ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನೀವು ಒಂಟಿಯಲ್ಲ, ನಿಮ್ಮ ಜೊತೆ ನಾವಿದ್ದೇವೆʼ-ರಿಂಕು ಸಿಂಗ್‌ಗೆ ಧೈರ್ಯ ತುಂಬಿದ ಕೋಚ್‌ ಗಂಭೀರ್‌!

ತಮ್ಮ ತಂದೆ ಸಾವಿನ ನಂತರ ಭಾರತ ಕ್ರಿಕೆಟ್‌ ತಂಡಕ್ಕೆ ಮರಳಿದ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ಗೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ, ನೀವು ಒಂಟಿಯಲ್ಲ, ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ ಎಂದು ಬಲಗೈ ಬ್ಯಾಟ್ಸ್‌ಮನ್‌ ಕೋಚ್‌ ಧೈರ್ಯ ತುಂಬಿದ್ದಾರೆ.

ರಿಂಕು ಸಿಂಗ್‌ಗೆ ಧೈರ್ಯ ತುಂಬಿದ ಕೋಚ್‌ ಗೌತಮ್‌ ಗಂಭೀರ್‌!

ರಿಂಕು ಸಿಂಗ್‌ ತೋರಿದ ಧೈರ್ಯವನ್ನು ಶ್ಲಾಘಿಸಿದ ಗೌತಮ್‌ ಗಂಭೀರ್‌. -

Profile
Ramesh Kote Mar 3, 2026 9:01 PM

ನವದಹೆಲಿ: ತಮ್ಮ ತಂದೆಯ ಸಾವಿನ ನೋವಿನ ಹೊರತಾಗಿಯೂ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಭಾರತ ತಂಡಕ್ಕೆ ಮರಳಿದ ಯುವ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ (Rinku Singh) ಅವರನ್ನು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅವರು ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ರಿಂಕು ಸಿಂಗ್‌ ಭಾರತ ತಂಡಕ್ಕೆ ಮರಳಿದ್ದರು. ಆ ಮೂಲಕ ಅವರು ಮಚ್ಚುಗೆಗೆ ಪಾತ್ರರಾಗಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಸಂಜು ಸ್ಯಾಮ್ಸನ್‌ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು ಹಾಗೂ ಸೆಮಿಫೈನಲ್‌ಗೆ ಪ್ರವೇಶ ಮಾಡಿತ್ತು.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ರಿಂಕು ಸಿಂಗ್‌ ಅವರು ತಂದೆ ಖಾನ್‌ಚಂದ್ರ ಸಿಂಗ್‌ ಅವರು ಕರಳು ಕ್ಯಾನ್ಸರ್‌ನಿಂದ ಗ್ರೇಟರ್‌ ನೋಯ್ಡಾದ ಯಾಥಾರ್ಥ್‌ ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ಅವರ ಆರೋಗ್ಯ ಸ್ಥಿತಿ ಬಹಳಾ ಗಂಭೀರವಾಗಿತ್ತು. ಈ ವಿಷಯ ತಿಳಿದ ರಿಂಕು ಸಿಂಗ್‌ ಅವರು ಜಿಂಬಾಬ್ವೆ ವಿರುದ್ಧದ ಪಂದ್ಯವನ್ನು ತೊರೆದು ಆಸ್ಪತ್ರೆಗೆ ತೆರಳಿದ್ದರು. ಆದರೆ, ಅವರ ತಂದೆ ಫೆಬ್ರವರಿ 27 ರಂದು ಕೊನೆಯುಸಿರೆಳೆದಿದ್ದರು. ನಂತರ ಅವರು ಅಲಿಗಢದಲ್ಲಿ ತಮ್ಮ ತಂದೆಯ ವಿಧಿ ವಿಧಾನಗಳನ್ನು ಮುಗಿಸಿ ಪುನಃ ಚೆನ್ನೈನಲ್ಲಿದ್ದ ತಂಡವನ್ನು ಸೇರಿಕೊಂಡಿದ್ದರು.

IND vs ENG: ಔಟ್‌ ಅಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾಗೆ ಮನೋಜ್‌ ತಿವಾರಿ ಮಹತ್ವದ ಸಲಹೆ!

ನೀವು ಒಂಟಿಯಲ್ಲಿ: ಗಂಭೀರ್‌

ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆ ಗೌತಮ್‌ ಗಂಭೀರ್‌, ರಿಂಕು ಸಿಂಗ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದರು. ಅಲ್ಲದೆ 28ರ ಪ್ರಾಯದ ಆಟಗಾರನ ಧೈರ್ಯವನ್ನು ವಿಶೇಷವಾಗಿ ಉಲ್ಲೇಖಿಸಿದರು.

