ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ʻಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆʼ-ಹ್ಯಾರಿಸ್‌ ರೌಫ್‌ ಎಚ್ಚರಿಕೆ!

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಆಪರೇಷನ್‌ ಸಿಂಧೂರ್‌ ಬಳಿಕ ಕ್ರಿಕೆಟ್‌ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾಕಿಸ್ತಾನವನಕ್ಕೆ ಬಹಿಷ್ಕಾರ ಹಾಕಬೇಕೆಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇದರ ನಡುವೆಯೂ ಭಾರತ ಹಾಗೂ ಪಾಕ್‌ ನಡುವಿನ ಹೈ ವೋಲ್ಟೇಜ್‌ ಪಂದ್ಯಕ್ಕೆ ಭಾರತ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌, ಭಾರತದ ವಿರುದ್ದ ಪಾಕಿಸ್ತಾನ ಎರಡೂ ಪಂದ್ಯಗಳನ್ನೂ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ʻಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆʼ: ಹ್ಯಾರಿಸ್‌ ರೌಫ್‌!

ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲಿದೆ ಎಂದ ಹ್ಯಾರಿಸ್‌ ರೌಫ್‌.

Profile Ramesh Kote Aug 26, 2025 8:47 PM

ನವದೆಹಲಿ: ಮುಂಬರುವ ಏಷ್ಯಾಕಪ್‌ (Asia Cup 2025) ಟೂರ್ನಿಯಲ್ಲಿ ಸೆಪ್ಟೆಂಬರ್‌ 14ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಸೂರ್ಯಕುಮಾರ್ ಯಾದವ್‌ ನಾಯಕತ್ವದ ಭಾರತ ತಂಡ ಹಾಗೂ ಪಾಕಿಸ್ತಾನ (IND vs PAK) ನಡುವೆ ಹೈವೋಲ್ಟೇಜ್‌ ಪಂದ್ಯಕ್ಕೆ ಭಾರತ ಸರ್ಕಾರ ಮತ್ತು ಬಿಸಿಸಿಐ ಗ್ರೀನ್‌ ಸಿಗ್ನಲ್‌ ನೀಡಿದೆ. ಇನ್ನೂ ಸೆಪ್ಟೆಂಬರ್‌ 9 ರಂದು ಪ್ರಾರಂಭವಾಗುವ ಈ ಟೂರ್ನಿಯಲ್ಲಿ ಮೆನ್‌ ಇನ್‌ ಬ್ಲೂ ತಂಡ ಸೆಪ್ಟೆಂಬರ್‌ 10ರಂದು ಅರಬ್‌ ಎಮಿರೇಟ್ಸ್‌ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದರೆ, ಸೆಪ್ಟೆಂಬರ್‌ 21ರಂದು ಸೂಪರ್‌-4 ಹಂತಗಳಲ್ಲಿ ಮತ್ತೆ ಮುಖಾಮುಖಿಯಾಗಲಿವೆ. ಇದರ ನಡುವೆ ಪಾಕ್‌ ವೇಗಿ ಹ್ಯಾರಿಸ್‌ ರೌಫ್‌ (Haris Rauf), ಟೂರ್ನಿ ಆರಂಭಕ್ಕೂ ಮುನ್ನ ಭಾರತದ ವಿರುದ್ದದ ಎರಡೂ ಪಂದ್ಯಗಳನ್ನು ಪಾಕಿಸ್ತಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಫೆಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಆಪರೇಷನ್‌ ಸಿಂಧೂರ್‌ ಬಳಿಕ, ಕ್ರಿಕೆಟ್‌ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾಕಿಸ್ತಾನವನ್ನು ಬಹಿಷ್ಕಾರ ಹಾಕಬೇಕೆಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಕಳೆದ ಕೆಲವು ದಿನಗಳಿಂದೆಯಷ್ಟೇ ವಿಶ್ವ ಚಾಂಪಿಯನ್‌ಶಿಪ್‌ ಆಪ್‌ ಲೆಜೆಂಡ್ಸ್‌ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ ಸೇರಿದಂತೆ ಎರಡು ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲು ನಿರಾಕರಿಸಿತ್ತು. ಶಿಖರ್ ಧವನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಸುರೇಶ್ ರೈನಾ ಮತ್ತು ಯೂಸುಫ್ ಪಠಾಣ್ ಅವರಂತಹ ದಿಗ್ಗಜರನ್ನು ಒಳಗೊಂಡ ಭಾರತೀಯ ತಂಡವು ಪಾಕ್‌ ವಿರುದ್ಧ ಆಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ನಂತರ ಏಷ್ಯಾಕಪ್‌ಗೂ ಕೂಡ ಭಾರತ ತಂಡ, ಪಾಕ್‌ ವಿರುದ್ಧ ಆಡಬಾರದೆಂದು ಹರ್ಭಜನ್‌ ಸಿಂಗ್‌ ಸೇರಿದಂತೆ ಹಲವು ಕ್ರಿಕೆಟ್‌ ದಿಗ್ಗಜರು ಆಗ್ರಹಿಸಿದ್ದಾರೆ.

