IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್ ಜುರೆಲ್!
IND vs SL: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಶತಕದ ಜೊತೆಗೆ ಧ್ರುವ್ ಜುರೆಲ್, ರಿಷಭ್ ಪಂತ್ ಅವರ ಜೊತೆಗೆ 112 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಎರಡನೇ ದಿನದಾಟದ ಬಳಿಕ ತಮ್ಮ ಬ್ಯಾಟಿಂಗ್‌ಗೆ ರಿಷಭ್ ಪಂತ್ ಹೇಗೆ ಸಹಾಯ ಮಾಡಿದರು ಎಂಬ ಬಗ್ಗೆ ಧ್ರುವ್ ಜುರೆಲ್ ಬಹಿರಂಗಪಡಿಸಿದ್ದಾರೆ.
ರಿಷಭ್ ಪಂತ್ ಸಲಹೆಯನ್ನು ನೆನೆದ ಧ್ರುವ್ ಜುರೆಲ್. -
ಕೊಲಂಬೊ: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ (IND vs SL) ಎರಡನೇ ದಿನ ಅದ್ಭುತವಾಗಿ ಬ್ಯಾಟ್ ಮಾಡಿದ ಭಾರತ ತಂಡದ ವಿಕೆಟ್ ಕೀಪರ್ ಧ್ರುವ್ ಜುರೆಲ್ (Dhruv Jurel), ತಮ್ಮ ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕವನ್ನು ಬಾರಿಸಿದ್ದಾರೆ ಹಾಗೂ ಇದರ ಜೊತೆಗೆ ರಿಷಭ್ ಪಂತ್ (Rishabh Pant) ಜೊತೆಗೆ 112 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಭಾರತ ತಂಡ 503 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದರು. ಎರಡನೇ ದಿನದಾಟದ ಬಳಿಕ ಮಾತನಾಡಿದ ಧ್ರುವ್ ಜುರೆಲ್, ತಮ್ಮ ಬ್ಯಾಟಿಂಗ್‌ಗೆ ರಿಷಭ್ ಪಂತ್ ಹೇಗೆ ನೆರವು ನೀಡಿದರು ಎಂಬ ಬಗ್ಗೆ ರಿವೀಲ್ ಮಾಡಿದ್ದಾರೆ.
ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕವನ್ನು ಬಾರಿಸಿದ್ದ ಧ್ರುವ್ ಜುರೆಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ, ಕೊಲಂಬೊ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಅವರು ದೀರ್ಘಾವಧಿ ಇನಿಂಗ್ಸ್ ಆಡಿದರು. ಅವರು ಆಡಿದ 177 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 115 ರನ್‌ಗಳನ್ನು ಕಲೆ ಹಾಕಿದ್ದರು. ಅಲ್ಲದೆ, 306ಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವೇಳೆ ರಿಷಭ್ ಪಂತ್ ಜೊತೆಯಾದ ಜುರೆಲ್ 152 ಎಸೆತಗಳಲ್ಲಿ 112 ರನ್‌ಗಳ ಜೊತೆಯಾಟವನ್ನು ಆಡಿದ್ದರು. ರಿಷಭ್ ಪಂತ್ ಅವರು 89 ಎಸೆತಗಳಲ್ಲಿ 63 ರನ್‌ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಶ್ರೀಲಂಕಾದಲ್ಲಿ ಧೋನಿಯ ಸಾರ್ವಕಾಲಿಕ ಟೆಸ್ಟ್ ದಾಖಲೆ ಮುರಿದ ಜುರೆಲ್
ರಿಷಭ್ ಪಂತ್ ನೆರವನ್ನು ಸ್ಮರಿಸಿದ ಧ್ರುವ್ ಜುರೆಲ್
ಎರಡನೇ ದಿನದಾಟದ ಬಳಿಕ ಮಾತನಾಡಿದ ಅವರು, ಪಂದ್ಯದ ಕಠಿಣ ಸನ್ನಿವೇಶದಲ್ಲಿ ರಿಷಭ್ ಪಂತ್ ಮಾರ್ಗದರ್ಶನ ತುಂಬಾ ನೆರವಿಗೆ ಬಂತು ಎಂದು ಹೇಳಿದ್ದಾರೆ.
"ರಿಷಭ್ ಪಂತ್ ಅತ್ಯಂತ ಭಯಾನಕ ಆಟಗಾರ ಎಂದು ನಮ್ಮೆಲ್ಲರಿಗೂ ಗೊತ್ತಿದೆ ಹಾಗೂ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರ ಜೊತೆ ಆಡುವಾಗಲೆಲ್ಲಾ ನಾನು ಸಲಹೆಯನ್ನು ಪಡೆಯುತ್ತೇನೆ. ಏಕೆಂದರೆ ಅಂಥಾ ಅನುಭವವನ್ನು ಅವರು ಹೊಂದಿದ್ದಾರೆ. ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನಾನು ಏನು ಮಾಡಬೇಕೆಂದು ಅವರ ಅಗತ್ಯ ಸಲಹೆಯನ್ನು ಪಡೆಯುತ್ತೇನೆ," ಎಂದು ಧ್ರುವ್ ಜುರೆಲ್ ತಿಳಿಸಿದ್ದಾರೆ.
