ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಸ್ಟ್ರೇಲಿಯಾ ಒಡಿಐ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ, ಲುಂಗಿ ಎನ್ಗಿಡಿಗೆ ಗಾಯ!

ಗಾಯದಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಹಿರಿಯ ವೇಗಿ ಲುಂಗಿ ಎನ್ಗಿಡಿ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಅವರ ಬದಲು ದಕ್ಷಿಣ ಆಫ್ರಿಕಾ ಏಕದಿನ ತಂಡಕ್ಕೆ ಎನ್‌ಕೋಬಾನಿ ಮೊಕೊಯೆನಾ ಸೇರ್ಪಡೆಯಾಗಿದ್ದಾರೆ. ಮೊಕೊಯೆನಾ ಇತ್ತೀಚೆಗೆ ನಮೀಬಿಯಾ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಆ ಸರಣಿಯಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಒಂದು ವಿಕೆಟ್ ಪಡೆದಿದ್ದರು.

ಆಸ್ಟ್ರೇಲಿಯಾ ಏಕದಿನ ಸರಣಿಯಿಂದ ಹೊರಬಿದ್ದ ಲುಂಗಿ ಎನ್ಗಿಡಿ.

ನವದೆಹಲಿ: ಹ್ಯಾಮ್‌ಸ್ಟ್ರಿಂಗ್‌ ಗಾಯಕ್ಕೆ ತುತ್ತಾಗಿರುವ ದಕ್ಷಿಣ ಆಫ್ರಿಕಾ ತಂಡದ ಹಿರಿಯ ವೇಗಿ ಲುಂಗಿ ಎನ್ಗಿಡಿ (Lungi Ngidi) ಅವರು, ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಏಕದಿನ ಸರಣಿಯಿಂದ (AUS vs SA) ಹೊರ ನಡೆದಿದ್ದಾರೆ. ಡರ್ಬನ್‌ನಲ್ಲಿ ಸೆಪ್ಟಂಬರ್‌24 ರಂದು ಮೊದಲನೇ ಪಂದ್ಯದ ಮೂಲಕ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಎರಡನೇ ಪಂದ್ಯ ಸೆಪ್ಟಂಬರ್‌ 27 ರಂದು ಜೋಹನ್ಸ್‌ಬರ್ಗ್‌ನಲ್ಲಿ ನಡೆಯಲಿದೆ ಹಾಗೂ ಮೂರನೇ ಪಂದ್ಯ ಸೆಪ್ಟಂಬರ್‌ 30 ರಂದು ಪಾಚೆಫ್‌ಸ್ಟ್ರೂಮ್‌ನಲ್ಲಿ ನಡೆಯಲಿದೆ.

ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯವನ್ನು ಆಡುವ ವೇಳೆ ಲುಂಗಿ ಎನ್ಗಿಡಿ ಸ್ನಾಯು ಸೆಳೆತದ ನೋವಿಗೆ ಒಳಗಾಗಿದ್ದರು. ಇದರ ಪರಿಣಾಮ ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ. ಇವರ ಗಾಯದ ಕಾರಣ, ದಕ್ಷಿಣ ಆಫ್ರಿಕಾ ತಂಡದಲ್ಲಿ ಬದಲಾವಣೆಯನ್ನು ತರಲಾಗಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯಾಳುಗಳ ಪಟ್ಟಿಯಲ್ಲಿ ಏರಿಕೆಯಾಗಿದೆ. ಈ ಹಿಂದೆ ಕಗಿಸೊ ರಬಾಡ ಹಾಗೂ ಒಟ್ನೀಲ್‌ ಬಾರ್ಟಮನ್‌ ಅವರು ಗಾಯದಿಂದ ಹೊರ ನಡೆದಿದ್ದರು.

ದಾಖಲೆಯ ಶತಕ ಸಿಡಿಸಿ ಧ್ಯಾನ ಮಾಡಿ ಸಂಭ್ರಮಿಸಲು ಕಾರಣ ತಿಳಿಸಿದ ಅಭಿಷೇಕ್‌ ಶರ್ಮಾ!

