ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್‌ ಗವಾಸ್ಕರ್‌!

2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಇನ್ನೂ 14 ತಿಂಗಳು ಬಾಕಿ ಇದ್ದರೂ, ಪ್ರತಿಷ್ಠಿತ ಟೂರ್ನಿಗೆ ಭಾರತ ತಂಡ ಹೇಗಿರಲಿದೆ ಎಂಬ ಲೆಕ್ಕಾಚಾರ, ಸಂಭಾವ್ಯ ಸಂಯೋಜನೆಗಳು ಹಾಗೂ ಊಹಾಪೋಹಗಳು ಈಗಾಗಲೇ ಕ್ರಿಕೆಟ್ ವಲಯದಲ್ಲಿ ಜೋರಾಗಿ ಆರಂಭವಾಗಿವೆ. ಅದರಂತೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ತಮ್ಮ ನೆಚ್ಚಿನ ತಂಡವನ್ನು ಆರಿಸಿದ್ದಾರೆ.

2027ರ ಏಕದಿನ ವಿಶ್ವಕಪ್‌ಗೆ ಭಾರತದ ಸಂಭಾವ್ಯ ಆಟಗಾರರ ತಂಡ ಕಟ್ಟಿದ ಸುನೀಲ್‌ ಗವಾಸ್ಕರ್‌.

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್‌ 2027ರ ಟೂರ್ನಿಗೆ (ICC ODI World Cup 2027) ಇನ್ನೂ 14 ತಿಂಗಳು ಬಾಕಿ ಇದ್ದರೂ, ಭಾರತ ತಂಡದ ಸಂಭಾವ್ಯ ಸಂಯೋಜನೆ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ. 2011ರ ಬಳಿಕ ಭಾರತ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. 2023ರ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಭಾರತ, ಪ್ರಸ್ತುತ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಆಗಿರುವ ಕಾರಣ ಶುಭ್‌ಮನ್ ಗಿಲ್ ನೇತೃತ್ವದ ತಂಡದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಇದರ ನಡುವೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ (Sunil Gavaskar) ಆಯ್ಕೆ ಮಾಡಿರುವ ಸಂಭಾವ್ಯ ಭಾರತ ತಂಡವನ್ನು ಮಾಜಿ ಆಟಗಾರ ಆಕಾಶ್ ಚೋಪ್ರಾ (Aakash Chopra) ವಿಶ್ಲೇಷಿಸಿದ್ದಾರೆ.

"ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಟಾಪ್-5 ಬ್ಯಾಟರ್‌ಗಳಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದ ಅದೇ ಮೊದಲ ಐವರು ಇಲ್ಲಿ ಕೂಡ ಮುಂದುವರಿದಿದ್ದಾರೆ.

ಇಶಾನ್ ಕಿಶನ್ ಅವರನ್ನು 15 ಸದಸ್ಯರ ತಂಡದಲ್ಲಿ ಸೇರಿಸಲಾಗಿದೆ. ಅವರು ಈಗ ಉತ್ತಮ ಫಾರ್ಮ್‌ನಲ್ಲಿದ್ದು, ಈ ಮಾದರಿಗೆ ಸಂಪೂರ್ಣ ಸಿದ್ಧರಾಗಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಇದ್ದಾರೆ. ಇಬ್ಬರೂ ಪರಸ್ಪರ ಉತ್ತಮ ಪರ್ಯಾಯ ಆಟಗಾರರಂತೆ ಕಾಣುತ್ತಾರೆ. ಇದು ನನಗೆ ಇಷ್ಟವಾಯಿತು."

IND vs SL: ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡದ ಆಟಗಾರರಿಗೆ ಬಲವಾದ ಸಂದೇಶ ರವಾನಿಸಿದ ಗೌತಮ್‌ ಗಂಭೀರ್‌!

"ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದರೆ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಇದ್ದಾರೆ. ಇಬ್ಬರೂ ಅನುಭವಿ ಎಡಗೈ ಸ್ಪಿನ್ನರ್‌ಗಳು. ಇವರು ಕೂಡ ಪರಸ್ಪರ ಉತ್ತಮ ಬದಲಾವಣೆ ಆಟಗಾರರಾಗಬಹುದು. ಸನ್ನಿ (ಸುನೀಲ್‌ ಗವಾಸ್ಕರ್‌) ಸರ್ ಆಯ್ಕೆ ಮಾಡಿದ ನಾಲ್ವರು ಆಲ್‌ರೌಂಡರ್‌ಗಳು ಪರಸ್ಪರ ಸಮರ್ಥ ಪರ್ಯಾಯ ಆಟಗಾರರಾಗಿದ್ದಾರೆ. ಈ ಆಯ್ಕೆ ಅರ್ಥಪೂರ್ಣವಾಗಿದೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ವಿಡಿಯೊದಲ್ಲಿ ಹೇಳಿದ್ದಾರೆ.

"ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರಗಳು. ಹರ್ಷಿತ್ ರಾಣಾ ವೇಗದ ಬೌಲರ್ ಆಗಿರುವುದರ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ನೆರವು ನೀಡಬಲ್ಲರು. ಇದರಿಂದ ತಂಡಕ್ಕೆ ಹೆಚ್ಚುವರಿ ಆಯ್ಕೆ ಸಿಗುತ್ತದೆ. ಅರ್ಷದೀಪ್ ಸಿಂಗ್ ಕೂಡ ಉತ್ತಮ ಆಯ್ಕೆಯಾಗಿದ್ದಾರೆ. ಎಡಗೈ ವೇಗದ ಬೌಲರ್ ತಂಡದಲ್ಲಿರುವುದು ಯಾವಾಗಲೂ ಉಪಯುಕ್ತ. ಒಟ್ಟಾರೆ ಇದು 10ರಲ್ಲಿ 8.5 ಅಥವಾ 9 ಅಂಕಗಳಿಗೆ ಅರ್ಹವಾದ ಅತ್ಯುತ್ತಮ ತಂಡ. ಅಂತಿಮವಾಗಿ ಆಯ್ಕೆಯಾಗುವ ಭಾರತ ತಂಡಕ್ಕೆ ಇದು ಬಹಳ ಹತ್ತಿರದ ಸಂಯೋಜನೆ ಎಂದು ನಾನು ಭಾವಿಸುತ್ತೇನೆ," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ENG vs PAK ಟೆಸ್ಟ್‌ ಸರಣಿಗೆ 16 ಸದಸ್ಯರ ಇಂಗ್ಲೆಂಡ್‌ ತಂಡ ಪ್ರಕಟ, ಜೋರ್ಡನ್‌ ಕಾಕ್ಸ್‌ ಔಟ್‌!

ಸುನೀಲ್‌ ಗವಾಸ್ಕರ್‌ ಆಯ್ಕೆಯ ಭಾರತ ಏಕದಿನ ವಿಶ್ವಕಪ್‌ ತಂಡ: ಶುಭಮನ್‌ ಗಿಲ್‌ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್‌), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ , ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಅರ್ಷದೀಪ್‌ ಸಿಂಗ್‌