IND vs SL: ಭಾರತ ತಂಡದ ಏಳನೇ ಕ್ರಮಾಂಕದಲ್ಲಿ ಎರಡನೇ ಟೆಸ್ಟ್ ಶತಕ ಸಿಡಿಸಿದ ಧ್ರುವ್ ಜುರೆಲ್!
"ಟೆಸ್ಟ್ ಕ್ರಿಕೆಟ್ ಅನ್ನು ನೀವು ವಿಭಿನ್ನ ಹಾದಿಯಲ್ಲಿ ಆಡಬಹುದು ಎಂಬುದನ್ನು ನೀವು ನೋಡಬಹುದು ಹಾಗೂ ಇದು ಆಟವನ್ನು ಅತ್ಯಂತ ಸುಂದರವಾಗಿಸುತ್ತದೆ. ನೀವು ಪಂತ್ ಜೊತೆ ಆಡುವಾಗ, ನಿಮಗೆ ಭಯಾನಕ ಅನುಭವವಾಗುತ್ತದೆ. ತನ್ನ ಬಾಲ್ಯದಿಂದಲೂ ಅವರು ಆಡುತ್ತಿರುವ ಹಾದಿಯಲ್ಲಿ ನಾನು ಆಡಲು ಸಾಧ್ಯವೇ ಇಲ್ಲ," ಎಂದು ವಿಕೆಟ್ ಕೀಪರ್ ಹೇಳಿದ್ದಾರೆ.
“ನನ್ನ ಆಟದ ಯೋಜನೆ ಎಂದರೆ ಯಾವ ಬೌಲರ್ ವಿರುದ್ಧ ಆಕ್ರಮಣಕಾರಿ ಆಟವಾಡಬೇಕು, ಯಾವ ಸ್ಪೆಲ್ ಅನ್ನು ಎಚ್ಚರಿಕೆಯಿಂದ ಎದುರಿಸಬೇಕು ಎಂಬುದನ್ನು ನಿರ್ಧರಿಸುವುದು. ಈ ಬಗ್ಗೆ ನಾನು ಯಾವಾಗಲೂ ರಿಷಭ್ ಪಂತ್ ಅವರ ಸಲಹೆ ಪಡೆಯುತ್ತೇನೆ. ಅವರು ವಿಕೆಟ್‌ಕೀಪರ್, ನಾನೂ ವಿಕೆಟ್‌ಕೀಪರ್. ಅಲ್ಲದೆ, ಇಬ್ಬರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತೇವೆ. ಹೀಗಾಗಿ ಅವರೊಂದಿಗೆ ಮಾತನಾಡುವುದು ಮತ್ತು ಅವರ ಅನುಭವದಿಂದ ಕಲಿಯುವುದು ನನಗೆ ತುಂಬಾ ಉತ್ತಮ ಅನುಭವ,” ಎಂದು ಧ್ರುವ್ ಜುರೆಲ್ ತಿಳಿಸಿದ್ದಾರೆ.
ʻನನ್ನ ತಾತ ರೈತ, ಅಪ್ಪ ಸೈನಿಕʼ: ಶತಕದ ವಿಶೇಷ ಸಂಭ್ರಮಕ್ಕೆ ಕಾರಣ ತಿಳಿಸಿದ ಧ್ರುವ್ ಜುರೆಲ್!
ರಿಷಭ್ ಪಂತ್ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಪಂತ್
ರಿಷಭ್ ಪಂತ್ ಅವರ ಭುಜದ ಗಾಯದ ಮೇಲೆ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ ಎಂದು ಧ್ರುವ್ ಜುರೆಲ್ ತಿಳಿಸಿದ್ದಾರೆ. ಆದರೆ ಮೂರನೇ ದಿನದಾಟಕ್ಕೆ ಪಂತ್ ಫಿಟ್ ಆಗಿ ತಂಡಕ್ಕೆ ಲಭ್ಯರಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
“ಸದ್ಯ ಪಂತ್ ಅವರ ಬಲ ಭುಜಕ್ಕೆ ಏಟಾಗಿದೆ. ಅವರ ಗಾಯದ ಸ್ಥಿತಿಯನ್ನು ನಾವು ಹತ್ತಿರದಿಂದ ಗಮನಿಸುತ್ತಿದ್ದೇವೆ. ಇಂದು ಅವರ ಭುಜದ ಸ್ಥಿತಿ ಸ್ವಲ್ಪ ಸಮಸ್ಯೆಯಾಗಿದ್ದರಿಂದ ನಾನು ವಿಕೆಟ್‌ಕೀಪಿಂಗ್ ಮಾಡಿದೆ. ಅವರು ನಾಳೆ ಸಂಪೂರ್ಣ ಫಿಟ್ ಆಗಿ ಮೈದಾನಕ್ಕಿಳಿಯುತ್ತಾರೆ ಎಂದು ಆಶಿಸುತ್ತೇನೆ,” ಎಂದು ಜುರೆಲ್ ಹೇಳಿದ್ದಾರೆ.