ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಸಂಜು ಸ್ಯಾಮ್ಸನ್‌ಗೆ ಎದುರಾಗಿರುವ ಅಪಾಯವನ್ನು ತಿಳಿಸಿದ ಮೊಹಮ್ಮದ್‌ ಕೈಫ್‌!

ಏಷ್ಯಾಕಪ್‌ ಭಾರತ ತಂಡದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಆರ್‌ಸಿಬಿ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌, ಸಂಜು ಸ್ಯಾಮ್ಸನ್‌ಗಿಂತಲೂ ಆರಂಭಿಕ ಸ್ಥಾನಕ್ಕೆ ಗಿಲ್‌ ಉತ್ತಮ ಎಂದಿದ್ದಾರೆ. ಗಿಲ್‌ ನಾಯಕತ್ವ ಗುಣಗಳ ಜೊತೆಗೆ ತಂಡದ ಪರ ಅದ್ಭುತ ಪ್ರದರ್ಶನ ತೋರುವ ವಿಶೇಷ ಸಾಮಾರ್ಥ್ಯವಿದೆ. ಹಾಗಾಗಿ ಸಂಜು ಸ್ಯಾಮ್ಸನ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ದೊರಕುವುದು ಅನುಮಾನ ಎಂದಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗುವುದು ಅನುಮಾನ ಎಂದ ಕೈಫ್‌.

ದುಬೈ: ಬಹುನಿರೀಕ್ಷಿತ 2025ರ ಏಷ್ಯಾ ಕಪ್‌ ಟೂರ್ನಿಗೆ ಅಜಿತ್‌ ಅಗರ್ಕರ್‌ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. 15 ಸದಸ್ಯರನ್ನೊಳಗೊಂಡಿರುವ ಈ ತಂಡದಲ್ಲಿ 7 ಮಂದಿ ಎಡಗೈ ಬ್ಯಾಟ್ಸ್‌ಮನ್‌ಗಳು ಇರುವುದು ವಿಶೇಷ. ಇನ್ನು ತಂಡದಲ್ಲಿ ಮೂರು ಜನ ಆರಂಭಿಕ ಆಟಗಾರರು ಇರುವುದರಿಂದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಯಾರು ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಇದರ ನಡುವೆ ಗಿಲ್‌ ತಂಡದ ಉಪನಾಯಕರಾಗಿರುವುದರಿಂದ ಅಭಿಷೇಕ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನವೆನ್ನಲಾಗುತ್ತಿದೆ. ಒಂದು ವೇಳೆ ಸಂಜುಗೆ ತಂಡದಲ್ಲಿ ಸ್ಥಾನ ಸಿಗದಿದ್ದರೆ ಅದು ದೊಡ್ಡ ಆಘಾತ ಎಂದು ಹಲವು ಕ್ರಿಕೆಟ್‌ ದಿಗ್ಗಜರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದರ ನಡುವೆ ಭಾರತದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌ ಕೂಡ ಸಂಜು ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. 2025ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಸಂಜು ಸ್ಯಾಮ್ಸನ್ ಆಡುವುದು ಅನುಮಾನ. ಶುಭ್‌ಮನ್‌ ಗಿಲ್‌ ಉಪನಾಯಕನ ಪಟ್ಟ ಅಲಂಕರಿಸಿರುವುದರಿಂದ ಅವರು ಆರಂಭಿಕರಾಗಿ ಕಣಕ್ಕಿಳಿಯುವುದು ಸ್ಪಷ್ಟವಾಗಿದೆ. ಆರಂಭಿಕರಾಗಿ ಅಭಿಷೇಕ್‌ ಶರ್ಮಾ, ಶುಭ್‌ಮನ್‌ ಗಿಲ್‌, ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ತಿಲಕ ವರ್ಮಾ ಮತ್ತು ನಾಯಕ ಸೂರ್ಯಕುಮಾರ್‌ ಯಾದವ್‌ ಆಡಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿ ಜಿತೇಶ್‌ ಶರ್ಮಾ ಅವರನ್ನು ಆಯ್ಕೆ ಸಮಿತಿ ಪರಿಗಣಿಸಬಹುದು. ಕಳೆದ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಿ ಜಿತೇಶ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

Asia Cup 2025: ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ ಸುನೀಲ್‌ ಗವಾಸ್ಕರ್‌!

ಮೊಹಮ್ಮದ್‌ ಕೈಫ್‌ ಹೇಳಿದ್ದೇನು?

