ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಏಕದಿನ ವಿಶ್ವಕಪ್‌ ಗೆಲ್ಲುವ ರೋಹಿತ್ ಶರ್ಮಾರ ಕನಸು ಭಗ್ನʼ: ಭಾರತ ತಂಡದಲ್ಲಿ ನಡೆಯತ್ತಿರುವ ಬೆಳವಣಿಗೆಗಳ ಸಂಪೂರ್ಣ ವಿವರ!

ಭಾರತ ಏಕದಿನ ತಂಡದಲ್ಲಿ ಇದೀಗ ಸಾಕಷ್ಟು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ಎರಡು ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರಿಗೆ ಲಾರ್ಡ್ಸ್‌ ಪಂದ್ಯ ನಿಮಗೆ ಕೊನೆ ಎಂದು ಬಿಸಿಸಿಐ ಆಯ್ಕೆದಾರರು ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಈಗಾಗಲೇ ತಿಳಿಸಿದ್ದಾರೆ. ಈ ಬಗ್ಗೆ ರೋಹಿತ್‌ ಶರ್ಮಾ ಅಸಮಾಧಾನವನ್ನು ಹೊರ ಹಾಕಿದ್ದಾರೆಂದು ವರದಿಯಾಗಿದೆ.

2027ರ ಏಕದಿನ ವಿಶ್ವಕಪ್‌ ಆಡುವ ರೋಹಿತ್‌ ಕನಸು ಭಗ್ನ?

ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ (ICC ODI World Cup 2027) ಟೂರ್ನಿಯಲ್ಲಿ ಆಡುವ ರೋಹಿತ್‌ ಶರ್ಮಾ (Rohit Sharma) ಅವರ ಕನಸು ನನಸಾಗುವುದು ಅನುಮಾನ. ಈಗಾಗಲೇ ಭಾರತಕ್ಕೆ ಟಿ20 ವಿಶ್ವಕಪ್‌, ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಟ್ಟಿರುವ ರೋಹಿತ್‌ ಶರ್ಮಾಗೆ ಮುಂದಿನ ವರ್ಷ ಏಕದಿನ ವಿಶ್ವಕಪ್‌ ಗೆದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬೇಕೆಂಬ ಯೋಜನೆ ಇತ್ತು. ಆದರೆ, ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿನ ವೈಫಲ್ಯತೆ ಇದಕ್ಕೆ ಕಂಟಕವಾಗಿದೆ. ಬಿಸಿಸಿಐ ಸೆಲೆಕ್ಟರ್‌ಗಳು ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ ಏಕದಿನ ವಿಶ್ವಕಪ್‌ ಯೋಜನೆಗಳಿಂದ ರೋಹಿತ್‌ ಶರ್ಮಾರನ್ನು ಕೈ ಬಿಡಲು ತೀರ್ಮಾನಿಸಿದೆ. ಜುಲೈ 19 ರಂದು ಭಾನುವಾರ ಲಾರ್ಡ್ಸ್‌ನಲ್ಲಿ ಹಿಟ್‌ಮ್ಯಾನ್‌ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ವರದಿಗಳು ಹೇಳುತ್ತಿವೆ.

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ವೇಳೆ ರೋಹಿತ್‌ ಶರ್ಮಾ ಅವರನ್ನು ಬಿಸಿಸಿಐ ಅಧಿಕಾರಿಗಳು ಭೇಟಿ ಮಾಡಿದ್ದಾರೆ ಹಾಗೂ ಈ ವಿಷಯವನ್ನು ಮಾಜಿ ನಾಯಕನಿಗೆ ತಿಳಿಸಿದ್ದಾರೆ. ಈ ನಿರ್ಧಾರದಿಂದ ರೋಹಿತ್‌ ಶರ್ಮಾ ಬೇಸರಗೊಂಡಿದ್ದಾರೆಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಬಿಸಿಸಿಐನ ಉದ್ದೇಶ ಏನೆಂದರೆ 2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್‌ ಅವರಂಥ ಯುವ ಆಟಗಾರರಿಗೆ ಅವಕಾಶ ನೀಡುವುದಾಗಿದೆ.

