ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಾರ್ಡ್ಸ್‌ನಲ್ಲಿ ರೋಹಿತ್‌ ಶರ್ಮಾ ಶತಕ ಸಿಡಿಸಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂದ ಪಾರ್ಥಿವ್‌ ಪಟೇಲ್‌!

ಸತತ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿರುವ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾಗೆ ಮಾಜಿ ವಿಕೆಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ರೋಹಿತ್‌ ಶರ್ಮಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಪಾರ್ಥಿವ್‌ ಪಟೇಲ್‌!

ರೋಹಿತ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ ರೋಹಿತ್‌ ಶರ್ಮಾ. -

Profile
Ramesh Kote Jul 17, 2026 4:27 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ (IND vs ENG) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ (Rohit Sharma) ಅವರಿಗೆ ಮಾಜಿ ವಿಕೆಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ (Parthiv Patel) ಬೆಂಬಲ ವ್ಯಕ್ತಪಡಿಸಿದ್ದಾರೆ. ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕಾರಣ ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಒಡಿಐ, ರೋಹಿತ್‌ ಪಾಲಿಗೆ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆಯಾದರೂ ಮಾಜಿ ವಿಕೆಟ್‌ ಕೀಪರ್‌, ಹಿರಿಯ ಬ್ಯಾಟ್ಸ್‌ಮನ್‌ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ, ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ಭವಿಷ್ಯ ಅವರು ನುಡಿದಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅವರ ಭವಿಷ್ಯದ ಕುರಿತು ಚರ್ಚೆಗಳು ಮತ್ತಷ್ಟು ಹೆಚ್ಚಾಗಿವೆ. ಭಾರತದ ಮಾಜಿ ನಾಯಕ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 11 ಮತ್ತು 26 ರನ್‌ಗಳಿಗೆ ಔಟ್‌ ಆಗಿದ್ದರು. ಕಳೆದ ಎಂಟು ಪಂದ್ಯಗಳಿಂದ ಕೇವಲ 241 ರನ್‌ಗಳಷ್ಟೇ ಗಳಿಸಿ ನಿರಾಶೆ ಮೂಡಿಸಿದ್ದಾರೆ. ಈ ಪ್ರದರ್ಶನದಿಂದಾಗಿ 2027ರ ಏಕದಿನ ವಿಶ್ವಕಪ್‌ ಟೂರ್ನಿಯ ಯೋಜನೆಗಳಿಂದ ರೋಹಿತ್‌ ಶರ್ಮಾ ಅವರನ್ನು ಕೈ ಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

IND vs ENG: ಭಾರತದ ಎದುರು ಏಕಾಂಗಿ ಹೋರಾಟ ನಡೆಸಿ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟು ಜೋ ರೂಟ್‌!

ಜಿಯೋ ಹಾಟ್‌ಸ್ಟಾರ್‌ನ 'ಮ್ಯಾಚ್ ಸೆಂಟರ್ ಲೈವ್' ಕಾರ್ಯಕ್ರಮದಲ್ಲಿ ಮಾತನಾಡಿದ ಪಾರ್ಥಿವ್‌ ಪಟೇಲ್, “ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಒಡಿಐ, ರೋಹಿತ್ ಶರ್ಮಾ ಅವರ ವೃತ್ತಿಜೀವನದ ಕೊನೆಯ ಪಂದ್ಯವಾಗಿದ್ದರೆ, ಶತಕ ಸಿಡಿಸುವ ಮೂಲಕ ಅವರು ವಿದಾಯ ಹೇಳಲು ಬಯಸುತ್ತಾರೆ. ಅದನ್ನು ಸಾಧಿಸುವ ಸಾಮರ್ಥ್ಯ ಅವರಿಗಿದೆ. ಅವರ ವೃತ್ತಿಜೀವನದುದ್ದಕ್ಕೂ ನಾವು ಇದನ್ನು ನೋಡಿದ್ದೇವೆ. ಎರಡು ಅಥವಾ ಮೂರು ಪಂದ್ಯಗಳಲ್ಲಿ ಕಡಿಮೆ ರನ್ ಗಳಿಸಿದ ಬಳಿಕ, ಮುಂದಿನ ಇನಿಂಗ್ಸ್‌ನಲ್ಲೇ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನದ ಮೂಲಕ ಅವರು ಭರ್ಜರಿಯಾಗಿ ಪುಟಿದೇಳುತ್ತಾರೆ,” ಎಂದು ತಿಳಿಸಿದ್ದಾರೆ.

ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತು ದಾಖಲೆ ಬರೆದ ಬುಮ್ರಾ; ಈ ಸಾಧನೆಗೈದ ಮೊದಲ ಭಾರತೀಯ

ರೋಹಿತ್‌ ಶರ್ಮಾರಲ್ಲಿನ ವಿಶೇಷ ಸಾಮರ್ಥ್ಯವನ್ನು ಹೊಗಳಿದ ಪಟೇಲ್‌

ರೋಹಿತ್ ಶರ್ಮಾ ಅವರ ಶ್ರೇಷ್ಠತೆ ಎಂದರೆ, ತಂಡಕ್ಕೆ ಅಗತ್ಯವಿರುವ ಸಂದರ್ಭದಲ್ಲಿ ಪಂದ್ಯವನ್ನು ಟರ್ನ್‌ ಮಾಡುವಂಥಾ ಇನಿಂಗ್ಸ್ ಆಡುವ ಸಾಮರ್ಥ್ಯ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. ಆರಂಭಿಕ ಬ್ಯಾಟರ್, ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದು, ಅವರು 33 ಶತಕಗಳ ಮೂಲಕ 11 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ದಾಖಲಿಸಿದ್ದಾರೆ. ಇದರ ಜೊತೆಗೆ ಮೂರು ದ್ವಿಶತಕಗಳನ್ನು ಸಿಡಿಸಿದ್ದಾರೆ.

“ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಪ್ರಮುಖ ವ್ಯತ್ಯಾಸ ಎಂದರೆ ಸ್ಥಿರತೆ. ರೋಹಿತ್ ಪ್ರತಿ ಪಂದ್ಯದಲ್ಲೂ ದೊಡ್ಡ ಮೊತ್ತ ಗಳಿಸದೇ ಇರಬಹುದು. ಆದರೆ ಅವರು ರನ್ ಗಳಿಸಿದಾಗ ಅದು ದೊಡ್ಡ ಇನಿಂಗ್ಸ್ ಆಗಿರುತ್ತದೆ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದು ತಂಡವನ್ನು ಗೆಲ್ಲಿಸುತ್ತಾರೆ," ಎಂದು ತಿಳಿಸಿದ್ದಾರೆ.