IND vs SA: ಅಭಿಷೇಕ್ ಶರ್ಮಾರ ಸತತ ವೈಫಲ್ಯದ ಬಗ್ಗೆ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ!
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರ ಬಗ್ಗೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಅವರು ಈ ಟೂರ್ನಿಯಲ್ಲಿ ಮುಕ್ತವಾಗಿ ಆಡುತ್ತಿಲ್, ಬದಲಿಗೆ ಒತ್ತಡದಲ್ಲಿ ಆಡುತ್ತಿರುವ ಹಾಗೆ ಕಂಡಿದ್ದಾರೆಂದು ಹೇಳಿದ್ದಾರೆ.
ಅಭಿಷೇಕ್ ಶರ್ಮಾ ವೈಫಲ್ಯದ ಬಗ್ಗೆ ಗವಾಸ್ಕರ್ ಪ್ರತಿಕ್ರಿಯೆ. -
ಅಹಮದಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ಅವರ ನೀರಸ ಪ್ರದರ್ಶನದ ಬಗ್ಗೆ ಭಾರತದ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಪ್ರತಿಕ್ರಿಯಿಸಿದ್ದಾರೆ. ಗುಂಪು ಹಂತದಲ್ಲಿ ಮೂರು ಬಾರಿ ಡಕ್ ಔಟಾಗಿದ್ದ ಅಭಿಷೇಕ್, ಈ ಪಂದ್ಯದಲ್ಲಿ 12 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಮಾರ್ಕೊ ಯೆನ್ಸನ್‌ಗೆ ವಿಕೆಟ್ ಒಪ್ಪಿಸಿದರು. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತದ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್, ಈ ಮಹತ್ವದ ಟೂರ್ನಿಯಲ್ಲಿ ವೈಫಲ್ಯ ಅನುಭವಿಸುತ್ತಿರುವುದು ನಿಜಕ್ಕೂ ಗಮನಾರ್ಹವಾಗಿದೆ ಎಂದು ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಅಭಿಷೇಕ್ ಶರ್ಮಾ ಅವರ ವಿಕೆಟ್ ಪಡೆಯಲು ಅತ್ಯಂತ ಬುದ್ದಿವಂತಿಕೆಯಿಂದ ಯೋಜನೆಯನ್ನು ರೂಪಿಸಿತ್ತು. ಕಗಿಸೊ ರಬಾಡಾ, ಅಭಿಷೇಕ್ ಶರ್ಮಾ ಅವರ ಪ್ಯಾಡ್‌ಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ, ಕೈಗಳನ್ನು ಮುಕ್ತವಾಗಿ ಸ್ವಿಂಗ್ ಮಾಡಲು ಅವಕಾಶ ನೀಡಲಿಲ್ಲ. ಅಲ್ಲದೆ ಎಡಗೈ ಬ್ಯಾಟ್ಸ್‌ಮನ್ ತನ್ನ ಸ್ವಾಭವಿಕ ಆಟವನ್ನು ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಹಾಗೂ ಒತ್ತಡ ಅವರ ಮೇಲೆ ಬೀಳುತ್ತಿದೆ ಎಂದಿದ್ದಾರೆ.
IND vs SA: ʻಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಂಡೆವುʼ-ಭಾರತದ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್!
ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಸುನೀಲ್ ಗವಾಸ್ಕರ್, “ಈ ಕ್ಷಣದಲ್ಲಿ ಅವರಲ್ಲಿ ಸರಾಗತೆ ಕಾಣಿಸುತ್ತಿಲ್ಲ. ನೆಟ್ ಅಭ್ಯಾಸದಲ್ಲಿ ನೀವು ಮೊದಲ ಬಾಲ್‌ಗೆ ಔಟಾದರೂ ಮುಂದಿನ ಬಾಲ್ ಎದುರಿಸುವ ಅವಕಾಶ ಇರುತ್ತದೆ. ಆದರೆ ಪಂದ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನ. ಆ ಒತ್ತಡವು ಕೆಲವೊಮ್ಮೆ ಆಟಗಾರನನ್ನು ಸ್ಥಬ್ಧಗೊಳಿಸಬಹುದು; ದೊಡ್ಡ ಶಾಟ್‌ಗೆ ಪ್ರಯತ್ನಿಸುವಾಗ ಕೈಗಳ ಮುಕ್ತ ಚಲನವಲನಕ್ಕೂ ಅಡ್ಡಿಯಾಗಬಹುದು. ಅವರು ಸ್ವಲ್ಪ ಅಲ್ಲಿ ಸಿಲುಕಿಕೊಂಡಂತೆ ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ಬಹಳ ಬುದ್ದಿವಂತಿಕೆಯಿಂದ ಬೌಲ್ ಮಾಡಿತು,” ಎಂದು ಹೇಳಿದರು.
