ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಮೊದಲನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ!

Aakash Chopra Picks India's Playing XI: ಆಸ್ಟ್ರೇಲಿಯಾ ವಿರುದ್ದದ ಮೊದಲನೇ ಟಿ20ಐ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಆಯ್ಕೆ ಮಾಡಿದ್ದಾರೆ. ಆದರೆ, ಕುಲ್ದೀಪ್‌ ಯಾದವ್‌ ಹಾಗೂ ಅಕ್ಷರ್‌ ಪಟೇಲ್‌ ಅವರನ್ನು ಆಯ್ಕೆ ಮಾಡುವ ವೇಳೆ ಚೋಪ್ರಾ ಗೊಂದಲಕ್ಕೆ ಒಳಗಾಗಿದ್ದಾರೆ.

ಮೊದಲನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ!

ಮೊದಲನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ! -

Profile Ramesh Kote Oct 28, 2025 11:08 PM

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಟಿ20ಐ ಪಂದ್ಯಕ್ಕೆ (IND vs AUS) ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಆಕಾಶ್‌ ಚೋಪ್ರಾ (Aakash Chopra) ಭಾರತ ತಂಡದ ತಮ್ಮ ನೆಚ್ಚಿನ ಪ್ಲೇಯಿಂಗ್‌ XI ಅನ್ನು (India's Playing XI) ಆಯ್ಕೆ ಮಾಡಿದ್ದಾರೆ. ನಾಳೆಯಿಂದ (ಅಕ್ಟೋಬರ್‌ 29) ಉಭಯ ತಂಡಗಳ ನಡುವಣ ಐದು ಪಂದ್ಯಗಳ ಟಿ20ಐ ಸರಣಿ ಆರಂಭವಾಗಲಿದೆ. ಮೊದಲನೇ ಟಿ20ಐ ಪಂದ್ಯ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡಕ್ಕೆ ಸಜ್ಜಾಗುತ್ತಿದೆ.

ಆಕಾಶ್‌ ಚೋಪ್ರಾ ಅವರು ಭಾರತ ತಂಡದ ಆರಂಭಿಕ ಸ್ಥಾನಕ್ಕೆ ಅಭಿಷೇಕ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಅವರನ್ನು ಆಯ್ಕೆ ಮಾಡಿದ್ದಾರೆ. ನಂತರ ಮೂರನೇ ಕ್ರಮಾಂಕಕ್ಕೆ ತಿಲಕ್‌ ವರ್ಮಾ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ನಾಯಕ ಸೂರ್ಯಕುಮಾರ್‌ ಯಾದವ್‌ ಅವರನ್ನು ಆರಿಸಲಾಗಿದೆ. ಸಂಜು ಸ್ಯಾಮ್ಸನ್‌ ಅವರನ್ನು ವಿಕೆಟ್‌ ಕೀಪರ್‌ ಆಗಿ ಆಯ್ಕೆ ಮಾಡಿದರೆ, ಶಿವಂ ದುಬೆ ಅವರನ್ನು ಆಲ್‌ರೌಂಡರ್‌ ಆಗಿ ಆಯ್ಕೆ ಮಾಡಲಾಗಿದೆ. ಆದರೆ, ಸ್ಪಿನ್ನರ್‌ ಅನ್ನು ಆಯ್ಕೆ ಮಾಡುವಾಗ ಆಕಾಶ್‌ ಚೋಪ್ರಾ ಗೊಂದಲಕ್ಕೆ ಒಳಗಾಗಿದ್ದಾರೆ.

AUS vs IND 1st T20I: ಆಸೀಸ್‌ ಎದುರಿನ ಮೊದಲ ಟಿ20ಗೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ

