ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಭಾರತ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ (Yashasvi Jaiswal) ಅವಕಾಶ ನೀಡದ ಬಗ್ಗೆ ಮಾಜಿ ಕ್ರಿಕೆಟಿಗ ಮದನ್ ಲಾಲ್ (Madan lal) ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಆದ ಕಾರಣ ಶುಭಮನ್ ಗಿಲ್ ಅವರ ಬದಲು ಜೈಸ್ವಾಲ್ ಆಯ್ಕೆಯಾಗಬೇಕಿತ್ತು. ಆದರೆ, ಇದು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಏಷ್ಯಾ ಕಪ್ ಭಾರತ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿದೆ. ಈ ಕಾರಣದಿಂದಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಕೈ ಬಿಡಲಾಗಿದೆ.
ಎಎನ್‌ಐ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಮದನ್ ಲಾಲ್, ಯಶಸ್ವಿ ಜೈಸ್ವಾಲ್ ಮ್ಯಾಚ್ ವಿನ್ನರ್ ಆಗಿದ್ದು, ಅವರನ್ನು ತಂಡದಿಂದ ಕೈ ಬಿಡಬಾರದಿತ್ತು. ಟಿ20ಐ ತಂಡಕ್ಕೆ ಶುಭಮನ್ ಗಿಲ್ ಅವರನ್ನು ಮರಳಿ ಕರೆ ತರಲಾಗಿದೆ. ಗಿಲ್ ಕಳೆದ ಆರು ತಿಂಗಳುಗಳಿಂದ ಭಾರತ ಟಿ20ಐ ತಂಡದಲ್ಲಿ ಆಡಿರಲಿಲ್ಲ. ಶುಭಮನ್ ಗಿಲ್‌ಗೆ ತಂಡದಲ್ಲಿ ಸ್ಥಾನ ನೀಡಿರುವುದರ ಜೊತೆಗೆ ಅವರಿಗೆ ಉಪ ನಾಯಕತ್ವವನ್ನು ನೀಡಲಾಗಿದೆ. ಇದರಿಂದಾಗಿ ಸಂಜು ಸ್ಯಾಮ್ಸನ್ ಅವರ ಆರಂಭಿಕ ಸ್ಥಾನಕ್ಕೆ ಕುತ್ತು ಬರವು ಸಾಧ್ಯತೆ ಇದೆ.
Asia Cup 2025: ಭಾರತ ತಂಡ ಕಳೆದುಕೊಂಡಿರುವ ಎಕ್ಸ್ ಫ್ಯಾಕ್ಟರ್ ಆಟಗಾರರನ್ನು ಹೆಸರಿಸಿದ ಹರ್ಭಜನ್ ಸಿಂಗ್!
"ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರ ತಂಡದಲ್ಲಿಲ್ಲ ಎಂದು ಕೆಲವೊಮ್ಮೆ ನಿಮಗೆ ಆಶ್ಚರ್ಯವಾಗುತ್ತದೆ. ಗಿಲ್ ಉತ್ತಮ ಆಯ್ಕೆ ಏಕೆಂದರೆ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಗಿಲ್ ಮೂರು ಸ್ವರೂಪಗಳಲ್ಲಿ ಆಡುವ ಸಾಧ್ಯತೆಯಿದೆ. ತಂಡವನ್ನು ಗೆಲ್ಲಿಸಬಲ್ಲ ಮ್ಯಾಚ್ ವಿನ್ನರ್ ಅನ್ನು ನೀವು ಎಂದಿಗೂ ಬಿಡಬಾರದು. ಏಷ್ಯಾ ಕಪ್ ಗೆಲ್ಲಲು ನಮಗೆ ಉತ್ತಮ ತಂಡವಿದೆ," ಎಂದು ಮದನ್ ಲಾಲ್ ಎಎನ್‌ಐಗೆ ತಿಳಿಸಿದ್ದಾರೆ.
ಯಶಸ್ವಿ ಜೈಸ್ವಾಲ್ 2024ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿ ಭಾರತ ಪರ ಟಿ20ಐ ಪಂದ್ಯವನ್ನು ಆಡಿದ್ದರು. ಆ ಪ್ರವಾಸದ ನಂತರ, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಆರಂಭಿಕ ಆಟಗಾರರ ಸ್ಥಾನ ನೀಡಲಾಗಿತ್ತು ಮತ್ತು ಗೌತಮ್ ಗಂಭೀರ್ ನೇತೃತ್ವದ ಟೀಮ್ ಮ್ಯಾನೇಜ್‌ಮೆಂಟ್ ಅಡಿಯಲ್ಲಿ ಜೈಸ್ವಾಲ್ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ.
Asia Cup hockey: ಹಾಕಿ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಹರ್ಮನ್‌ಪ್ರೀತ್‌ಗೆ ನಾಯಕತ್ವ
ಆದಾಗ್ಯೂ, ಯಶಸ್ವಿ ಜೈಸ್ವಾಲ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 160ರ ಸ್ಟ್ರೈಕ್ ರೇಟ್‌ನಲ್ಲಿ 559 ರನ್ ಗಳಿಸುವ ಮೂಲಕ ಬಲವಾಗಿ ಕಮ್‌ಬ್ಯಾಕ್ ಮಾಡಿದ್ದರು. ಇನ್ನು ಶುಭಮನ್ ಗಿಲ್ 2025ರ ಐಪಿಎಲ್ ಟೂರ್ನಿಯಲ್ಲಿ 156ರ ಸ್ಟ್ರೈಕ್ ರೇಟ್‌ನಲ್ಲಿ 650 ರನ್ ಗಳಿಸಿದ್ದರು. ಗಿಲ್ ಗುಜರಾತ್ ಟೈಟನ್ಸ್ ತಂಡವನ್ನು ಪ್ಲೇ-ಆಫ್ ಸ್ಥಾನಕ್ಕೆ ಮುನ್ನಡೆಸಿದ್ದರು ಮತ್ತು ಸಾಯಿ ಸುದರ್ಶನ್ ಅವರೊಂದಿಗೆ ಸಾಕಷ್ಟು ಮ್ಯಾಚ್ ವಿನ್ನಿಂಗ್ ಜೊತೆಯಾಟಗಳನ್ನು ಆಡಿದ್ದರು.