ಸಿಡ್ನಿ: ಮೊಹಮ್ಮದ್ ರಿಝ್ವಾನ್ ಬಳಿಕ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಮ್‌ಗೂ (Babar Azam) ಕೂಡ ಪ್ರಸ್ತುತ ನಡೆಯುತ್ತಿರುವ ಬಿಗ್‌ಬ್ಯಾಷ್ ಲೀಗ್ (Bigbash League) ಟೂರ್ನಿಯಲ್ಲಿ ಅವಮಾನವಾಗಿದೆ. ಸಿಡ್ನಿ ಸಿಕ್ಸರ್ಸ್ ತಂಡದ ಸ್ಟೀವನ್ ಸ್ಮಿತ್ (Steve Smith) ಅವರು ಸಿಂಗಲ್ ಪಡೆಯಲು ಬಾಬರ್ ಆಝಮ್ ಬಳಿ ನಿರಾಕರಿಸಿದರು. ಇದರಿಂದಾಗಿ ಪಾಕಿಸ್ತಾನ ಮಾಜಿ ನಾಯಕ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ ಸ್ಮಿತ್ ಸಿಂಗಲ್ ರನ್ ಪಡೆಯಲು ನಿರಾಕರಿಸಿದರೂ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಶತಕವನ್ನು ಪೂರ್ಣಗೊಳಿಸಿ, ತಮ್ಮ ತಂಡವನ್ನು ಗೆಲ್ಲಿಸಿದರು.
ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಮ್ ಆಸ್ಟ್ರೇಲಿಯಾದ ಟಿ20 ಲೀಗ್ ಬಿಗ್‌ಬ್ಯಾಷ್ ಲೀಗ್ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡುತ್ತಿದ್ದಾರೆ. ಬಾಬರ್ ಅಲ್ಲಿ ತಮ್ಮದೇ ಆದ ಶೈಲಿಯಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಅವರು ಕ್ರೀಸ್‌ನಲ್ಲಿ ಸೆಟ್ಲ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಅದಾದ ನಂತರವೂ, ಅವರು ದೊಡ್ಡ ಹೊಡೆತಗಳನ್ನು ಆಡುವ ಬದಲು ತಮ್ಮ ವಿಕೆಟ್ ಉಳಿಸಿಕೊಳ್ಳುವತ್ತ ಗಮನಹರಿಸುತ್ತಾರೆ. ಅದಕ್ಕಾಗಿಯೇ ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆಯಾಗಿದೆ. ಆಸ್ಟ್ರೇಲಿಯಾದ ಮೈದಾನಗಳು ದೊಡ್ಡದಾಗಿರುವುದರಿಂದ ಬಾಬರ್ ಸಿಕ್ಸರ್‌ಗಳನ್ನು ಹೊಡೆಯುವುದು ಕಷ್ಟಕರವಾಗಿದೆ.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್, ಬಿಬಿಎಲ್‌ನಲ್ಲಿ 41 ಎಸೆತಗಳಲ್ಲಿ ಶತಕ ಚಚ್ಚಿದ ಸ್ಟೀವನ್ ಸ್ಮಿತ್!
ಸ್ಮಿತ್ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದ ಸ್ಮಿತ್
ಬಿಗ್ ಬ್ಯಾಷ್ ಲೀಗ್‌ನ 37ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವು ಸಿಡ್ನಿ ಥಂಡರ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಬಾಬರ್ ಆಝಮ್ ಬಹಳ ನಿಧಾನವಾಗಿ ಬ್ಯಾಟ್ ಮಾಡುತ್ತಿದ್ದರು. 11ನೇ ಓವರ್‌ನಲ್ಲಿ ಬಾಬರ್ ಆಝಮ್, ಆಫ್-ಸ್ಪಿನ್ನರ್ ಕ್ರಿಸ್ ಗ್ರೀನ್ ವಿರುದ್ಧ ಸತತ ಮೂರು ಡಾಟ್ ಬಾಲ್‌ಗಳನ್ನು ಮಾಡಿದರು. ನಂತರ, ಆ ಓವರ್‌ನ ಕೊನೆಯ ಎಸೆತದಲ್ಲಿ ಅವರು ಲಾಂಗ್ ಆನ್ ಕಡೆಗೆ ಚೆಂಡನ್ನು ಹೊಡೆದರು. ಈ ಬಾರಿ, ಸ್ಮಿತ್ ಸಿಂಗಲ್ ಪಡೆಯಲು ನಿರಾಕರಿಸಿದರು. ಬಾಬರ್ ಆಝಮ್ ಈ ನಿರ್ಧಾರದಿಂದ ಅತೃಪ್ತರಾಗಿರುವಂತೆ ಕಾಣುತ್ತಿದ್ದರು.
ಮುಂದಿನ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ಸ್ಟೀವ್ ಸ್ಮಿತ್ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ನಂತರ ಐದನೇ ಎಸೆತದಲ್ಲಿ ಒಂದು ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಬೌಲರ್ ರಯಾನ್ ಹ್ಯಾಡ್ಲೀ ಎರಡು ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟರು. 12ನೇ ಓವರ್‌ನಲ್ಲಿ ಒಟ್ಟು 32 ರನ್‌ಗಳು ದಾಖಲಾಗಿದ್ದು, ಇದು ಬಿಗ್ ಬ್ಯಾಷ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಆಗಿದೆ.
ದಿ ಹಂಡ್ರೆಡ್ ಲೀಗ್‌ಗೆ ಮರಳಿದ ಸ್ಮೃತಿ ಮಂಧಾನ; ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಜತೆ ಒಪ್ಪಂದ
ವಿಕೆಟ್ ಒಪ್ಪಿಸಿದ ಬಳಿಕ ಕೋಪಗೊಂಡ ಆಝಮ್
13ನೇ ಓವರ್‌ನ ಮೊದಲ ಎಸೆತದಲ್ಲಿ ಬಾಬರ್ ಆಝಮ್ ಸ್ಟ್ರೈಕ್‌ಗೆ ಬಂದರು. ನೇಥನ್ ಮೆಕ್‌ಆಂಡ್ರ್ಯೂಸ್ ಎಸೆತದಲ್ಲಿ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿದರು, ಆದರೆ ಬೌಲ್ಡ್ ಆದರು. ಚೆಂಡು ಅವರ ಬ್ಯಾಟ್‌ನ ಅಂಚಿಗೆ ತಾಗಿ ಸ್ಟಂಪ್‌ಗೆ ಬಡಿಯಿತು. ಬಾಬರ್ 38 ಎಸೆತಗಳಲ್ಲಿ 47 ರನ್ ಗಳಿಸಿದರು. ಔಟಾದ ನಂತರ ಅವರು ಕೋಪಗೊಂಡಿರುವುದು ಸ್ಪಷ್ಟವಾಗಿ ಗೋಚರಿಸಿತು. ಅವರು ತಮ್ಮ ಬ್ಯಾಟ್‌ನಿಂದ ಬೌಂಡರಿ ಹಗ್ಗವನ್ನು ಬಲವಾಗಿ ಹೊಡೆದರು.