ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs SA: ಅಕ್ಷರ್‌ ಪಟೇಲ್‌ರನ್ನು ಹೇಗೆ ಮರೆತಿದ್ದೀರಿ?-ಭಾರತ ತಂಡವನ್ನು ಟೀಕಿಸಿದ ಆರ್‌ ಅಶ್ವಿನ್‌!

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಉಪ ನಾಯಕ ಅಕ್ಷರ್‌ ಪಟೇಲ್‌ ಅವನ್ನು ಕೈ ಬಿಟ್ಟಿದ್ದರಿಂದ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಕಿಡಿಕಾರಿದ್ದಾರೆ. ಅಕ್ಷರ್‌ ಪಟೇಲ್‌ ಅವರನ್ನು ಕೈ ಬಿಡುವುದಕ್ಕೂ ಮುನ್ನ, ಅವರ ಕೊಡುಗೆಯನ್ನು ಮರೆಯಲಾಯಿತೆ? ಎಂದು ಪ್ರಶ್ನೆ ಮಾಡಿದ್ದಾರೆ.

ಅಕ್ಷರ್‌ ಪಟೇಲ್‌ ಆಯ್ಕೆ ಮಾಡದ ಬಗ್ಗೆ ಆರ್‌ ಅಶ್ವಿನ್‌ ಪ್ರಶ್ನೆ.

ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್-8 ಪಂದ್ಯಕ್ಕೆ ಆಯ್ಕೆ ಮಾಡಿದ ಭಾರತ ತಂಡದ ಪ್ಲೇಯಿಂಗ್‌ XI ಕುರಿತಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ತೀವ್ರ ಟೀಕೆಗಳು ಕೇಳಿ ಬಂದಿವೆ. ಈ ಪಂದ್ಯಕ್ಕೆ ಉಪನಾಯಕ ಅಕ್ಷರ್ ಪಟೇಲ್ (Axar Patel) ಅವರನ್ನು ಕೈಬಿಟ್ಟು ವಾಷಿಂಗ್ಟನ್‌ ಸುಂದರ್‌ ಅವರನ್ನು ಆಡಿಸಲಾಗಿತ್ತು. ಈ ಬಗ್ಗೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅವರು ಪ್ರತಿಕ್ರಿಯಿಸಿದ್ದಾರೆ ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಇವರು ಪ್ರಶ್ನೆ ಮಾಡಿದ್ದಾರೆ.

ಭಾರತ ತಂಡ, ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವಿಭಾಗದಲ್ಲಿ ಮೂವರು ಎಡಗೈ ಆಟಗಾರರು ಇರುವುದನ್ನು ಪರಿಗಣಿಸಿ ಉಪ ನಾಯಕ ಅಕ್ಷರ್ ಪಟೇಲ್‌ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿತ್ತು. ಆದರೆ ಆ ತಂತ್ರ ಫಲ ನೀಡಲಿಲ್ಲ. ವಾಷಿಂಗ್ಟನ್‌ ಕೇವಲ ಎರಡು ಓವರ್‌ಗಳನ್ನು ಮಾತ್ರ ಬೌಲ್‌ ಮಾಡಿದರು ಮತ್ತು ಬ್ಯಾಟಿಂಗ್‌ನಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದು ಆಡಿದ್ದರು ಹಾಗೂ 11 ರನ್ ಗಳಿಸಿ ಔಟಾಗಿದ್ದರು.

IND vs ZIM: ಸಂಜು, ಅಕ್ಷರ್‌ ಇನ್‌; ಜಿಂಬಾಬ್ವೆ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!

