ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮ್ಮ 100ನೇ ಟಿ20ಐ ಪಂದ್ಯದಿಂದ ವಿರಾಟ್‌ ಕೊಹ್ಲಿ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಅಕ್ಷರ್‌ ಪಟೇಲ್‌!

Axar Patel plays 100th T20Is: ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡದ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌, ಟಿ20ಐ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಅವರು ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

ಕೊಹ್ಲಿ, ರೋಹಿತ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಅಕ್ಷರ್‌ ಪಟೇಲ್‌!

100ನೇ ಟಿ20ಐ ಪಂದ್ಯವನ್ನು ಆಡಿದ ಅಕ್ಷರ್‌ ಪಟೇಲ್‌. -

Profile
Ramesh Kote Jul 10, 2026 12:14 AM

ಬ್ರಿಸ್ಟಲ್‌: ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಪಂದ್ಯದಲ್ಲಿ (IND vs ENG) ಕಣಕ್ಕೆ ಇಳಿಯುವ ಮೂಲಕ ಭಾರತ ತಂಡದ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ (Axar Patel) ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಅವರು ತಮ್ಮ ಟಿ20ಐ ಕ್ರಿಕೆಟ್‌ ವೃತ್ತಿ ಜೀವನದ 100ನೇ ಪಂದ್ಯದ ಮೂಲಕ ಈ ಸಾಧನೆಗೆ ಭಾಜನರಾದ ಐದನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಆ ಮೂಲಕ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ, ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

ಟಿ20ಐ ಕ್ರಿಕೆಟ್‌ನಲ್ಲಿ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸದೆ 100 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿಗೂ ಅಕ್ಷರ್‌ ಪಟೇಲ್‌ ಭಾಜನರಾಗಿರುವುದು ಆಸಕ್ತದಾಯಕ ಸಂಗತಿಯಾಗಿದೆ. 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಸೇರಿದಂತೆ ಅವರು ಹಲವು ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ತಂಡದಲ್ಲಿ ಉಪ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಆದರೆ, ಇವರು ಒಮ್ಮೆಯೂ ಭಾರತ ತಂಡವನ್ನು ಮುನ್ನಡೆಸಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

IND vs ENG: ಟಿ20ಐ ಸರಣಿಯಿಂದ ಹರ್ಷಿತ್‌ ರಾಣಾ, ವರುಣ್‌ ಚಕ್ರವರ್ತಿ ಔಟ್‌! ಕಾರಣ ಇಲ್ಲಿದೆ

ಅಕ್ಷರ್‌ ಪಟೇಲ್‌ ತಮ್ಮ ಟಿ20ಐ ಕೆರಿಯರ್‌ನಲ್ಲಿ 100ನೇ ಪಂದ್ಯವನ್ನು ಆಡಿದರೂ, ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರು ಅತಿ ಹೆಚ್ಚು ಟಿ20ಐ ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡು ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಹಿಟ್‌ಮ್ಯಾನ್‌ 159 ಪಂದ್ಯಗಳನ್ನು ಆಡಿದ್ದರೆ,138 ಪಂದ್ಯಗಳ ಮೂಲಕ ಹಾರ್ದಿಕ್‌ ಪಾಂಡ್ಯ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ವಿರಾಟ್‌ ಕೊಹ್ಲಿ (125) ಹಾಗೂ ಸೂರ್ಯಕುಮಾರ್‌ ಯಾದವ್‌ (113) ಇದ್ದಾರೆ.



ಐತಿಹಾಸಿಕ ದಾಖಲೆ ಬಗ್ಗೆ ಅಕ್ಷರ್‌ ಪಟೇಲ್‌ ಪ್ರತಿಕ್ರಿಯೆ

ಇದಕ್ಕೂ ಮೊದಲು ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಅಕ್ಷರ್ ಪಟೇಲ್, ಭಾರತ ಪರ 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತೇನೆ ಎಂದು ತಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿಕೊಂಡಿದ್ದರು.

"ನಾನು ಮೊದಲ ಬಾರಿ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದಾಗ, 100 ಪಂದ್ಯಗಳ ಮೈಲುಗಲ್ಲು ತಲುಪುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ಇಂಗ್ಲೆಂಡ್ ಪ್ರವಾಸ ನನಗೆ ತುಂಬಾ ವಿಶೇಷವಾಗಿದೆ. ಎರಡನೇ ಟಿ20ಐ ಪಂದ್ಯದಲ್ಲಿ ನಾನು 100 ವಿಕೆಟ್‌ಗಳ ಸಾಧನೆಗೆ ಭಾಜನವಾಗಿದ್ದೆ. ಇದೀಗ ನಾಲ್ಕನೇ ಟಿ20 ಪಂದ್ಯದಲ್ಲಿ ನನ್ನ 100ನೇ ಪಂದ್ಯವನ್ನು ಆಡುತ್ತಿದ್ದೇನೆ. ಇದು ನನಗೆ ಅತ್ಯಂತ ವಿಶೇಷವಾದ ದಿನವಾಗಿದ್ದು, ಈ ಕ್ಷಣವನ್ನು ನಾನು ತುಂಬಾ ಆನಂದಿಸುತ್ತಿದ್ದೇನೆ," ಎಂದು ಅಕ್ಷರ್ ಪಟೇಲ್ ಬಿಸಿಸಿಐ ಟಿವಿಯಲ್ಲಿ ಪ್ರಕಟಿಸಿದ ವಿಡಿಯೋದಲ್ಲಿ ಹೇಳಿದ್ದಾರೆ.

IND vs ENG 4th T20I: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಭಾರತ!

ಇದು ನಿಜವಾಗಿಯೂ ಸಂತೋಷದ ಕ್ಷಣ

"ಇದು ನಿಜವಾಗಿಯೂ ತುಂಬಾ ಸಂತೋಷದ ಕ್ಷಣವಾಗಿದೆ. ಒಬ್ಬ ಆಟಗಾರನಾಗಿ ನಾವು ಯಾವುದೇ ಮೈಲುಗಲ್ಲು ಸಾಧಿಸಿದಾಗ, ಅದು ಕೇವಲ ನನ್ನ ಸಾಧನೆ ಎಂದು ನಾನು ಭಾವಿಸುವುದಿಲ್ಲ. ನಾನು ಒಬ್ಬನೇ ಈ ಸಾಧನೆ ಮಾಡಿಲ್ಲ. ನನ್ನೊಂದಿಗೆ ನನ್ನ ತಂಡದ ಸಹ ಆಟಗಾರರು, ಕೋಚ್‌ಗಳು ಹಾಗೂ ನನ್ನ ಕುಟುಂಬದವರು ಕೂಡ ಈ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದ, ಈ ಸಾಧನೆಯಲ್ಲಿ ಎಲ್ಲರಿಗೂ ಪಾಲು ಇದೆ ಎಂದು ನಾನು ಭಾವಿಸುತ್ತೇನೆ," ಎಂದು ಸ್ಪಿನ್‌ ಆಲ್‌ರೌಂಡರ್‌ ತಿಳಿಸಿದ್ದಾರೆ.