ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025 ಟೂರ್ನಿಗೆ 16 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ!

2025ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ 16 ಸದಸ್ಯರ ಬಾಂಗ್ಲಾದೇಶ ತಂಡವನ್ನು ಬಾಂಗ್ಲಾ ಕ್ರಿಕೆಟ್‌ ಮಂಡಳಿ ಆಗಸ್ಟ್‌ 22 ರಂದು ಪ್ರಕಟಿಸಿದೆ. ವಿಕೆಟ್‌ ಕೀಪರ್‌-ಬ್ಯಾಟರ್‌ ನೂರುಲ್‌ ಹಸನ್‌ ಸೋಹನ್‌ ಹಾಗೂ 26ರ ಪ್ರಾಯದ ಸೈಫ್‌ ಹಸನ್‌ ಅವರು ದೀರ್ಘಾವಧಿ ಬಳಿಕ ಬಾಂಗ್ಲಾದೇಶ ತಂಡಕ್ಕೆ ಮರಳಿದ್ದಾರೆ.

ಏಷ್ಯಾ ಕಪ್‌ ಟೂರ್ನಿಗೆ ಬಾಂಗ್ಲಾದೇಶ ತಂಡ ಪ್ರಕಟ.

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಕ್ರಿಕೆಟ್‌ಟೂರ್ನಿಗೆ 16 ಸದಸ್ಯರ ಬಾಂಗ್ಲಾದೇಶ ತಂಡವನ್ನು (Bangladesh Squad) ಬಾಂಗ್ಲಾ ಕ್ರಿಕೆಟ್‌ ಮಂಡಳಿ (BCA) ಆಗಸ್ಟ್‌ 22 ರಂದು ಪ್ರಕಟಿಸಿದೆ. ವಿಕೆಟ್‌ ಕೀಪರ್‌-ಬ್ಯಾಟರ್‌ ನೂರುಲ್‌ ಹಸನ್‌ ಸೋಹನ್‌ ಹಾಗೂ 26ರ ಪ್ರಾಯದ ಆಟಗಾರ ಸೈಫ್‌ ಹಸನ್‌ ಅವರು ದೀರ್ಘಾವಧಿ ಬಾಂಗ್ಲಾದೇಶ ತಂಡಕ್ಕೆ ಮರಳಿದ್ದಾರೆ. ಸೋಹನ್‌ 2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಕೊನೆಯ ಪಂದ್ಯವನ್ನು ಆಡಿದ್ದರು. ಡಾರ್ವಿನ್‌ನಲ್ಲಿ ಬಾಂಗ್ಲಾದೇಶ ಪರ ಅವರು ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಅವರು ಐದು ಪಂದ್ಯಗಳಿಂದ 109 ರನ್‌ಗಳನ್ನು ಕಲೆ ಹಾಕಿದ್ದರು.

ಇನ್ನು ಸೈಫ್‌ ಹಸನ್‌ 2023ರ ಏಷ್ಯನ್‌ ಗೇಮ್ಸ್‌ನಲ್ಲಿ ಕೊನೆಯ ಬಾರಿ ರಾಷ್ಟ್ರೀಯ ತಂಡದ ಪರ ಕಾಣಿಸಿಕೊಂಡಿದ್ದರು. ಬಾಂಗ್ಲಾ ಎ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು ಹಾಗೂ 117 ರನ್‌ಗಳನ್ನು ಸಿಡಿಸಿದ್ದರು. ಇದರ ಫಲವಾಗಿ ಅವರು ಬಾಂಗ್ಲಾದೇಶ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಲಿಟಾನ್‌ ದಾಸ್‌ ಅವರು ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ. ಇವರು ಇತ್ತೀಚೆಗೆ ಶ್ರೀಲಂಕಾ ಹಾಗೂ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದರು ಹಾಗೂ ಈ ಸರಣಿಗಳನ್ನು ಗೆದ್ದಿದ್ದರು. ತಂಝಿದ್‌ ತಮೀಮ್‌ ಹಾಗೂ ಪರ್ವೇಝ್‌ ಹುಸೇನ್‌ ಎಮಾನ್‌ ಅವರು ಬಾಂಗ್ಲಾ ಪರ ಇನಿಂಗ್ಸ್‌ ಆರಂಭಿಸಬಹುದು. ಶ್ರೀಲಂಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದ ಮೆಹಡಿ ಹಸನ್‌ ಅವರನ್ನು ಮೆಹಡಿ ಹಸನ್‌ ಮಿರಾಜ್‌ ಅವರ ಸ್ಥಾನಕ್ಕೆ ಆರಿಸಲಾಗಿದೆ.