“ಅಭಿಷೇಕ್ ಶರ್ಮಾಗೆ ರೂಮ್ ಮಾಡಿಕೊಂಡು ಆಫ್ ಸೈಡ್ ಮೂಲಕ ಆಡಲು ಇಷ್ಟವೆಂಬುದು ಎದುರಾಳಿ ಬೌಲರ್‌ಗಳಿಗೆ ಗೊತ್ತಿದೆ. ಅದಕ್ಕಾಗಿ ರಬಾಡಾ ಅವರನ್ನು ನೋವು ನೋಡಬಹುದು, ಒಂದು ಸಿಕ್ಸರ್ ನೀಡಿದ ನಂತರವೂ ನಿರಂತರವಾಗಿ ಪ್ಯಾಡ್‌ಗಳ ಮೇಲೆ ದಾಳಿ ಮಾಡುತ್ತಿದ್ದರು,” ಎಂದು ಸುನೀಲ್ ಗವಾಸ್ಕರ್ ವಿಶ್ಲೇಷಿಸಿದ್ದಾರೆ.
IND vs SA: ಸೂಪರ್-8ರಲ್ಲಿ ಭಾರತ ತಂಡದ ವಿಶ್ವಾಸವನ್ನು ಕುಗ್ಗಿಸಿದ ದಕ್ಷಿಣ ಆಫ್ರಿಕಾ!
ದಕ್ಷಿಣ ಆಫ್ರಿಕಾ ನೀಡಿದ್ದ 188 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಮಾರ್ಕೊ ಯೆನ್ಸನ್ ಮಾರಕ ದಾಳಿ ಹಾಗೂ ಕೇಶವ್ ಮಹಾರಾಜ ಅವರ ಸ್ಪಿನ್ ಮೋಡಿಗೆ ನಲುಗಿದ ಟೀಮ್ ಇಂಡಿಯಾ 111 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 76 ರನ್‌ಗಳಿಂದ ಭಾರತ ಸೋಲು ಒಪ್ಪಿಕೊಂಡಿತು. ಈ ಸೋಲಿನಿಂದ ಭಾರತ ತಂಡದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಎರಡೂ ಪಂದ್ಯಗಳಲ್ಲಿ ಭಾರತ ಗೆಲ್ಲಬೇಕಾಗಿದೆ.
T20 World Cup: ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್ ಕಿತ್ತು ಹಲವು ದಾಖಲೆಗಳನ್ನು ಮುರಿದ ಜಸ್‌ಪ್ರೀತ್ ಬುಮ್ರಾ!
ಭಾರತೀಯ ಬ್ಯಾಟ್ಸ್‌ಮನ್‌ಗಳ ವಿರುದ್ಧ ಗವಾಸ್ಕರ್ ಕಿಡಿ
ಭಾರತೀಯ ಬ್ಯಾಟರ್‌ಗಳ ಶಾಟ್ ಆಯ್ಕಯನ್ನು ಸುನೀಲ್ ಗವಾಸ್ಕರ್ ತೀವ್ರವಾಗಿ ಟೀಕಿಸಿದರು. ವಿಕೆಟ್ ಸುಲಭವಾಗಿರಲಿಲ್ಲ ಎಂಬುದನ್ನು ಗಮನಿಸಿ, ಪ್ರಥಮ ಇನಿಂಗ್ಸ್‌ನಲ್ಲಿ ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಹೇಗೆ ಬ್ಯಾಟಿಂಗ್ ನಡೆಸಿದರು ಎಂಬುದರಿಂದ ಭಾರತೀಯ ಬ್ಯಾಟರ್‌ಗಳು ಪಾಠ ಕಲಿಯಬೇಕಿತ್ತು ಎಂದು ಹೇಳಿದರು.
“ಬ್ಯಾಟ್ಸ್‌ಮನ್‌ಗಳ ಶಾಟ್ಸ್ ಆಯ್ಕೆ ಮಾಡುವಲ್ಲಿ ವಿಫಲರಾದರು. ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರನ್ನು ನೋಡಿ; ಬ್ಯಾಟ್‌ಗೆ ಬಾಲ್ ಸರಾಗವಾಗಿ ಬಾರದಂತಹ ಪಿಚ್‌ನಲ್ಲಿಯೂ ಅವರು ಶಾಂತವಾಗಿ ಆಡುತ್ತಾ ಉತ್ತಮ ಇನಿಂಗ್ಸ್ ಕಟ್ಟಿದರು. ಆದರೆ ಭಾರತೀಯ ಬ್ಯಾಟರ್‌ಗಳು ಅದನ್ನು ಅನುಸರಿಸಲು ವಿಫಲರಾದರು,” ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.