ಕಳೆದ ವಾರ ಡಾಲ್ಫಿನ್ಸ್ ತಂಡದ ಪರ ಆಡಿದ ಪಂದ್ಯದಲ್ಲಿ ಲುಂಗಿ ಎನ್‌ಗಿಡಿ ಮೊದಲ ಇನಿಂಗ್ಸ್‌ನಲ್ಲಿ 8 ಓವರ್‌ಗಳು ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 8.3 ಓವರ್‌ಗಳನ್ನು ಬೌಲ್‌ ಮಾಡಿದ್ದರು. ತಂಡದ ಪ್ರಮುಖ ವೇಗದ ಬೌಲರ್‌ಗಳಾದ ಮಾರ್ಕೊ ಯೆನ್ಸನ್ ಮತ್ತು ಬೆಯರ್ಸ್ ಸ್ವಾನ್‌ಪೋಯೆಲ್ ಕ್ರಮವಾಗಿ 26 ಹಾಗೂ 20.3 ಓವರ್‌ಗಳನ್ನು ಎಸೆದಿದ್ದರು.

ಮುಂದಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಎನ್‌ಗಿಡಿ ಲಭ್ಯರಾಗುವ ಸಾಧ್ಯತೆಯನ್ನು ಸರಣಿ ಆರಂಭಕ್ಕೂ ಮುನ್ನ ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿ ಅಕ್ಟೋಬರ್ 9 ರಂದು ಆರಂಭವಾಗಲಿದೆ.



ಎನ್ಗಿಡಿ ಸ್ಥಾನಕ್ಕೆ ಮೊಕೊಯೆನಾ

ಎನ್‌ಗಿಡಿ ಅವರ ಬದಲಿಗೆ ದಕ್ಷಿಣ ಆಫ್ರಿಕಾ ತಂಡ ಯುವ ವೇಗದ ಬೌಲರ್ ಎನ್‌ಕೋಬಾನಿ ಮೊಕೊಯೆನಾ ಅವರನ್ನು ಆಯ್ಕೆ ಮಾಡಿದೆ. ಮೊಕೊಯೆನಾ ಇತ್ತೀಚೆಗೆ ನಮೀಬಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಸರಣಿಯಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಒಂದು ವಿಕೆಟ್ ಪಡೆದಿದ್ದರು.

ದಕ್ಷಿಣ ಆಫ್ರಿಕಾ ಒಡಿಐ ತಂಡ: ತೆಂಬಾ ಬವೂಮ (ನಾಯಕ), ಕಾರ್ಬಿನ್‌ ಬಾಷ್‌, ಮ್ಯಾಥ್ಯೂ ಬ್ರೀಟ್ಜ್ಕೆ, ಜೆರಾಲ್ಡ್‌ ಕೋಯೆಡ್ಜೀ, ಕ್ವಿಂಟನ್‌ ಡಿ ಕಾಕ್‌, ಟೋನಿ ಡಿ ಜಾರ್ಜಿ, ಬಿಜೋರ್ನ್‌ ಫಾರ್ಚೂನ್‌, ಡ್ಯೂನ್‌ ಯೆನ್ಸನ್‌, ಮಾರ್ಕೊ ಯೆನ್ಸನ್‌, ಕೇಶವ್‌ ಮಹಾರಾಜ್‌, ಕ್ವೀನಾ ಎಂಫಾಕಾ, ಏಡೆನ್‌ ಮಾರ್ಕ್ರಮ್‌, ಡೇವಿಡ್‌ ಮಿಲ್ಲರ್‌, ಎನ್‌ಕೋಬಾನಿ ಮೊಕೊಯೆನಾ, ರಯಾನ್‌, ರಿಕೆಲ್ಟನ್‌, ಟ್ರಿಸ್ಟನ್‌ ಸ್ಟಬ್ಸ್‌