ಐಸಿಸಿ ಟೂರ್ನಿಗಳಲ್ಲಿ ಮ್ಯಾಚ್‌-ಅಪ್‌ಗಳು ಕೆಲಸ ಮಾಡಲ್ಲ

ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಮ್ಯಾಚ್‌-ಅಪ್‌ಗಳು ಪ್ರಯೋಜನಕಾರಿಯಾಗಬಹುದು, ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ವರ್ಕ್‌ಔಟ್‌ ಆಗುವುದಿಲ್ಲ. ತಂಡವನ್ನು ಸ್ಥಿರವಾಗಿ ಉಳಿಸಿಕೊಳ್ಳುವುದು ಹಾಗೂ ಆಡಿಸವುದು ಐಸಿಸಿ ಟೂರ್ನಿಗಳಲ್ಲಿನ ಯಶಸ್ಸಿನ ರಹಸ್ಯಗಳಲ್ಲಿ ಒಂದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಇಂಥಾ ವಿಶ್ವಕಪ್ ಟೂರ್ನಿಗಳಲ್ಲಿ ನಾನು ಏನು ಅರ್ಥ ಮಾಡಿಕೊಳ್ಳುತ್ತೇನೆಂದರೆ, ಐಪಿಎಲ್ ಮತ್ತು ಇತರ ಲೀಗ್‌ಗಳಲ್ಲಿ ಮ್ಯಾಚ್-ಅಪ್‌ಗಳು ಸಹಾಯವಾಗಬಹುದು ಮತ್ತು ಕೆಲವೊಮ್ಮೆ 14 ಪಂದ್ಯಗಳನ್ನು ಆಡುತ್ತಿರುವುದರಿಂದ ತಂಡವನ್ನು ಬದಲಾಯಿಸಬೇಕಾಗಬಹುದು. ಆದರೆ ಇಂತಹ ಐಸಿಸಿ ಟೂರ್ನಿಗಳಲ್ಲಿ ನಿಮ್ಮ ತಂಡವನ್ನು ಎಷ್ಟು ಸ್ಥಿರವಾಗಿ ಇಡಬಹುದೋ, ಅಷ್ಟು ತಂಡದ ಪಾಲಿಗೆ ಉತ್ತಮ,” ಎಂದು ಆರ್‌ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

IND vs SA: ಅಭಿಷೇಕ್‌ ಶರ್ಮಾರ ಸತತ ವೈಫಲ್ಯದ ಬಗ್ಗೆ ಸುನೀಲ್‌ ಗವಾಸ್ಕರ್‌ ಪ್ರತಿಕ್ರಿಯೆ!

ಅಕ್ಷರ್‌ ಪಟೇಲ್‌ಗೆ ಭಾರತಕ್ಕೆ ನೆರವಾಗುತ್ತಿದ್ದರು

ಈ ಹಿಂದಿನ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರಶಸ್ತಿ ಗೆಲುವಿನ ಪಯಣದಲ್ಲಿ ಅಕ್ಷರ್ ಪಟೇಲ್ ಅವರು ನಿರ್ವಹಿಸಿದ್ದ ಪ್ರಮುಖ ಪಾತ್ರವನ್ನು ಗಮನಾರ್ಹವೆಂದು ಅಶ್ವಿನ್‌ ನೆನಪಿಸಿಕೊಂಡರು. ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳು ಕಳೆದುಕೊಂಡ ಬಳಿಕ ಅಕ್ಷರ್ ಪಟೇಲ್‌ ಬ್ಯಾಟ್‌ನಿಂದ ಭಾರತಕ್ಕೆ ಸಹಾಯ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

“ಎಡಗೈ ಬ್ಯಾಟರ್‌ಗಳ ವಿರುದ್ಧ ವಾಷಿಂಗ್ಟನ್ ಸುಂದರ್ ಅವರನ್ನು ಬಳಸಲು ಬಯಸಿದರೆ, ಅವರನ್ನು ಆಡಿಸಬೇಕು ಎಂಬುದರಲ್ಲಿ ನಾನು ಶೇ 100 ರಷ್ಟು ಒಪ್ಪುತ್ತೇನೆ — ಅದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಆದರೆ ಅಕ್ಷರ್ ಪಟೇಲ್ ಟಿ20 ಕ್ರಿಕೆಟ್‌ನಲ್ಲಿ ನಿಮಗೆ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. ಹಿಂದಿನ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಷರ್ ಪಟೇಲ್ ಏನು ಸಾಧಿಸಿದ್ದರು ಎಂಬುದನ್ನು ಮರೆಯಬಾರದು. ಇಂದು ಭಾರತ ಎದುರಿಸಿದ ಚೇಸಿಂಗ್‌ ಪರಿಸ್ಥಿತಿ, 2024ರಲ್ಲಿಯೂ ಇದೇ ರೀತಿ ಇತ್ತು ಹಾಗೂ ಅಕ್ಷರ್ ಉತ್ತಮ ಪ್ರದರ್ಶನವನ್ನು ತೋರಿದ್ದರು," ಎಂದು ಅಶ್ವಿನ್ ತಿಳಿಸಿದ್ದಾರೆ.