ಈ ಕುರಿತು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಸುದೀರ್ಘವಾಗಿ ಮಾತನಾಡಿರುವ ಕೈಫ್‌, "ಸಂಜು ಸ್ಯಾಮ್ಸನ್ ಭಾರತದ ಪ್ಲೇಯಿಂಗ್‌ XIನಲ್ಲಿ ಸ್ಥಾನ ಕಠಿಣ ಎಂದು ನಾನು ಭಾವಿಸುತ್ತೇನೆ. ಅವರು ಹೇಳಿದಂತೆ, ತಂಡವು ಯುಎಇ ತಲುಪಿದಾಗ, ತಂಡಗಳು ಹೇಗೆ ಮತ್ತು ಆಟಗಾರರು ಹೇಗೆ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಅವರು ನೋಡುತ್ತಾರೆ. ಇದರ ಮೂಲಕ ಪ್ಲೇಯಿಂಗ್‌ XI ಅನ್ನು ರಚಿಸಲಾಗುತ್ತದೆ. ಸಂಜು ಸ್ಯಾಮ್ಸನ್ ಅಗ್ರ ನಾಲ್ಕರಲ್ಲಿ ಬರಲು ಸಾಧ್ಯವಾಗದಿದ್ದರೆ, ಗಿಲ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗುತ್ತಾರೆ ಎಂದು ನಾನು ಹೇಳಬಲ್ಲೆ. ತಿಲಕ್ ವರ್ಮಾ ನಂ. 3 ರಲ್ಲಿ ಆಡುತ್ತಾರೆ; ಅವರ ದಾಖಲೆ ಭಾರತಕ್ಕೆ ಅದ್ಭುತವಾಗಿದೆ. ಸೂರ್ಯಕುಮಾರ್ ಯಾದವ್ ನಂ. 4 ರಲ್ಲಿ ಬರುತ್ತಾರೆ," ಎಂದು ಹೇಳಿದ್ದಾರೆ.

"ನನ್ನ ಪ್ರಕಾರ ಸಂಜು ಸ್ಯಾಮ್ಸನ್ ಮೊದಲ ನಾಲ್ಕು ಸ್ಥಾನಗಳಲ್ಲಿ ಬರದಿದ್ದರೆ, ಜಿತೇಶ್ ಶರ್ಮಾ 5 ಅಥವಾ 6 ನೇ ಸ್ಥಾನದಲ್ಲಿ ವಿಶೇಷ ಆಟಗಾರ. ಅವರು 5 ಮತ್ತು 6 ನೇ ಸ್ಥಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಅವರು ಇತ್ತೀಚೆಗೆ ಆರ್‌ಸಿಬಿ ಟ್ರೋಫಿ ಗೆಲ್ಲಲು ಸಹಾಯ ಮಾಡಿದ್ದರು. ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್ ಹೊಂದಿದ್ದರು, ಆದ್ದರಿಂದ ಅವರು ಮುಂದುವರಿಯುತ್ತಾರೆ ಏಕೆಂದರೆ ಗಿಲ್ ಉಪನಾಯಕನಾಗುವುದು ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕನಾಗಿ ಆಡುವುದು ಸಂಜು ಸ್ಯಾಮ್ಸನ್‌ಗೆ ಎಚ್ಚರಿಕೆಯ ಸೂಚನೆಯಾಗಿದೆ. ಅವರಿಗೆ ಪ್ಲೇಯಿಂಗ್‌ XI ನಲ್ಲಿ ಅವಕಾಶ ಸಿಗದಿರಬಹುದು. ಅವರು ಸೋಲನ್ನು ಅನುಭವಿಸಿದರು," ಎಂದು ಅವರು ತಿಳಿಸಿದ್ದಾರೆ.

Asia Cup 2025: ಶುಭಮನ್‌ ಗಿಲ್‌ ಆಗಮನದಿಂದ ಸೂರ್ಯಕುಮಾರ್‌ ಯಾದವ್‌ಗೆ ಆತಂಕ! ಏಕೆ ಗೊತ್ತೆ?

