ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಎಂಎಸ್‌ ಧೋನಿ ಅಭಿಮಾನಿಗಳಿಗೆ ಕಹಿ ಸುದ್ದಿ, ಸಿಎಸ್‌ಕೆ ಪರ ಎಲ್ಲಾ ಪಂದ್ಯಗಳನ್ನು ಆಡುವುದು ಡೌಟ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಎಂಎಸ್‌ ಧೋನಿ ಎಲ್ಲಾ ಪಂದ್ಯಗಳನ್ನು ಆಡುವುದಿಲ್ಲ ಎಂದು ವೆರದಿಯಾಗಿದೆ. ಏಕೆಂದರೆ ಅವರ ಫಿಟ್‌ನೆಸ್‌ ಹಾಗೂ ತಂಡದ ಸಂಯೋಜನೆಯನ್ನು ಆಧರಿಸಿ, ಅವರ ಆಡುವಿಕೆ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

2026ರ ಐಪಿಎಲ್‌ ಎಲ್ಲಾ ಪಂದ್ಯಗಳನ್ನು ಧೋನಿ ಆಡುವುದಿಲ್ಲ.

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ ವಿಕೆಟ್‌ ಕೀಪರ್‌-ಬ್ಯಾಟರ್‌ ಎಂಎಸ್‌ ಧೋನಿ (MS Dhoni) ಪಾಲಿಗೆ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಕೊನೆಯ ಟೂರ್ನಿ ಎಂದು ಹೇಳಲಾಗುತ್ತಿದೆ. ಹಾಗಾಗಿ ತಮ್ಮ ನೆಚ್ಚಿನ ಆಟಗಾರನನ್ನು ಕ್ರೀಡಾಂಗಣದಲ್ಲಿ ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಎದುರು ನೋಡುತ್ತಿರುವ ಅಭಿಮಾನಿಗಳುಗೆ ಇದೀಗ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಅದೇನೆಂದರೆ ಸಿಎಸ್‌ಕೆ ಮಾಜಿ ನಾಯಕ ಎಂಎಸ್‌ಡಿ, ಹತ್ತೊಂಬತ್ತನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಪರ ಎಲ್ಲಾ ಪಂದ್ಯಗಳನ್ನು ಆಡುವುದಿಲ್ಲವೆಂದು ವರದಿಯಾಗಿದೆ. ಅವರ ಫಿಟ್‌ನೆಸ್‌ ಹಾಗೂ ತಂಡದ ಸಂಯೋಜನೆ ಅನುಗುಣವಾಗಿ ಎಂಎಸ್‌ ಧೋನ ಎಷ್ಟು ಪಂದ್ಯಗಳನ್ನು ಆಡಲಿದ್ದಾರೆಂದು ನಿರ್ಧರಿಸಲಾಗುತ್ತದೆ ಎಂದು ಸಿಎಸ್‌ಕೆ ಮೂಲಗಳು ಹೇಳಿರುವುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವರ್ಷದ ಕೊನೆಯಲ್ಲಿ 45ನೇ ವಯಸ್ಸಿಗೆ ಕಾಲಿಡಲಿರುವ ಎಂಎಸ್ ಧೋನಿ ಮುಂಬರುವ ಐಪಿಎಲ್ ಟೂರ್ನಿಯ ನಿಮಿತ್ತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಲಭ್ಯರಾಗಲಿದ್ದಾರೆ ಎಂದು ಫ್ರಾಂಚೈಸಿಯ ಹಿರಿಯ ಮೂಲವೊಂದು ದೃಢಪಡಿಸಿದೆ. ಆದಾಗ್ಯೂ, ಸಿಎಸ್‌ಕೆ ತಂಡಕ್ಕೆ ಟ್ರೇಡ್‌ ಡೀಲ್‌ ಮೂಲಕ ಸಂಜು ಸ್ಯಾಮ್ಸನ್ ಸೇರಿರುವ ಹಿನ್ನೆಲೆಯಲ್ಲಿ, ಭಾರತದ ಮಾಜಿ ನಾಯಕ ಧೋನಿ ಲೀಗ್ ಹಂತದ ಪ್ರತಿಯೊಂದು ಪಂದ್ಯದಲ್ಲೂ ಆಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ENG vs SL: ಲೋ ಸ್ಕೋರಿಂಗ್‌ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಶಾಕ್‌ ನೀಡಿದ ಇಂಗ್ಲೆಂಡ್‌!