ಲಾರ್ಡ್ಸ್‌ನಲ್ಲಿ ರೋಹಿತ್‌ ಶರ್ಮಾ ಶತಕ ಸಿಡಿಸಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂದ ಪಾರ್ಥಿವ್‌ ಪಟೇಲ್‌!

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಬಳಿಕ ರೋಹಿತ್‌ ಶರ್ಮಾ ಅವರನ್ನು ಕೈ ಬಿಡಲಾಗುತ್ತಿದೆ ಎಂಬ ವಿಷಯವನ್ನು ಮಾಜಿ ನಾಯಕನಿಗೆ ಬಿಸಿಸಿಐ ಸೆಲೆಕ್ಟರ್‌ಗಳು ತಿಳಿಸಿದ್ದಾರೆಂದು ವರದಿಗಳು ಹೇಳಿವೆ. ಕಳೆದ ವಾರ ರೋಹಿತ್‌ ಶರ್ಮಾ ಅವರ ಜೊತೆಗೆ ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರು ಮಾತನಾಡಿದ್ದಾರೆಂತಲೂ ವರದಿಯಾಗಿದೆ.

"ಒಡಿಐ ತಂಡಕ್ಕೆ ಇನ್ನು ಮುಂದೆ ರೋಹಿತ್‌ ಶರ್ಮಾ ಅವರನ್ನು ಆಯ್ಕೆ ಮಾಡದೇ ಇರಲು ಸೆಲೆಕ್ಟರ್‌ಗಳು ನಿರ್ಧರಿಸಿದ್ದಾರೆ. ಅವರು ಗೌರವಯುತವಾಗಿ ವಿದಾಯ ಪಡೆಯಲು ಬಯಸಿದರೂ ಅಥವಾ ತಕ್ಷಣವೇ ನಿವೃತ್ತಿ ಘೋಷಿಸದಿರಲು ನಿರ್ಧರಿಸಿದರೂ, ಅದು ಸಂಪೂರ್ಣವಾಗಿ ಅವರ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಆದರೆ, ಸಂದೇಶ ಸ್ಪಷ್ಟವಾಗಿದೆ; ಲಾರ್ಡ್ಸ್‌ ಪಂದ್ಯದ ಬಳಿಕ ಇನ್ನು ಮುಂದೆ ಅವರನ್ನು ಆಯ್ಕೆದಾರರು ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ,: ಎಂದು ಬಿಸಿಸಿಐ ಮೂಲಗಳು ಐಎಎನ್‌ಎಸ್‌ಗೆ ಗುರುವಾರ ತಿಳಿಸಿದೆ.

IND vs ENG: ಭಾರತದ ಎದುರು ಏಕಾಂಗಿ ಹೋರಾಟ ನಡೆಸಿ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟು ಜೋ ರೂಟ್‌!

ರೋಹಿತ್‌ ಶರ್ಮಾ ಒಡಿಐ ಅಂಕಿಅಂಶಗಳು

ಕಳೆದ ವರ್ಷ ಮೇ 7 ರಂದು ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇಂಗ್ಲೆಂಡ್‌ ಪ್ರವಾಸದ ನಿಮಿತ್ತ ಅವರು ಅಂದು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಟೆಸ್ಟ್‌ ನಾಯಕನಾಗಿ ಇವರ ಸ್ಥಾನಕ್ಕೆ ಶುಭಮನ್‌ ಗಿಲ್‌ ಅವರನ್ನು ನೇಮಕ ಮಾಡಲಾಗಿತ್ತು. ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌, ತಮ್ಮ ಒಡಿಐ ವೃತ್ತಿ ಜೀವನದಲ್ಲಿ ಆಡಿದ 286 ಪಂದ್ಯಗಳಿಂದ 11,731 ರನ್‌ಗಳನ್ನು ಬಾರಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಮೂರು ಒಡಿಐ ದ್ವಿಶತಕಗಳನ್ನು ಬಾರಿಸಿ ವಿಶ್ವ ದಾಖಲೆಯನ್ನು ಬರೆದಿದ್ದರು.