ಶುಭಮನ್‌ ಗಿಲ್‌ಗೆ ಕೈಫ್‌ ಮೆಚ್ಚುಗೆ

"ಗಿಲ್‌ ಅವರನ್ನು ಉಪನಾಯಕನನ್ನಾಗಿ ಏಕೆ ಮಾಡಲಾಯಿತು? ಅವರಿಗೆ ನಾಯಕತ್ವದ ಗುಣಗಳಿರುವುದರಿಂದ. ಇಂಗ್ಲೆಂಡ್‌ನಲ್ಲಿ ಅವರು ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು, ಸರಣಿಯನ್ನು 2-2 ರಲ್ಲಿ ಸಮಬಲ ಮಾಡಿಕೊಂಡಿದ್ದರು ಎಂದು ನಾವು ನೋಡಿದ್ದೇವೆ. ಅವರು ಬ್ಯಾಟಿಂಗ್‌ನಲ್ಲಿ ರನ್ ಗಳಿಸಿದರು. ಆಯ್ಕೆದಾರರು, ವಿಶೇಷವಾಗಿ ಅಜಿತ್ ಅಗರ್ಕರ್ ಒಮ್ಮೆ ಡ್ರೆಸ್ಸಿಂಗ್ ಕೋಣೆಗೆ ಹೋಗಿ ಗಿಲ್ ಗುಜರಾತ್ ತಂಡವನ್ನು ಹೇಗೆ ಮುನ್ನಡೆಸುತ್ತಿದ್ದಾರೆ ಎಂಬುದರ ಕುರಿತು ಆಟಗಾರರೊಂದಿಗೆ ಮಾತನಾಡುತ್ತಾರೆ. ಅಲ್ಲಿ ಗಿಲ್ ಗುಜರಾತ್ ಟೈಟನ್ಸ್‌ನೊಂದಿಗೆ ಕೆಲಸ ಮಾಡಿದ ರೀತಿ ಉತ್ತಮವಾಗಿತ್ತು. ಎಲ್ಲರೂ ಅವರನ್ನು ಹೊಗಳಿದರು. ನಾಯಕ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ," ಎಂದು ಶ್ಲಾಘಿಸಿದ್ದಾರೆ.

Asia Cup 2025: ಭಾರತ ತಂಡ ಕಳೆದುಕೊಂಡಿರುವ ಎಕ್ಸ್‌ ಫ್ಯಾಕ್ಟರ್‌ ಆಟಗಾರರನ್ನು ಹೆಸರಿಸಿದ ಹರ್ಭಜನ್‌ ಸಿಂಗ್‌!

"ಪ್ಲೇಯಿಂಗ್‌ XI ಯಾವ ರೀತಿ ಇರುತ್ತದೆ? ಯಾರು, ಯಾವಾಗ ಬೌಲಿಂಗ್ ಮಾಡುತ್ತಾರೆ ಮತ್ತು ಅವರು ಯುದ್ಧತಂತ್ರದಿಂದಲೂ ಉತ್ತಮವಾಗಿ ಕಾಣುತ್ತಿದ್ದರು. ಇದು ಅಗರ್ಕರ್ ಅವರ ದೃಷ್ಟಿಕೋನವಾಗಿತ್ತು ಮತ್ತು ಅದರ ನಂತರ, ಟೆಸ್ಟ್ ಪಂದ್ಯಕ್ಕಾಗಿ ತಂಡವನ್ನು ರಚಿಸಲಾಯಿತು. ಗಿಲ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ನಾಯಕರನ್ನಾಗಿ ಮಾಡಲಾಯಿತು ಮತ್ತು ಇದು ಶ್ಲಾಘನೀಯ. ಏಕೆಂದರೆ ನಾನು ಅವರನ್ನು ಐಪಿಎಲ್‌ನಲ್ಲಿ ಹತ್ತಿರದಿಂದ ನೋಡಿದ್ದೇನೆ."

"ಅವರು ಅದ್ಭುತವಾಗಿ ತಂಡವನ್ನು ಮುನ್ನಡೆಸಿದರು ಮತ್ತು ಅವರ ಬ್ಯಾಟಿಂಗ್ ಎಂದಿಗೂ ನಿಲ್ಲುವುದಿಲ್ಲ. ಕಳೆದ ಮೂರು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಅವರ ಪ್ರದರ್ಶನವನ್ನು ನೋಡಿದರೆ, ಅವರು ಸುಮಾರು 2000 ರನ್‌ಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 150 ರಷ್ಟಿದೆ. ಆದ್ದರಿಂದ, ಯಾವುದೇ ಕ್ಷೇತ್ರದಲ್ಲಿ ಯಾವುದೇ ಕೊರತೆಯಿಲ್ಲ. ನೋಡಿ, ಆಯ್ಕೆದಾರರು ಯಾವಾಗಲೂ ಐಪಿಎಲ್‌ನ ಪ್ರದರ್ಶನವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ," ಎಂದು ಕೈಫ್ ಶ್ಲಾಘಿಸಿದ್ದಾರೆ.

ಬರಹ: ಕೆ. ಎನ್.‌ ರಂಗು, ಚಿತ್ರದುರ್ಗ