆಂಡ್ ತಂಡವನ್ನು 185 ರನ್‌ಗಳಿಗೆ ನಿಯಂತ್ರಿಸಿದ ಬಳಿಕ ಭಾರತದ ಬ್ಯಾಟಿಂಗ್ ಕುರಿತು ಮಾತನಾಡಿದ ಅರ್ಷದೀಪ್, ಈ ಮೊತ್ತ ಉತ್ತಮ ಗುರಿಯಾಗಿದ್ದು, ಪಿಚ್‌ನ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಿದರೆ ಗೆಲುವು ಸಾಧಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. "ಇದು ಉತ್ತಮ ಮೊತ್ತ ಎಂದು ಭಾವಿಸುತ್ತೇನೆ. ನಾವು ಪಿಚ್‌ನ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕು. ಆಗ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಬಹುದು," ಎಂದು ಹೇಳಿದರು.