ಅಕ್ಷರ್‌-ಕುಲ್ದೀಪ್‌ ಬಗ್ಗೆ ಚೋಪ್ರಾ ಗೊಂದಲ

"ಅವರು(ಭಾರತ) ನಿತೀಶ್ ಕುಮಾರ್ ರೆಡ್ಡಿ ಅವರನ್ನು 7ನೇ ಸ್ಥಾನದಲ್ಲಿ ಆಡಲು ಬಯಸುತ್ತಾರೆ ಏಕೆಂದರೆ ಆಗ ಮಾತ್ರ ನೀವು ಅಕ್ಷರ್ ಪಟೇಲ್ ಅವರನ್ನು 8ನೇ ಸ್ಥಾನದಲ್ಲಿ ಇರಿಸಬಹುದು. ನೀವು ಕುಲ್ದೀಪ್ ಮತ್ತು ವರುಣ್ ಅವರನ್ನು ಒಟ್ಟಿಗೆ ಆಡಲು ಬಯಸಿದರೆ, ಅಕ್ಷರ್ ಆಡಲು ಸಾಧ್ಯವಾಗುವುದಿಲ್ಲ. ನೀವು ಅಕ್ಷರ್ ಅವರನ್ನು ಹೊರಗೆ ಕುಳಿತುಕೊಳ್ಳುವಂತೆ ಮಾಡಬೇಕು ಅಥವಾ ಅಕ್ಷರ್ ಅವರನ್ನು 7ನೇ ಸ್ಥಾನದಲ್ಲಿ ಆಡಲು ಒತ್ತಾಯಿಸಬೇಕು. 7ನೇ ಸಂಖ್ಯೆ ಸ್ವಲ್ಪ ಹೆಚ್ಚು ಇರಬಹುದು," ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊದಲ್ಲಿ ಹೇಳಿದ್ದಾರೆ.

ಹರ್ಷಿತ್‌ ರಾಣಾ 8ನೇ ಸ್ಥಾನಕ್ಕೆ

ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ, ಹರ್ಷಿತ್ ರಾಣಾ ಕ್ಯಾನ್‌ಬೆರಾದಲ್ಲಿ ನಡೆಯಲಿರುವ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ, ಆದರೆ ಅಕ್ಷರ್ ಪಟೇಲ್ ಅಥವಾ ಕುಲ್ದೀಪ್ ಯಾದವ್ ತಂಡಕ್ಕೆ ಹೊಂದಿಕೊಳ್ಳದಿದ್ದರೆ ಮಾತ್ರ ಅವರನ್ನು ಆಡಿಸಲಾಗುವುದು ಎಂದು ಹೇಳಿದರು. ವರುಣ್ ಚಕ್ರವರ್ತಿಯನ್ನು ಚೋಪ್ರಾ ವಿಶೇಷ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡರು, ಆದರೆ ಮಾರಕ ವೇಗದ ಜೋಡಿ ಅರ್ಷದೀಪ್ ಸಿಂಗ್ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರೊಂದಿಗೆ ಆಯ್ಕೆ ಮಾಡಿದರು.

IND vs AUS: ಶ್ರೇಯಸ್ ಅಯ್ಯರ್ ಆರೋಗ್ಯದಲ್ಲಿ ಸುಧಾರಣೆ, ಐಸಿಯುನಿಂದ ವಾರ್ಡ್‌ಗೆ ಶಿಫ್ಟ್!

"7ನೇ ಸ್ಥಾನದಲ್ಲಿ ಅಕ್ಷರ್ ಪಟೇಲ್ ಮತ್ತು 8ನೇ ಸ್ಥಾನದಿಂದ 11ನೇ ಸ್ಥಾನದವರೆಗಿನ ನಾಲ್ಕು ಬೌಲರ್‌ಗಳು ಇರುವುದು ನನಗೆ ಸ್ವಲ್ಪ ಕಷ್ಟಕರವೆನಿಸುತ್ತದೆ. ಆದ್ದರಿಂದ ಅಕ್ಷರ್/ಕುಲ್ದೀಪ್/ಹರ್ಷಿತ್ ರಾಣಾ- ಹರ್ಷಿತ್ ನಿಮ್ಮ 8ನೇ ಸ್ಥಾನದವರಾಗಿರಬಹುದು, ಆದರೂ ಅದು ಖಚಿತವಿಲ್ಲ. ವರುಣ್ ಚಕ್ರವರ್ತಿ ನನ್ನ ಪ್ರಾಥಮಿಕ ಸ್ಪಿನ್ನರ್ ಆಗಿರುತ್ತಾರೆ. ಜಸ್‌ಪ್ರೀತ್‌ ಬುಮ್ರಾ ಮತ್ತು ಅರ್ಷದೀಪ್‌ ಸಿಂಗ್ ಆಡುವುದನ್ನು ನಾನು ಖಂಡಿತವಾಗಿಯೂ ನೋಡುತ್ತೇನೆ. ಕುಲ್ದೀಪ್‌ಗೆ ಸ್ಥಾನ ಸಿಗಬಹುದು ಅಥವಾ ಸಿಗದೇ ಇರಬಹುದು, ನನಗೆ ಗೊತ್ತಿಲ್ಲ," ಎಂದು ಆಕಾಶ್‌ ಚೋಪ್ರಾ ಹೇಳಿದರು.

ಆಕಾಶ್‌ ಚೋಪ್ರಾ ಆರಿಸಿದ ಭಾರತದ ಪ್ಲೇಯಿಂಗ್‌ XI: ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್/ಅಕ್ಷರ್ ಪಟೇಲ್/ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್ ಸಿಂಗ್