ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ2 ಅರ್ಧಶತಕ, 7 ವಿಕೆಟ್‌ʼ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮಿಂಚಿದ ಬೆನ್‌ ಸ್ಟೋಕ್ಸ್‌!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿಕೆ ಬಳಿಕ ಇದೇ ಮೊದಲ ಬಾರಿ ಕೌಂಟಿ ಚಾಂಪಿಯನ್‌ಷಿಪ್‌ಗೆ ಮರಳಿದ ಇಂಗ್ಲೆಂಡ್‌ ಮಾಜಿ ನಾಯಕ ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಗಳಲ್ಲಿ ಮಿಂಚಿದ್ದಾರೆ. ಇಂಗ್ಲೆಂಡ್‌ ಟೆಸ್ಟ್‌ ತಂಡದ ಮಾಜಿ ನಾಯಕನ ಆಲ್‌ರೌಂಡರ್‌ ಆಟದ ಬಲದಿಂದ ಡರ್ಹಾಮ್‌, ಡರ್ಬಿಶೈರ್‌ ಎದುರು ತಂಡದ ಭರ್ಜರಿ ಗೆಲುವು ಪಡೆಯಿತು.

ಕೌಂಟಿ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಮಿಂಚಿದ ಬೆನ್‌ ಸ್ಟೋಕ್ಸ್‌.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ತಮ್ಮ ಮೊದಲ ರೆಡ್‌-ಬಾಲ್‌ ಪಂದ್ಯದಲ್ಲೇ ಬೆನ್‌ ಸ್ಟೋಕ್ಸ್‌ (Ben Stokes) ಭರ್ಜರಿ ಆಲ್‌ರೌಂಡ್‌ ಪ್ರದರ್ಶನವನ್ನು ತೋರಿದ್ದಾರೆ. ಎರಡು ಅರ್ಧಶತಕ ಹಾಗೂ 7 ವಿಕೆಟ್‌ ಕಬಳಿಸುವ ಮೂಲಕ ಬೆನ್‌ ಸ್ಟೋಕ್ಸ್‌, ಡರ್ಬಿಶೈರ್‌ ವಿರುದ್ಧ ಕೌಂಟಿ ಚಾಂಪಿಯನ್‌ಶಿಪ್‌ (County Championship 2026) ಡಿವಿಷನ್‌-2ರಲ್ಲಿ ಡರ್ಹಾಮ್‌ ತಂಡದ 338 ರನ್‌ಗಳ ಭರ್ಜರಿ ಗೆಲುವಿಗೆ ನೆರವು ನೀಡಿದರು.

ಇಂಗ್ಲೆಂಡ್‌ ಟೆಸ್ಟ್‌ ತಂಡದ ಮಾಜಿ ನಾಯಕ ಬೆನ್‌ ಸ್ಟೋಕ್ಸ್‌ ಇದಕ್ಕೂ ಮುನ್ನ ಒನ್‌-ಡೇ ಕಪ್‌ನಲ್ಲಿ ಡರ್ಹಾಮ್‌ ಪರ ಒಂಬತ್ತು ಪಂದ್ಯಗಳನ್ನು ಆಡಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಡರ್ಹಾಮ್‌ ತಂಡ ಮಿಡ್ಲ್‌ಸೆಕ್ಸ್‌ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ನಾಲ್ಕು ದಿನಗಳ ಈ ಪಂದ್ಯದ ಮೂಲಕ ಬೆನ್‌ ಸ್ಟೋಕ್ಸ್‌ ಅವರು ರೆಡ್‌ ಬಾಲ್‌ನ ಕೌಂಟಿ ಚಾಂಪಿಯನ್‌ಶಿಪ್‌ಗೆ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಈ ಋತುವಿನಲ್ಲಿ ಅವರು ಆಡಿದ ನಾಲ್ಕನೇ ಚಾಂಪಿಯನ್‌ಶಿಪ್‌ ಪಂದ್ಯ ಇದಾಗಿದೆ.

IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್‌ ಜುರೆಲ್‌!

ಬ್ಯಾಟಿಂಗ್‌ನಲ್ಲೂ ಮಿಂಚಿದ ಸ್ಟೋಕ್ಸ್‌

ಮೊದಲ ಇನಿಂಗ್ಸ್‌ನಲ್ಲಿ ಸ್ಟೋಕ್ಸ್‌ 53 ರನ್‌ ಗಳಿಸಿದರು. ಡರ್ಹಾಮ್‌ 283 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಬೌಲಿಂಗ್‌ನಲ್ಲಿ ಮಿಂಚಿದ ಸ್ಟೋಕ್ಸ್‌ ಕೇವಲ ನಾಲ್ಕು ಓವರ್‌ಗಳಲ್ಲಿ ಎರಡು ವಿಕೆಟ್‌ ಪಡೆದು ಡರ್ಬಿಶೈರ್‌ ತಂಡವನ್ನು 156 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ಕಾರಣರಾಗಿದ್ದರು. ಈ ಇನಿಂಗ್ಸ್‌ನಲ್ಲಿ ಮ್ಯಾಥ್ಯೂ ಪಾಟ್ಸ್‌ ಐದು ವಿಕೆಟ್‌ಗಳ ಸಾಧನೆ ಮಾಡಿದ್ದರು. ಡರ್ಬಿಶೈರ್‌ನ ಯಾವುದೇ ಬ್ಯಾಟರ್‌ 30 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

