ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs ENG: ಟ್ರಾವಿಸ್ ಹೆಡ್ ಶತಕ: ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ!

ಟ್ರಾವಿಸ್ ಹೆಡ್ ಅವರ ಸ್ಪೋಟಕ ಶತಕದ ನೆರವಿನಿಂದಾಗಿ ಆಸ್ಟ್ರೇಲಿಯಾ ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಗೆದ್ದು ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ ಮಿಚೆಲ್‌ ಸ್ಟಾರ್ಕ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟ್ರಾವಿಸ್‌ ಹೆಡ್‌ ಭರ್ಜರಿ ಶತಕ, ಇಂಗ್ಲೆಂಡ್‌ಗೆ ಶಾಕ್‌ ನೀಡಿದ ಆಸೀಸ್‌!

ಶತಕ ಸಿಡಿಸ ಡೇವಿಡ್‌ ವಾರ್ನರ್‌ ದಾಖಲೆ ಮುರಿದ ಟ್ರಾವಿಸ್‌ ಹೆಡ್‌. -

Profile
Ramesh Kote Nov 22, 2025 11:44 PM

ಪರ್ತ್: ಇಂಗ್ಲೆಂಡ್ ವಿರುದ್ಧ ಆಶಸ್ ಸರಣಿಯ (Ashes) ಮೊದಲ ಪಂದ್ಯದಲ್ಲಿ (AUS vs ENG) ಆಸ್ಟ್ರೇಲಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ಪಂದ್ಯ ಸೋಲುವ ಮೂಲಕ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸುತ್ತಿದೆ. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್​ 12.5 ಓವರ್​ಗಳಲ್ಲಿ 58 ರನ್ ನೀಡಿ 7 ವಿಕೆಟ್ ಪಡೆದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ್ದ 205 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ಟ್ರಾವಿಸ್‌ ಹೆಡ್‌ (Travis Head) ಶತಕದ ಬಲದಿಂದ ಗೆದ್ದು ಬೀಗಿತು.

ಇಲ್ಲಿಮ ಪರ್ತ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ 205 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾಗೆ ಆರಂಭಿಕರಾಗಿ ಬಡ್ತಿ ಪಡೆದು ಕಣಕ್ಕಿಳಿದ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಹೆಡ್ ಕೇವಲ 69 ಎಸೆತಗಳಲ್ಲಿ ಶತಕ ಪೂರೈಸಿದರು. ಬಳಿಕವೂ ಅಬ್ಬರದ ಬ್ಯಾಟಿಂಗ್ ಮುಂದುವರಿಸಿ 83 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ 123 ರನ್ ಬಾರಿಸಿ ತಂಡವನ್ನು 28.2 ಓವರ್ ಗಳಲ್ಲೇ ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ENG vs AUS: ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್‌ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ!

ಡೇವಿಡ್ ವಾರ್ನರ್ ದಾಖಲೆ ಸರಿಗಟ್ಟಿದ ಟ್ರಾವಿಸ್ ಹೆಡ್

ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಆರಂಭಿಕಾರಾಗಿ ಮೈದಾನಕ್ಕೆ ಬ್ಯಾಟ್ ಬೀಸಲು ಬಂದ ಟ್ರಾವಿಸ್ ಹೆಡ್ ಸಿಡಿಲಬ್ಬರದ ಶತಕ ಸಿಡಿಸಿದರು. ಇದು ಆಸ್ಟ್ರೇಲಿಯಾದ ಪರ ಟೆಸ್ಟ್ ಇತಿಹಾಸದಲ್ಲಿ ಜಂಟಿಯಾಗಿ ಬಾರಿಸಿದ ಮೂರನೇ ಅತಿ ವೇಗದ ಶತಕವಾಗಿದೆ. 2006 ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಮ್ ಗಿಲ್‌ಕ್ರಿಸ್ಟ್ ಅವರ 57 ಎಸೆತಗಳಲ್ಲಿ ಶತಕ, 1921 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಜ್ಯಾಕ್ ಗ್ರೆಗೊರಿ ಅವರ 67 ಎಸೆತಗಳಲ್ಲಿ ಶತಕ ಮತ್ತು 2012 ರಲ್ಲಿ ಡಬ್ಲ್ಯುಎಸಿಎಯಲ್ಲಿ ಮತ್ತೊಮ್ಮೆ ಭಾರತದ ವಿರುದ್ಧ ಡೇವಿಡ್ ವಾರ್ನರ್ ಅವರ 69 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಇದೀಗ ಅವರ ದಾಖಲೆಯನ್ನು ಟ್ರಾವಿಸ್ ಹೆಡ್ ಸರಿಗಟ್ಟಿದ್ದಾರೆ.

ಆಸೀಸ್ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ಬ್ಯಾಟ್ಸ್ ಮನ್

ಪ್ಯಾಟ್ ಕಮಿನ್ಸ್‌ ಅಲಭ್ಯತೆಯ ನಡುವೆ ಬೌಲಿಂಗ್ ಮಾಡಿದ ಮಿಚೆಲ್ ಸ್ಟಾರ್ಕ್ ಆಶಸ್‌ನಲ್ಲಿ 10 ವಿಕೆಟ್ ಪಡೆದ ಮೊದಲ ಆಸೀಸ್ ಬೌಲರ್ ಎನಿಸಿಕೊಂಡರು. ಎರಡನೇ ಇನಿಂಗ್ಸ್‌ನಲ್ಲಿ ಸ್ಕಾಟ್ ಬೋಲೆಂಡ್‌ 4 ವಿಕೆಟ್‌ಗಳೊಂದಿಗೆ ಪಡೆಯುವ ಮೂಲಕ ಅವರಿಗೆ ಉತ್ತಮ ಸಾಥ್ ನೀಡಿದರು. ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್‌ಗಳನ್ನು ಪಡೆದ ಬೌಲರ್ ಬ್ರೆಂಡನ್ ಡಗೆಟ್ ಕೂಡ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.



ಪ್ರಥಮ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತ ಕಲೆ ಹಾಕಿದ್ದ ಆಸೀಸ್‌

ಪ್ರಥಮ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 172 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಕೂಡ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ವಿಫಲವಾಯಿತು. ಬ್ರೈಡನ್ ಕಾರ್ಸ್ ಹಾಗೂ ಬೆನ್ ಸ್ಟೋಕ್ಸ್ ದಾಳಿಗೆ ತತ್ತರಿಸಿದ ಆಸೀಸ್ ಬ್ಯಾಟಿಂಗ್ ಪಡೆ ಕೇವಲ 132 ರನ್​ಗಳಿಸಿ ಆಲೌಟ್ ಆಗಿ ಇನಿಂಗ್ಸ್ ಕೊನೆಗೂಳಿಸಿತು. ಈ ಮೂಲಕ ಪಂದ್ಯದಲ್ಲಿ 40 ರನ್​ಗಳ ಮುನ್ನಡೆ ಪಡೆದ ಇಂಗ್ಲೆಂಡ್ ತಂಡದ ಬ್ಯಾಟರ್ ಗಳು ಆಸೀಸ್ ಬೌಲರ್ ಗಳ ಎದುರು ತನ್ನ ದ್ವಿತೀಯ ಇನಿಂಗ್ಸ್​ ನಲ್ಲಿ ಕೇವಲ 164 ರನ್​ ಗಳಿಸಲಷ್ಟೇ ಶಕ್ತವಾದರು. ಆ ಮೂಲಕ ಆಸ್ಟ್ರೇಲಿಯಾಗೆ 205 ರನ್‌ಗಳ ಗುರಿಯನ್ನು ನೀಡಿತು.