ENG vs PAK ಟೆಸ್ಟ್ ಸರಣಿಗೆ 16 ಸದಸ್ಯರ ಇಂಗ್ಲೆಂಡ್ ತಂಡ ಪ್ರಕಟ, ಜೋರ್ಡನ್ ಕಾಕ್ಸ್ ಔಟ್!
England test Squad: ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ 16 ಸದಸ್ಯರ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಜೋರ್ಡನ್ ಕಾಕ್ಸ್ ಅವರನ್ನು ಕೈ ಬಿಡಲಾಗಿದೆ. ಮೊಣಕಾಲು ಗಾಯದಿಂದಾಗಿ ಜೇಕಬ್ ಬೆಥೆಲ್ ಅವರು ಕೂಡ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ಜೋ ರೂಟ್ ಅವರು ಎರಡನೇ ಬಾರಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡ ಪ್ರಕಟ, ಜೋ ರೂಟ್ ನಾಯಕ. -
ನವದೆಹಲಿ: ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ (IND vs PAK) ಆರಂಭಿಕ ಎರಡು ಪಂದ್ಯಗಳಿಗೆ ಇಂಗ್ಲೆಂಡ್ ತಂಡವನ್ನು (England Test Squad) ಪ್ರಕಟಿಸಲಾಗಿದ್ದು, ಒಲ್ಲೀ ಪೋಪ್ ಹಾಗೂ ಡ್ಯಾನ್ ಲಾರೆನ್ಸ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಗಸ್ಟ್ 19 ರಂದು ಹೆಡಿಂಗ್ಲೆಯಲ್ಲಿ ಮೊದಲ ಪಂದ್ಯದ ಮೂಲಕ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊಣಕಾಲು ಗಾಯದಿಂದ ಬಳಲುತ್ತಿರುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಜೋರ್ಡನ್ ಕಾಕ್ಸ್ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ.
ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಹಾಗೂ ಬ್ರೆಂಡನ್ ಮೆಕಲಮ್ ಹೆಡ್ ಕೋಚ್ ಹುದ್ದೆಯನ್ನು ತೊರೆದ ಬಳಿಕ ಇಂಗ್ಲೆಂಡ್ ತಂಡದ ಮೊದಲ ಟೆಸ್ಟ್ ಸರಣಿ ಇದಾಗಿದೆ. ಹೊಸದಾಗಿ ಹೆಡ್ ಕೋಚ್ ಆಗಿರುವ ಸ್ಟಿಫನ್ ಫ್ಲೆಮಿಂಗ್ ಅವರು ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ವೇಳೆ ತಮ್ಮ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಹಾಗಾಗಿ ಇದೀಗ ಮಾರ್ಕಸ್ ಟ್ರೆಸ್ಕೋಥಿಕ್ ಅವರ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
IND vs SL: ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ಆಟಗಾರರಿಗೆ ಬಲವಾದ ಸಂದೇಶ ರವಾನಿಸಿದ ಗೌತಮ್ ಗಂಭೀರ್!
ಲಾರೆನ್ಸ್, ಪೋಪ್ ಕಮ್‌ಬ್ಯಾಕ್
ಡ್ಯಾನ್ ಲಾರೆನ್ಸ್ ಅವರು 2024ರ ಸೆಪ್ಟೆಂಬರ್ ಬಳಿಕ ಮೊದಲ ಬಾರಿ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಸರ್ರೆ (Surrey) ಪರ ಈ ಬಾರಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆತಿದೆ. 13 ಇನಿಂಗ್ಸ್‌ಗಳಲ್ಲಿ 65.66ರ ಸರಾಸರಿಯಲ್ಲಿ 788 ರನ್‌ಗಳನ್ನು ಗಳಿಸಿರುವ ಲಾರೆನ್ಸ್, ಐದು ಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದಾರೆ. ಬೆನ್ ಸ್ಟೋಕ್ಸ್ ನಿವೃತ್ತಿಯಿಂದ ತೆರವಾದ ಆರನೇ ಕ್ರಮಾಂಕದ ಸ್ಥಾನವನ್ನು ಅವರು ತುಂಬುವ ಸಾಧ್ಯತೆಯಿದೆ.
ಲಾರೆನ್ಸ್ ಆಫ್‌ಸ್ಪಿನ್ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದರೂ, ಬೌಲಿಂಗ್‌ನಲ್ಲಿ ಅವರ ಪಾತ್ರ ಸ್ಟೋಕ್ಸ್ ಅವರಂತಿಲ್ಲ. ಜೂನ್ 2022ರಿಂದ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗಸ್ ಅಟ್ಕಿನ್ಸನ್ 79 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸ್ಟೋಕ್ಸ್ 78 ವಿಕೆಟ್‌ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಇತ್ತ ಲಾರೆನ್ಸ್ ಈ ಋತುವಿನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ 178.2 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.
Joe Root is back as captain and some familiar faces also are making their return 😍 pic.twitter.com/imQamKKjjr
— England Cricket (@englandcricket) August 6, 2026
ಟೆಸ್ಟ್ ತಂಡಕ್ಕೆ ಮರಳಿದ ಒಲ್ಲೀ ಪೋಪ್
ಸತತ ಕಳಪೆ ಪ್ರದರ್ಶನದ ಕಾರಣ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಒಲ್ಲಿ ಪೋಪ್ ಮತ್ತೆ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಮಾಜಿ ಉಪನಾಯಕರಾಗಿದ್ದ ಪೋಪ್ ಅವರನ್ನು ಆಸ್ಟ್ರೇಲಿಯಾದಲ್ಲಿ ನಡೆದ ಆಶಸ್ ಸರಣಿಯ ಕೊನೆಯ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಜೇಕಬ್ ಬೆಥೆಲ್ ಬದಲಿಸಿದ್ದರು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಆದರೆ ದೇಶಿ ಕ್ರಿಕೆಟ್‌ನಲ್ಲಿ ಪೋಪ್ ಮತ್ತೆ ಉತ್ತಮ ಫಾರ್ಮ್ ಕಂಡುಕೊಂಡಿದ್ದು, ಸರ್ರೆ ಪರ 56.66ರ ಸರಾಸರಿಯಲ್ಲಿ 510 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್‌ಗಳು ಸೇರಿವೆ. ಇತ್ತ, ಬೆಥೆಲ್ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ದಿ ಓವಲ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಕಾಕ್ಸ್ ಅವರನ್ನು ಈ ಬಾರಿ ಮೇಲಿನ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇದೆ.
ಪಾಕಿಸ್ತಾನ ವಿರುದ್ಧದ ಆರಂಭಿಕ 2 ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ: ಜೋ ರೂಟ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಬ್ರೈಡೆನ್ ಕಾರ್ಸ್, ಸ್ಯಾಮ್ ಕುಕ್, ಜೋರ್ಡನ್ ಕಾಕ್ಸ್, ಬೆನ್ ಡಕೆಟ್, ಮ್ಯಾಥ್ಯೂ ಫಿಷರ್, ಎಲಿಮಿಯೊ ಗೇ, ಡ್ಯಾನ್ ಲಾರೆನ್ಸ್, ಒಲ್ಲೀ ಪೋಪ್, ಒಲ್ಲಿ ರಾಬಿನ್ಸನ್, ಜೇಮಿ ಸ್ಮಿತ್, ಜಾಶ್ ಟಂಗ್