ಎರಡನೇ ಇನಿಂಗ್ಸ್‌ನಲ್ಲಿ ಸ್ಟೋಕ್ಸ್‌, ತಮ್ಮ ಮೊದಲ ಇನಿಂಗ್ಸ್‌ ಪ್ರದರ್ಶನಕ್ಕಿಂತಲೂ ಉತ್ತಮವಾಗಿ ಬ್ಯಾಟಿಂಗ್‌ ನಡೆಸಿ ಅಜೇಯ 66 ರನ್‌ ಗಳಿಸಿದರು. ಬೆನ್‌ ಮೆಕಿನ್ನಿ 140 ರನ್‌ ಸಿಡಿಸಿದರೆ, ವಿಲ್‌ ರೋಡ್ಸ್‌ 52 ರನ್‌ ಸೇರಿಸಿದರು. ಇದರ ನೆರವಿನಿಂದ ಡರ್ಹಾಮ್‌, ಎದುರಾಳಿ ಡರ್ಬಿಶೈರ್‌ಗೆ 423 ರನ್‌ಗಳ ಕಠಿಣ ಗುರಿಯನ್ನು ನೀಡಿತು.

ಭಾರತ ತಂಡದ ಡಬ್ಲ್ಯುಟಿಸಿ ಫೈನಲ್‌ ಭವಿಷ್ಯ ನುಡಿದ ಮಾಜಿ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌!

ಒಂದೇ ಓವರ್‌ನಲ್ಲಿ 3 ವಿಕೆಟ್‌

ಗುರಿ ಬೆನ್ನಟ್ಟಿದ ಡರ್ಬಿಶೈರ್‌ ತಂಡವನ್ನು ಸ್ಟೋಕ್ಸ್‌ ತಮ್ಮ ಮಾರಕ ಬೌಲಿಂಗ್‌ನಿಂದ ಕಂಗೆಡಿಸಿದರು. ಎರಡನೇ ಇನಿಂಗ್ಸ್‌ನ 12ನೇ ಓವರ್‌ ಬೌಲ್‌ ಮಾಡಿದ ಸ್ಟೋಕ್ಸ್‌ ಮೊದಲ ಎಸೆತದಲ್ಲೇ ಬ್ರೂಕ್‌ ಗೆಸ್ಟ್‌ ಅವರನ್ನು 11 ರನ್‌ಗೆ ಔಟ್‌ ಮಾಡಿದರು. ಮುಂದಿನ ಎಸೆತದಲ್ಲೇ ಅನುಜ್‌ ದಾಲ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಮೂರನೇ ಎಸೆತವನ್ನು ಬೆನ್‌ ಐಚಿಸನ್‌ ಎದುರಿಸಿ ಪಾರಾದರೂ, ಮುಂದಿನ ಎಸೆತದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು.

ಹೀಗೆ ಒಂದೇ ಓವರ್‌ನಲ್ಲಿ ನಾಲ್ಕು ಎಸೆತಗಳ ಅಂತರದಲ್ಲಿ ಮೂರು ವಿಕೆಟ್‌ ಕಬಳಿಸಿ ಸ್ಟೋಕ್ಸ್‌ ಪಂದ್ಯವನ್ನು ಸಂಪೂರ್ಣವಾಗಿ ಡರ್ಹಾಮ್‌ ಪರ ತಿರುಗಿಸಿದರು. ಅಂತಿಮವಾಗಿ ಸ್ಟೋಕ್ಸ್‌ 17 ರನ್‌ ನೀಡಿ 5 ವಿಕೆಟ್‌ (5/17) ಪಡೆದು ಡರ್ಬಿಶೈರ್‌ ತಂಡವನ್ನು ಕೇವಲ 84 ರನ್‌ಗಳಿಗೆ ಆಲೌಟ್‌ ಮಾಡಿದರು. ಎರಡೂ ಇನಿಂಗ್ಸ್‌ಗಳಲ್ಲಿ ಸೇರಿ ಒಟ್ಟು ಏಳು ವಿಕೆಟ್‌ ಹಾಗೂ ಎರಡು ಅರ್ಧಶತಕಗಳೊಂದಿಗೆ ಸ್ಟೋಕ್ಸ್‌ ತಮ್ಮ ಆಲ್‌ರೌಂಡ್‌ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.