"ನಾನು ಸುದ್ದಿಗೋಷ್ಠಿಯನ್ನು ಆರಂಭಿಸುವುದಕ್ಕೂ ಮುನ್ನ ರಿಂಕು ಸಿಂಗ್‌ ಅವರ ಮನಸ್ಥಿತಿ ಬಗ್ಗೆ ಉಲ್ಲೇಖ ಮಾಡಬೇಕಾಗಿದೆ. ಅವರು ತಂಡಕ್ಕೆ ಮರಳಿರುವುದು ನಿಜಕ್ಕೂ ಅದ್ಭುತ. ನೀವು ಒಂದು ಅಂಶವನ್ನು ಸದಾ ನೆನಪಿಡಿ: ನೀವು ಒಂಟಿಯಲ್ಲ. ಇಡೀ ತಂಡವೇ ನಿಮ್ಮ ಬಳಿ ನಿಂತಿರುತ್ತದೆ, ಹಾಗಾಗಿ ನೀವು ಧೈರ್ಯವಾಗಿರಿ,"ಎಂದು ಗೌತಮ್‌ ಗಂಭೀರ್‌ ತಿಳಿಸಿದ್ದಾರೆ.

ಆಟಗಾರರಿಗೆ ಸಲಹೆ ನೀಡಿದ ಗಂಭೀರ್‌

“ಹುಡುಗರೇ, ಮುಂದಿನ ಪಂದ್ಯಗಳಲ್ಲಿ ಒತ್ತಡ ಬರಲಿದೆ. ಒಂದು ಸಂಗತಿ ಸ್ಪಷ್ಟವಾಗಿದೆ: ನಾವು ಒತ್ತಡದಿಂದ ತಪ್ಪಿಸಿಕೊಳ್ಳಬಾರದು. ಅದನ್ನು ಸ್ವೀಕರಿಸಬೇಕು, ಎದುರಿಸಬೇಕು ಮತ್ತು ಯಾವುದೇ ಸಮಯದಲ್ಲಿ ನಾವು ಒತ್ತಡದಲ್ಲಿದ್ದೇವೆಂದು ಅನಿಸಿದರೆ, ಸಕಾರಾತ್ಮಕ ಮಾರ್ಗವನ್ನು ತೆಗೆದುಕೊಳ್ಳಬೇಕು,” ಎಂದು ಗೌತಮ್‌ ಗಂಭೀರ್‌ ತನ್ನ ಆಟಗಾರರಿಗೆ ಕಿವಿ ಮಾತು ಹೇಳಿದರು.

IND vs ENG: ಪವರ್‌ಪ್ಲೇನಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ಬೌಲಿಂಗ್‌ ಕೊಡಿ ಎಂದ ಸುನೀಲ್‌ ಗವಾಸ್ಕರ್‌!

"ಈ ಪಂದ್ಯ ಆಡುವುದನ್ನು ಆನಂದಿಸಿ, ಈ ರೀತಿ ನೀವು ಪಂದ್ಯವನ್ನು ಆಡಬೇಕಾಗುತ್ತದೆ, ಇದು ಕ್ರೀಡೆ, ನಿಮ್ಮ ಜೀವನಕ್ಕಾಗಿ ನೀವು ಈ ವಿಧಾನದಲ್ಲಿ ಆಡಬೇಕು. ತವರು ಅಂಗಣದಲ್ಲಿ ಈ ಪಂದ್ಯವಾಗಿದೆ, ಇದು ನಾಕ್‌ಔಟ್‌ ಪಂದ್ಯ, ಇದರ ಬಗ್ಗೆ ನೀವು ಉತ್ಸುಕರಾಗಿದ್ದೇವೆಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಒತ್ತಡವನ್ನು ತೆಗೆದುಕೊಳ್ಳಬೇಡಿ," ಎಂದು ಹೆಡ್‌ ಕೋಚ್‌ ತಿಳಿಸಿದ್ದಾರೆ.

“ಮುಂದಿನ 40 ಗಂಟೆಗಳ ಯಾವುದೇ ಸಮಯದಲ್ಲಿ ನಿಮಗೆ ಒತ್ತಡವಾಗುತ್ತಿದೆ ಎಂದು ಅನಿಸಿದರೆ, ನಾವು ಸಕಾರಾತ್ಮಕ ಮಾರ್ಗವನ್ನು ಅನುಸರಿಸಬೇಕು. ಓಕೆ, ಧೈರ್ಯವಾಗಿರಿ, ಸಾಹಸಿಯಾಗಿರಿ. ಆಟವನ್ನು ಆನಂದಿಸಿ. ದೇಶಕ್ಕಾಗಿ ಆಡುತ್ತಿರುವುದನ್ನು ಆನಂದಿಸಿ ಮತ್ತು ಅತ್ಯಂತ ಮುಖ್ಯವಾಗಿ ಪರಸ್ಪರ ಒಬ್ಬರಿಗೊಬ್ಬರು ಆಡುತ್ತಿರುವುದನ್ನು ಆನಂದಿಸಿ,” ಎಂದು ಗೌತಮ್‌ ಗಂಭೀರ್‌ ಹೇಳಿದರು.