“ಎಂಎಸ್‌ ಧೋನಿ ಚೆನ್ನೈಗೆ ಬರುತ್ತಿದ್ದಾರೆ ಮತ್ತು ಈ ಆವೃತ್ತಿಗೆ ತಮ್ಮ ಲಭ್ಯತೆಯನ್ನು ದೃಢಪಡಿಸಿದ್ದಾರೆ ಎಂಬುದನ್ನು ನಾವು ಖಚಿತಪಡಿಸಬಹುದು,” ಎಂದು ಪಿಟಿಐಗೆ ತಿಳಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ನ ಹಿರಿಯ ಮೂಲವೊಂದು, “ಅವರು ಎಲ್ಲಾ ಪಂದ್ಯಗಳಲ್ಲಿ ಆಡುವರು ಎಂಬುದನ್ನು ಈ ಕ್ಷಣದಲ್ಲಿ ನಾವು ಹೇಳಲು ಸಾಧ್ಯವಿಲ್ಲ,” ಎಂದು ತಿಳಿಸಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಯಲ್ಲಿದ್ದರೂ ಕಳೆದ ಎರಡು ಆವೃತ್ತಿಗಳಲ್ಲಿ ಎಂಎಸ್‌ ಧೋನಿ ಯಾವುದೇ ಸಂದರ್ಭದಲ್ಲಿಯೂ ಬ್ಯಾಟರ್ ಆಗಿ ತಂಡಕ್ಕೆ ಹೆಚ್ಚಿನ ಮಟ್ಟಿಗೆ ಅಗತ್ಯವಾಗಿರಲಿಲ್ಲ. ಅವರ ಪಾತ್ರ ಬಹುತೇಕ ಸಂದರ್ಭಾನುಸಾರವಾಗಿತ್ತು ಹಾಗೂ ಹೆಚ್ಚಾಗಿ ಕೆಳ ಕ್ರಮಾಂಕದಲ್ಲಿ ಅಲ್ಪಾವಧಿಯ ಬ್ಯಾಟಿಂಗ್ ಪ್ರದರ್ಶನಗಳಿಗೆ ಮಾತ್ರ ಸೀಮಿತವಾಗಿತ್ತು.

IPL 2026: ರಾಜಸ್ಥಾನ್‌ ರಾಯಲ್ಸ್‌ಗೆ ರಿಯಾನ್‌ ಪರಾಗ್‌ ನೂತನ ನಾಯಕ!

ಎಂಎಸ್‌ ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್‌ ಯಾರು?

ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಮೂವರು ವಿಕೆಟ್‌ಕೀಪರ್-ಬ್ಯಾಟರ್‌ಗಳು ಇದ್ದಾರೆ. ಧೋನಿ ಆಡದ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಗ್ಲೌಸ್ ಧರಿಸುವುದು ಬಹುತೇಕ ಖಚಿತವಾಗಿದೆ. ಇದಲ್ಲದೆ, ತಂಡದಲ್ಲಿ ಉರ್ವಿಲ್ ಪಟೇಲ್ ಕೂಡ ಇದ್ದಾರೆ. ಇವರನ್ನು 14.20 ಕೋಟಿ ರು.ಗೆ ಸೇರಿಸಿಕೊಳ್ಳಲಾಗಿತ್ತು ಮತ್ತು ಕಾರ್ತಿಕ್ ಶರ್ಮಾ ಕೂಡ ತಂಡದಲ್ಲಿದ್ದು, ಅವರನ್ನು ಶಿವಂ ದುಬೆ ಜೊತೆ ಫಿನಿಷರ್ ಆಗಿ ಬೆಳೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಕಳೆದ ಕೆಲ ವರ್ಷಗಳಿಂದ ಎಂಎಸ್‌ ಧೋನಿ ಮೊಣಕಾಲು ಮತ್ತು ಬೆನ್ನು ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಈ ಹಂತದಲ್ಲಿ ವಿಕೆಟ್ ಕೀಪಿಂಗ್‌ನ ಶಾರೀರಿಕ ಒತ್ತಡ, ಜೊತೆಗೆ ಪಂದ್ಯಗಳ ನಡುವಿನ ಕಡಿಮೆ ವಿಶ್ರಾಂತಿ ಅವಧಿ, ಅವರ ವೃತ್ತಿಜೀವನದ ಈ ಹಂತದಲ್ಲಿ ಹೆಚ್ಚಿನ ದಣಿವನ್ನು ಉಂಟುಮಾಡುವ ಸಾಧ್ಯತೆಯಿದೆ.

ENG vs SL: ಲೋ ಸ್ಕೋರಿಂಗ್‌ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಶಾಕ್‌ ನೀಡಿದ ಇಂಗ್ಲೆಂಡ್‌!

ಆದಾಗ್ಯೂ, ಒಂದು ವಿಷಯ ಸ್ಪಷ್ಟವಾಗಿದ್ದು, ಧೋನಿ ಚೆನ್ನೈನಲ್ಲಿ ನಡೆಯುವ ಸಿಎಸ್‌ಕೆ ತಂಡದ ಹೆಚ್ಚಿನ ತವರು ಪಂದ್ಯಗಳಲ್ಲಿ ಆಡಲಿದ್ದಾರೆ ಎನ್ನುವುದು ಖಚಿತವಾಗಿ ಕಾಣುತ್ತಿದೆ. ಚೆಪಾಕ್‌ನಲ್ಲಿ ಅವರು ಮೈದಾನಕ್ಕಿಳಿದ ಕ್ಷಣವೇ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಲಿದೆ. ಇದು ಫ್ರಾಂಚೈಸಿ ಮತ್ತು ಅದರ ನಿಷ್ಠಾವಂತ ಅಭಿಮಾನಿಗಳೊಂದಿಗೆ ಅವರ ಶಾಶ್ವತ ಬಾಂಧವ್ಯವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ.