ದುಬೈ: ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ದದ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ (India) ತಂಡ, 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಆದರೂ ಶುಕ್ರವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಸೂಪರ್-4ರ ಹಂತದ ಕೊನೆಯ ಪಂದ್ಯದಲ್ಲಿ (IND vs SL) ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ಶ್ರೀಲಂಕಾ ತಂಡದ ಎದುರು ಕಾದಾಟ ನಡೆಸಲು ಸಜ್ಜಾಗುತ್ತಿದೆ. ಈ ಪಂದ್ಯದ ಫಲತಾಂಶ ಭಾರತ ತಂಡಕ್ಕೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅಂದ ಹಾಗೆ ಭಾರತ ತಂಡ ಭಾನುವಾರ ನಡೆಯುವ ಫೈನಲ್ ಪಂದ್ಯಕ್ಕೆ ಶ್ರೀಲಂಕಾ ಎದುರು ಅಭ್ಯಾಸವನ್ನು ನಡೆಸುವ ಉದ್ದೇಶವನ್ನು ಹೊಂದಿದೆ.
ಭಾರತ ತಂಡ ಪ್ರಸ್ತುತ ನಡೆಯುತ್ತಿರುವ 20 ಓವರ್‌ಗಳ ಟೂರ್ನಿಯಲ್ಲಿ ಇನ್ನೋ ಒಂದೇ ಒಂದು ಪಂದ್ಯವನ್ನು ಕೂಡ ಸೋತಿಲ್ಲ. ಲೀಗ್‌ನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿದ್ದ ಟೀಮ್ ಇಂಡಿಯಾ, ಸೂಪರ್-4ರಲ್ಲಿಯೂ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ವಿರುದ್ದ ಸೂಪರ್-4ರ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಗೆದ್ದಿತ್ತು. ನಂತರ ಬುಧವಾರ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 41 ರನ್‌ಗಳಿಂದ ಗೆದ್ದಿತ್ತು. ಭಾರತ ತಂಡ, ಈ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮಯೋಜಿತ ಪ್ರದರ್ಶನವನ್ನು ತೋರಿತ್ತು.
IND vs BAN: ಬಾಂಗ್ಲಾದೇಶ ವಿರುದ್ಧ 41 ರನ್‌ಗಳಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಭಾರತ!
ಇನ್ನು ಶ್ರೀಲಂಕಾ ತಂಡ ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆದು ಸೂಪರ್-4ಕ್ಕೆ ಲಗ್ಗೆ ಇಟ್ಟಿತ್ತು. ಆದರೆ, ಸೂಪರ್-4ರಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಯಿತು. ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆದರೆ, ಬುಧವಾರ ಬಾಂಗ್ಲಾದೇಶ ಎದುರು ಭಾರತ ತಂಡ ಗೆಲುವು ಪಡೆದ ಬಳಿಕ ಶ್ರೀಲಂಕಾ ಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆಯಿತು. ಇದೀಗ ಭಾರತದ ವಿರುದ್ಧ ಗೆದ್ದು ಗೌರವದೊಂದಿಗೆ ನಿರ್ಗಮಿಸಲು ಮಾಜಿ ಚಾಂಪಿಯನ್ಸ್ ಎದುರು ನೋಡುತ್ತಿದ್ದಾರೆ.
ಪಂದ್ಯದ ವಿವರ
2025ರ ಏಷ್ಯಾ ಕಪ್: ಸೂಪರ್-4ರ ಪಂದ್ಯ
ಭಾರತ vs ಶ್ರೀಲಂಕಾ
ದಿನಾಂಕ: ಸೆಪ್ಟಂಬರ್ 26, 2025
ಸಮಯ: ರಾತ್ರಿ 08:00ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ, ದುಬೈ
ನೇರ ಪ್ರಸಾರ: ಸೋನಿ ನೆಟ್‌ವರ್ಕ್
ಲೈವ್ ಸ್ಟ್ರೀಮಿಂಗ್: ಸೋನಿ ಲಿವ್
Asia Cup: ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಕ್ರಮ ಜರುಗಿಸುವಂತೆ ಸುನೀಲ್ ಗವಾಸ್ಕರ್ ಆಗ್ರಹ!
ಪಿಚ್ ರಿಪೋರ್ಟ್
ಏಷ್ಯಾ ಕಪ್ ಟೂರ್ನಿಯ ಇತ್ತೀಚಿನ ಪಂದ್ಯಗಳನ್ನು ಗಮನಿಸಿದರೆ, ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿ ವರ್ತಿಸುತ್ತಿದೆ. ಈ ಮೈದಾನದಲ್ಲಿ ಪ್ರಥಮ ಇನಿಂಗ್ಸ್‌ನ ಸರಾಸರಿ ಮೊತ್ತ 144 ರನ್‌ಗಳು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಲಿದ್ದಾರೆ. ಲೀಟ್‌ಗಳ ಅಡಿಯಲ್ಲಿ ವೇಗದ ಬೌಲರ್‌ಗಳು ಚೆಂಡನ್ನು ಸ್ವಿಂಗ್ ಮಾಡಬಲ್ಲರು. ಭಾರತ ತಂಡ ಕೂಡ ದುಬೈನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ.
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 32
ಭಾರತದ ಗೆಲುವು: 21
ಶ್ರೀಲಂಕಾದ ಗೆಲುವು: 09
ಫಲಿತಾಂಶವಿಲ್ಲ: 01
ಟೈ: 01
IND vs BAN: ಅರ್ಧಶತಕ ಬಾರಿಸಿ ಯುವರಾಜ್ ಸಿಂಗ್ ದಾಖಲೆ ಮುರಿದ ಅಭಿಷೇಕ್ ಶರ್ಮಾ!
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ
ಶ್ರೀಲಂಕಾ: ಪಾತುಮ್ ನಿಸಾಂಕ, ಕುಸಾಲ್ ಮೆಂಡಿಸ್ (ವಿ.ಕೀ), ಕುಸಾಲ್ ಪೆರೇರಾ, ಚರಿತ್ ಅಸಲಂಕ (ನಾಯಕ), ದಸೂನ್ ಶಾನಕ, ಕಮಿಂದು ಮೆಂಡಿಸ್, ಚಮಿಕ ಕರುಣಾರತ್ನ, ವಾನಿಂದು ಹಸರಂಗ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ನುವಾನ್ ತುಷಾರ