ದಾಖಲೆಯ ಶತಕ ಸಿಡಿಸಿ ಧ್ಯಾನ ಮಾಡಿ ಸಂಭ್ರಮಿಸಲು ಕಾರಣ ತಿಳಿಸಿದ ಅಭಿಷೇಕ್ ಶರ್ಮಾ!
Abhishek Shram century: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿದ ಬಳಿಕ ಭಾರತ ತಂಡದ ಆರಂಭಿಕ ಅಭಿಷೇಕ್ ಶರ್ಮಾ ಧ್ಯಾನ ಮಾಡುವ ರೀತಿ ಸಂಭ್ರಮಿಸಿದ್ದರು. ಪಂದ್ಯದ ಬಳಿಕ ತಾವು ಈ ರೀತಿ ವಿಭಿನ್ನಾಗಿ ಸಂಭ್ರಮಿಸಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.
ಶತಕ ಬಾರಿಸಿ ಧ್ಯಾನ ಮಾಡಲು ಕಾರಣ ತಿಳಿಸಿದ ಅಭಿಷೇಕ್ ಶರ್ಮಾ. -
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯ ಮೂರನೇ ಪಂದ್ಯದಲ್ಲಿ (IND vs AFG) ದಾಖಲೆಯ ಶತಕ ಸಿಡಿಸಿದ ಬಳಿಕ ತಾವು ಸಂಭ್ರಮಿಸಿದ ಹಾದಿ ಫುಟ್ಬಾಲ್ ತಾರೆ ಎರ್ಲಿಂಗ್ ಹಾಲೆಂಡ್ ಅವರದ್ದು ಅಲ್ಲ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಸ್ಪಷ್ಟಪಡಿಸಿದ್ದಾರೆ. ಧ್ಯಾನದ ಬಗ್ಗೆ ಎಲ್ಲರಗೂ ತಿಳುವಳಿಕೆ ಮೂಡಿಸಲು ನಾನು ಆ ರೀತಿ ಸಂಭ್ರಮಿಸಿದ್ದೇನೆಂದು ಎಡಗೈ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ. ಮೂರನೇ ಪಂದ್ಯದ ಗೆಲುವಿನ ಬಳಿಕ ಭಾರತ ತಂಡ, ಟಿ20ಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆ ಬರೆದಿದ್ದಾರೆ. ಗುರುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಅಭಿಷೇಕ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಭರ್ಜರಿ ಇನಿಂಗ್ಸ್‌ನೊಂದಿಗೆ ಅಭಿಷೇಕ್, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
IND vs AFG: ಅಭಿಷೇಕ್ ಅಬ್ಬರಕ್ಕೆ ಕಂಗಾಲಾದ ಆಫ್ಘನ್, ಟಿ20ಐ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡ ಭಾರತ!
ಇದರೊಂದಿಗೆ ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರದ ಆಟಗಾರನೊಬ್ಬ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಿಸಿದ ಅತಿ ವೇಗದ ಶತಕವೂ ಇದಾಗಿದೆ. ಅಭಿಷೇಕ್ ತಮ್ಮ ಶತಕದ ಹಾದಿಯಲ್ಲಿ 10 ಸಿಕ್ಸರ್‌ಗಳು ಹಾಗೂ 9 ಬೌಂಡರಿಗಳನ್ನು ಸಿಡಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಕೇವಲ 8.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 132 ರನ್ ಗಳಿಸಿತು. ಇದು ಅಭಿಷೇಕ್ ಅವರ ಟಿ20ಐ ವೃತ್ತಿಜೀವನದ ಮೂರನೇ ಶತಕವಾಗಿದ್ದು, ಈ ಸರಣಿಯಲ್ಲಿ ಮತ್ತೊಂದು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
A MAGNIFICENT MILESTONE! 💯
— BCCI (@BCCI) September 17, 2026
Relive the moment Abhishek Sharma brought up a record-breaking hundred 🎥👏#TeamIndia | #AFGvINDpic.twitter.com/SMbmXrtziL
ಶತಕ ಪೂರ್ಣಗೊಳಿಸಿದ ಬಳಿಕ ಅಭಿಷೇಕ್ ಮೈದಾನದಲ್ಲೇ ಧ್ಯಾನದ ಭಂಗಿಯಲ್ಲಿ ಕುಳಿತು ಸಂಭ್ರಮಿಸಿದರು. ಈ ಸಂಭ್ರಮಾಚರಣೆ ಮ್ಯಾಂಚೆಸ್ಟರ್ ಸಿಟಿ ಫುಟ್‌ಬಾಲ್ ತಂಡದ ಸ್ಟಾರ್ ಆಟಗಾರ ಎರ್ಲಿಂಗ್ ಹಾಲೆಂಡ್ ಅವರ ಪ್ರಸಿದ್ಧ ‘ಮೆಡಿಟೇಷನ್’ ಸೆಲೆಬ್ರೇಷನ್ ಅನ್ನು ನೆನಪಿಸಿತು.
“ಇದನ್ನು (ಧ್ಯಾನ) ನಾನು ಸಾಕಷ್ಟು ಸಮಯದಿಂದ ಮಾಡುತ್ತಿದ್ದೇನೆ. ಸುಮಾರು ಆರು ತಿಂಗಳಿಂದ ಒಂದು ವರ್ಷದವರೆಗೆ ಧ್ಯಾನ ಮತ್ತು ‘ಮ್ಯಾನಿಫೆಸ್ಟೇಷನ್’ ಮೇಲೆ ಹೆಚ್ಚು ಗಮನ ಹರಿಸಿದ್ದೇನೆ. ಏಕೆಂದರೆ ವರ್ಷವಿಡೀ ಕ್ರಿಕೆಟ್ ಆಡುತ್ತಿರುವಾಗ, ಒಬ್ಬ ಕ್ರಿಕೆಟಿಗನಾಗಿ ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ."
30 ಎಸೆತಗಳಲ್ಲಿ ಶತಕ ಸಿಡಿಸಿ ರೋಹಿತ್ ಸೇರಿದಂತೆ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ ಅಭಿಷೇಕ್ ಶರ್ಮಾ!
"ಹಾಗಾದರೆ ಇಂತಹ ಪರಿಸ್ಥಿತಿಯಲ್ಲಿ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳುವುದು ಹೇಗೆ? ಧ್ಯಾನ ನನಗೆ ನಿಜವಾಗಿಯೂ ಸಾಕಷ್ಟು ಸಹಾಯ ಮಾಡಿದೆ. ಕಳೆದ ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಇದು ನನಗೆ ತುಂಬಾ ಸಹಾಯ ಮಾಡಿದೆ. ಹಾಗಾಗಿ ಇದರಿಂದ ಯಾರಿಗಾದರೂ ಅಥವಾ ಕ್ರಿಕೆಟಿಗರಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲು ನಾನು ಈ ರೀತಿ ಸಂಭ್ರಮಿಸಿದೆ," ಎಂದಿದ್ದಾರೆ ಅಭಿಷೇಕ್ ಶರ್ಮಾ.
"ನನ್ನ ಮನಸ್ಸನ್ನು ಸ್ಥಿರವಾಗಿರಿಸಲು ಸಹಾಯ ಮಾಡುತ್ತಿರುವುದೇ ಈ ಧ್ಯಾನ. ಅದಕ್ಕಾಗಿ ನಾನು ಈ ರೀತಿಯ ವಿಶೇಷ ಸಂಭ್ರಮಾಚರಣೆಯನ್ನು ಮಾಡಿದೆ,” ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.