Asia Cup 2025: ಏಷ್ಯಾಕಪ್‌ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ

ಬಾಂಗ್ಲಾದೇಶ ವೇಗದ ಬೌಲಿಂಗ್‌ ವಿಭಾಗದಲ್ಲಿ ಟಾಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಾಫಿಜುರ್ ರೆಹಮಾನ್ ಮತ್ತು ಮೊಹಮ್ಮದ್ ಸೈಫುದ್ದೀನ್ ಕಾಣಿಸಿಕೊಂಡಿದ್ದಾರೆ. ಸ್ಪಿನ್ ವಿಭಾಗದಲ್ಲಿ ಮೆಹಡಿ ಅವರೊಂದಿಗೆ ನಸುಮ್ ಅಹ್ಮದ್ ಮತ್ತು ರಿಷದ್ ಹುಸೇನ್ ಸೇರಲಿದ್ದಾರೆ. ಮಧ್ಯಮ ಕ್ರಮಾಂಕದ ಜವಾಬ್ದಾರಿಗಳನ್ನು ಜಾಕರ್ ಅಲಿ ಅನಿಕ್, ತೌಹಿದ್ ಹೃದಯ್ ಮತ್ತು ಶಮೀಮ್ ಹುಸೇನ್ ವಹಿಸಿಕೊಳ್ಳುವ ನಿರೀಕ್ಷೆಯಿದೆ.

ಬಾಂಗ್ಲಾದೇಶ ತಂಡ ಸೆಪ್ಟೆಂಬರ್ 11 ರಂದು ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಹಾಂಗ್ ಕಾಂಗ್ ವಿರುದ್ಧ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಬಾಂಗ್ಲಾ ಮೂರು ಬಾರಿ (2012, 2016 ಮತ್ತು 2018) ಏಷ್ಯಾ ಕಪ್ ಫೈನಲ್ ತಲುಪಿದೆ. ಆದರೆ ರನ್ನರ್ ಅಪ್ ಸ್ಥಾನ ಗಳಿಸಿತ್ತು. ಒಮ್ಮೆ ಪಾಕಿಸ್ತಾನ ವಿರುದ್ಧ ಮತ್ತು ಎರಡು ಬಾರಿ ಭಾರತ ವಿರುದ್ಧ ಸೋತಿದೆ.



2025ರ ಏಷ್ಯಾ ಕಪ್‌ ಟೂರ್ನಿಗೆ ಬಾಂಗ್ಲಾದೇಶ ತಂಡ

ಲಿಟಾನ್‌ ದಾಸ್‌ (ನಾಯಕ), ತಂಝಿದ್‌ ಹಸನ್‌ ತಮೀಮ್‌, ಪರ್ವೇಝ್‌ ಹುಸೇನ್‌ ಎಮಾನ್‌, ಸೈಫ್‌ ಹಸನ್‌, ತೌಹಿದ್‌ ಹೃದಯ್‌, ಜಾಕಿರ್‌ ಅಲಿ ಅನಿಕ್‌, ಶಮಿಮ್‌ ಹುಸೇನ್‌, ನೂರುಲ್‌ ಹಸನ್‌ ಸೊಹನ್‌, ಶಾಕ್‌ ಮೆಹಿಡಿ ಹಸನ್‌, ರಿಷದ್‌ ಹುಸೇನ್‌, ನೂಸುನ್‌ ಅಹ್ಮದ್‌, ಮುಸ್ತಾಫಿಝರ್‌ ರೆಹಮಾನ್‌, ತಂಝಿಮ್‌ ಹಸನ್‌ ಶಕಿಬ್‌, ಟಾಸ್ಕಿನ್‌ ಅಹ್ಮದ್‌, ಶೋರಿಫುಲ್‌ ಇಸ್ಲಾಮ್‌, ಮೊಹಮ್ಮದ್‌ ಸೈಫುದ್ದಿನ್‌

ಮೀಸಲು ಆಟಗಾರರು: ಸೌಮ್ಯ ಸರ್ಕಾರ್‌, ಮೆಹಿಡಿ ಹಸನ್‌ ಮಿರಾಜ್‌, ತನ್ವೀರ್‌ ಇಸ್ಲಾಮ್‌ ಹಾಗೂ ಹಸನ್‌ ಮಹ್ಮೂದ್‌