ENG vs SL: ಲೋ ಸ್ಕೋರಿಂಗ್ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಶಾಕ್ ನೀಡಿದ ಇಂಗ್ಲೆಂಡ್!
ENG vs SL Match Highlights: ಫಿಲ್ ಸಾಲ್ಟ್ ನಿರ್ಣಾಯಕ ಅರ್ಧಶತಕ ಹಾಗೂ ವಿಲ್ ಜ್ಯಾಕ್ಸ್ ಅವರ ಸ್ಪಿನ್ ಮೋಡಿಯ ಬಲದಿಂದ ಇಂಗ್ಲೆಂಡ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದೆ. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 146 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ 95 ರನ್‌ಗಳಿಗೆ ಆಲ್‌ಔಟ್ ಆಯಿತು.
ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ತಂಡಕ್ಕೆ 51 ರನ್ ಜಯ. -
ಪಲ್ಲೆಕೆಲೆ: ಆತಿಥೇಯ ಶ್ರೀಲಂಕಾ ತಂಡಕ್ಕೆ ಕಡಿಮೆ ಮೊತ್ತದ ಗುರಿಯನ್ನು ನೀಡಿದ ಹೊರತಾಗಿಯೂ ಇಂಗ್ಲೆಂಡ್ ತಂಡ, ಫಿಲ್ ಸಾಲ್ಟ್ (Phil Salt) ಅರ್ಧಶತಕ ಹಾಗೂ ವಿಲ್ ಜ್ಯಾಕ್ಸ್ (will Jacks) ಸ್ಪಿನ್ ಮೋಡಿಯಿಂದ 51 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್-8ರ ಹಂತದಲ್ಲಿ (ENG vs SL) ಆಂಗ್ಲರು ಶುಭಾರಂಭವನ್ನು ಕಂಡಿದ್ದಾರೆ. ಇನ್ನು ಬ್ಯಾಟಿಂಗ್ ವೈಫಲ್ಯದಿಂದಾಗಿ ಕಡಿಮೆ ಮೊತ್ತದ ಗುರಿಯನ್ನು ಮುಟ್ಟುವಲ್ಲಿ ವಿಫಲವಾದ ಶ್ರೀಲಂಕಾ ತಂಡ ತವರು ಅಭಿಮಾನಿಗಳ ಎದುರು ಮುಖಭಂಗವನ್ನು ಅನುಭವಿಸಿತು.
ಭಾನುವಾರ ಇಲ್ಲಿನ ಪಲ್ಲೆಕೆಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳ ನಡುವಣ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ದಾಖಲಾಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕಂಡೀಷನ್ಸ್ ಬ್ಯಾಟಿಂಗ್‌ಗೆ ತುಂಬಾ ಕಠಿಣವಾಗಿದ್ದರಿಂದ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯ೭ವಾಗಲಿಲ್ಲ. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ, ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿತಾದರೂ ಆರಂಭಿಕ ಫಿಲ್ ಸಾಲ್ಟ್ ಏಕಾಂಗಿಯಾಗಿ ಹೋರಾಟ ನಡೆಸಿ ಅರ್ಧಶತಕ ಬಾರಿಸಿದರು. ಆ ಮೂಲಕ ಇಂಗ್ಲೆಂಡ್ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 146 ರನ್‌ಗಳನ್ನು ಕಲೆ ಹಾಕಿತು.
ಭಾರತ-ಪಾಕ್ ಆಟಗಾರರು ಶೇಕ್ ಹ್ಯಾಂಡ್ ಮಾಡಬೇಕು, ಇದು ಕ್ರೀಡಾ ಮನೋಭಾವ: ದಿಗ್ವಿಜಯ ಸಿಂಗ್!
ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್‌ಗಳು ಆಂಗ್ಲರ ಪರಿಣಾಮಕಾರಿ ಬೌಲಿಂಗ್ ಎದುರು ನೆಲ ಕಚ್ಚಿದರು. ಮಧ್ಯಮ ಕ್ರಮಾಂಕದಲ್ಲಿ ದಸೂನ್ ಶಣಕ 30 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ 20 ರನ್ ಗಳಿಸುವಲ್ಲಿ ವಿಫಲರಾದರು. ಇದರ ಪರಿಣಾಮ ಆತಿಥೇಯ ಶ್ರೀಲಂಕಾ ತಂಡ, 16.4 ಓವರ್‌ಗಳಿಗೆ ಕೇವಲ 95 ರನ್‌ಗಳಿಗೆ ಆಲ್‌ಔಟ್ ಆಯಿತು. ಇದರ ಶ್ರೇಯ ಇಂಗ್ಲೆಂಡ್ ತಂಡದ ವಿಲ್ ಜ್ಯಾಕ್ಸ್‌ಗೆ ಸಲ್ಲಬೇಕು. ಇವರು ಬೌಲ್ ಮಾಡಿದ 4 ಓವರ್‌ಗಳಿಗೆ ಕೇವಲ 22 ರನ್ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದರು.