IND vs PAK: ಬಿಸಿಸಿಐಗೆ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಪಾಕ್‌ ವಿರುದ್ಧದ ಪಂದ್ಯ ಮುಖ್ಯ; ಆದಿತ್ಯ ಠಾಕ್ರೆ

ಹ್ಯಾರಿಸ್‌ ರೌಫ್‌ ಆಡಿಯೋ ವೈರಲ್‌

ಈ ಕುರಿತು ಹ್ಯಾರಿಸ್‌ ರೌಫ್‌ ಆಡಿಯೋ ಇದೀಗ ವೈರಲ್‌ ಆಗಿದೆ. "ಎರಡು ಪಂದ್ಯಗಳು ನಮ್ಮದು, ಅಲ್ಹಾ ಇಚ್ಚಿಸುತ್ತಾನೆ," ಎಂದು ಭವಿಷ್ಯ ನುಡಿದಿದ್ದಾರೆ.

ಇಂಡೋ-ಪಾಕ್‌ ಪ್ರದರ್ಶನ

ಸೆಪ್ಟೆಂಬರ್‌ 28ರಂದು ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಎರಡೂ ತಂಡಗಳು ತಲುಪಿದರೆ, ಏಷ್ಯಾಕಪ್‌ ಟೂರ್ನಿಯಲ್ಲಿ ಇಂಡೋ-ಪಾಕ್‌ ನಡುವೆ 3 ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಟಿ20ಐ ಇತಿಹಾಸದಲ್ಲಿ ಭಾರತ ತಂಡ, ಪಾಕಿಸ್ತಾನದ ಮೇಲೆ ಸದಾ ಮೇಲುಗೈ ಸಾಧಿಸುತ್ತಲೇ ಬಂದಿದೆ. ಈವರೆಗೆ ಉಭಯ ತಂಡಗಳ ನಡುವೆ ನಡೆದಿರುವ ಹದಿಮೂರು ಪಂದ್ಯಗಳಲ್ಲಿ ಭಾರತ ಹತ್ತು ಪಂದ್ಯಗಳಲ್ಲಿ ಗೆದ್ದು ಬೀಗಿದೆ. 2022ರ ಏಷ್ಯಾ ಕಪ್‌ ಸೀಸನ್‌ನಲ್ಲಿ ಪಾಕಿಸ್ತಾನ, ಭಾರತದ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದಿತ್ತು.

ಭಾರತ-ಪಾಕಿಸ್ತಾನ ತಂಡಗಳು ಟೆಸ್ಟ್‌ ಕ್ರಿಕೆಟ್‌ ಆಡಬೇಕೆಂದ ವಸೀಮ್‌ ಅಕ್ರಮ್‌!

ಅಸಮಧಾನ ಹೊರಹಾಕಿದ್ದ ಹರ್ಭಜನ್‌ ಸಿಂಗ್‌

ಡಬ್ಲುಸಿಎಲ್ ಟೂರ್ನಿಯಲ್ಲಿ ಪಾಕ್‌ ವಿರುದ್ಧ ಆಡಲು ನಿರಾಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಕ್ರಿಕೆಟ್‌ ದಿಗ್ಗಜ ಹರ್ಭಜನ್‌ ಸಿಂಗ್‌, ಮುಂದೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಮುಂಬರುವ ಏಷ್ಯಾಕಪ್‌ನಲ್ಲೂ ಇದೇ ರೀತಿಯ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಸಾಂಪ್ರದಾಯಿಕ ಎದುರಾಳಿಗಳನ್ನು ಎದುರಿಸಲು ನಿರಾಕರಿಸಬೇಕು ಎಂದು ಹರ್ಭಜನ್ ಹೇಳಿದ್ದಾರೆ. 700 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿರುವ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, “ದೇಶದ ಮುಂದೆ ಕ್ರಿಕೆಟ್ ತುಂಬಾ ಚಿಕ್ಕ ವಿಷಯ,” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.



“ಅವರು ಯಾವುದು ಮುಖ್ಯ ಮತ್ತು ಯಾವುದು ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದು ತುಂಬಾ ಸರಳ. ನನಗೆ, ಗಡಿಯಲ್ಲಿ ನಿಂತು ಕೆಲವೊಮ್ಮೆ ಮನೆಗೆ ಮರಳಲೂ ಸಾಧ್ಯವಾಗದ ಸೈನಿಕರು ಹೆಚ್ಚು ಮುಖ್ಯ. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ. ಅವರ ತ್ಯಾಗ ನಮಗೆಲ್ಲರಿಗೂ ಬಹಳ ದೊಡ್ಡದು,” ಎಂದು ಹೇಳಿದ್ದರು.

ಬರಹ: ಕೆ. ಎನ್‌. ರಂಗು, ಚಿತ್ರದುರ್ಗ