A brilliant bowling effort sees England seal a commanding victory over Sri Lanka in the #T20WorldCup Super 8 👊
— ICC (@ICC) February 22, 2026
📝: https://t.co/z6S9D2Pio1 pic.twitter.com/doTPDuqbY8
ಇಂಗ್ಲೆಂಡ್‌ಗೆ ಆಘಾತ ನೀಡಿದ ದುನಿತ್ ವೆಲ್ಲಾಳಗೆ
ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿತ್ತು. ದುನಿತ್ ವೆಲ್ಲಾಳಗೆ ಹಾಗೂ ಮಹೇಶ್ ತೀಕ್ಷಣ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತಂಡದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗ ಸಂಪೂರ್ಣ ಕುಸಿಯಿತು. 4 ಓವರ್ ಬೌಲ್ ಮಾಡಿದ ದುನಿತ್, ಕೇವಲ 26 ರನ್ ನೀಡಿ ಜೋಸ್ ಬಟ್ಲರ್, ಫಿಲ್ ಸಾಲ್ಟ್ ಹಾಗೂ ಹಾರಿ ಬ್ರೂಕ್ ಅವರನ್ನು ಔಟ್ ಮಾಡಿದರು.
Phil Salt battles his way to a fifty for England against Sri Lanka💪
— ICC (@ICC) February 22, 2026
It is one of the @marriottbonvoy Milestones of the #T20WorldCup.
📝: https://t.co/z6S9D2Pio1 pic.twitter.com/XRAgaoVjMu
ಇಂಗ್ಲೆಂಡ್‌ಗೆ ಆಸರೆಯಾದ ಫಿಲ್ ಸಾಲ್ಟ್ ಅರ್ಧಶತಕ
ಒಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ 15ನೇ ಓವರ್‌ವರೆಗೂ ಏಕಾಂಗಿ ಹೋರಾಟ ನಡೆಸಿದ ಫಿಲ್ ಸಾಲ್ಟ್, 40 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 62 ರನ್ ಗಳಿಸಿ ಇಂಗ್ಲೆಂಡ್ ತಂಡದ ಮೊತ್ತವನ್ನು100ರ ಗಡಿ ದಾಟಿಸಿ ಔಟ್ ಆದರು. ಕೊನೆಯಲ್ಲಿ ವಿಲ್ ಜ್ಯಾಕ್ಸ್ 14 ಎಸೆತಗಳಲ್ಲಿ 21 ರನ್ ಗಳಿಸಿ ತಂಡದ ಮೊತ್ತವನ್ನು 140ರ ಗಡಿಗೆ ತಂದು ಔಟ್ ಆದರು. ಮಹೇಶ್ ತೀಕ್ಷಣ ಹಾಗೂ ದಿಲ್ಷಾನ್ ಮಧುಶಂಕ ತಲಾ ಎರಡೆರಡು ವಿಕೆಟ್ ಕಿತ್ತರು.
Will Jacks turned the game in England's favour with a superb all-round performance against Sri Lanka👊
— ICC (@ICC) February 22, 2026
He wins the @aramco POTM🥇
📝: https://t.co/z6S9D2Pio1 pic.twitter.com/7XV0rTaHc5
ಇಂಗ್ಲೆಂಡ್ ಸ್ಪಿನ್ ಮೋಡಿಗೆ ತತ್ತರಿಸಿದ ಶ್ರೀಲಂಕಾ
147 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ ಸುಲಭವಾಗಿ ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಂಗ್ಲೆಂಡ್ ಬೌಲರ್‌ಗಳು ವಿಶೇಷವಾಗಿ ಸ್ಪಿನ್ನರ್‌ಗಳು ಇದಕ್ಕೆ ಅವಕಾಶ ನೀಡಲಿಲ್ಲ. ಇನ್‌ಫಾರ್ಮ್ ಬ್ಯಾಟರ್ ಪಥುಮ್ ನಿಸಾಂಕ ಹಾಗೂ ಕಮಿಲ್ ಮಿಷಾರಾ ಅವರನ್ನು ಜೋಫ್ರಾ ಆರ್ಚರ್ ಔಟ್ ಮಡಿದರು. ಮಧ್ಯಮ ಓವರ್‌ಗಳಲ್ಲಿ ವಿಲ್ ಜ್ಯಾಕ್ಸ್ ಸ್ಪಿನ್ ಮೋಡಿಯಿಂದ ಕುಸಾಲ್ ಮೆಂಡಿಸ್, ಪವನ್ ರತ್ನನಾಯಕೆ ಹಾಗೂ ದುನಿತ್ ವೆಲ್ಲಾಳಗ ಅವರನ್ನು ಔಟ್ ಮಾಡಿದರು. ಆದಿಲ್ ರಶೀದ್ ಹಾಗೂ ಲಾ ಡಾಸನ್ ಕೂಡ ವಿಲ್ ಜ್ಯಾಕ್ಸ್ ಜೊತೆ ಕೈ ಜೋಡಿಸಿದರು. ದಸೂನ್ ಶನಕ 30 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ನೆಲ ಕಚ್ಚಿದರು.