ನವದೆಹಲಿ: ನವೆಂಬರ್ ತಿಂಗಳು ಸಮೀಪಿಸುತ್ತಿದ್ದಂತೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮುಂದಿನ ಋತುವಿನ ಬಗ್ಗೆ ಚರ್ಚೆಗಳು ಪ್ರಾರಂಭವಾಗುತ್ತವೆ. ಎಂದಿನಂತೆ, ಈ ಬಾರಿಯೂ 2026ರ ಐಪಿಎಲ್ (IPL 2026 Mini Auction) ಟೂರ್ನಿಯ ನಿಮಿತ್ತ ಎಲ್ಲಾ ಫ್ರಂಚೈಸಿಗಳು ತಯಾರಿಯನ್ನು ಆರಂಭಿಸಿವೆ. ಮಿನಿ ಹರಾಜು ಡಿಸೆಂಬರ್ 13 ಮತ್ತು 15 ರ ನಡುವೆ ನಡೆಯಲಿದೆ ಎಂದು ವರದಿಯಾಗಿದೆ. ನಿಖರವಾದ ದಿನಾಂಕಗಳನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಈ ಮೂರು ದಿನಗಳಲ್ಲಿ ಒಂದು ದಿನ ಮಿನಿ ಹರಾಜನ್ನು ನಡೆಸಬಹುದು.
ಮಿನಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದಕ್ಕಾಗಿ ಕೊನೆಯ ದಿನಾಂಕ ನವೆಂಬರ್ 15 ಆಗಿದೆ. ಆದಾಗ್ಯೂ, ಐದು ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹರಾಜಿಗೂ ಮುನ್ನ ಯಾವ ಆಟಗಾರರನ್ನು ಬಿಡುಗಡೆ ಮಾಡಬಹುದು ಎಂಬುದನ್ನು ಬಹಿರಂಗಪಡಿಸುವ ವರದಿಗಳು ಈಗ ಹೊರಬಂದಿವೆ.
IPL 2026 Auction: ಡಿಸೆಂಬರ್‌ನಲ್ಲಿ 2026ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ?
ಚೆನ್ನೈ ಫ್ರಾಂಚೈಸಿ ರಿಲೀಸ್ ಮಾಡಬಹುದಾದ ಐವರು ಆಟಗಾರರು
ಕ್ರಿಕ್‌ಬಜ್ ವರದಿಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ 2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್ ಮತ್ತು ಡೆವೋನ್ ಕಾನ್ವೇ ಅವರನ್ನು ಬಿಡುಗಡೆ ಮಾಡಬಹುದು. ಸ್ಯಾಮ್ ಕರನ್ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ಜೊತೆ ಟಿ20 ವಿಶ್ವಕಪ್ ಗೆದ್ದಿದ್ದರು. ರವಿಚಂದ್ರನ್ ಅಶ್ವಿನ್ ಅವರ ಐಪಿಎಲ್ ನಿವೃತ್ತಿಯ ನಂತರ ಸಿಎಸ್‌ಕೆ ಈಗಾಗಲೇ ₹ 9.75 ಕೋಟಿ ಮೊತ್ತವನ್ನು ತನ್ನ ಪರ್ಸ್‌ನಲ್ಲಿ ಹೊಂದಿದೆ.
2025ರ ಐಪಿಎಲ್‌ನಲ್ಲಿ ಸಿಎಸ್‌ಕೆ ವಿಫಲ
2025ರ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ನಿರಾಶಾದಾಯಕ ಋತುವಾಗಿತ್ತು. ಸಿಎಸ್‌ಕೆ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಗೆದ್ದು ಎಂಟು ಅಂಕಗಳನ್ನು ಗಳಿಸುವ ಮೂಲಕ ಪಾಯಿಂಟ್ ಟೇಬಲ್‌ನ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಸಿಎಸ್‌ಕೆ ಖಂಡಿತವಾಗಿಯೂ 2026ರ ಐಪಿಎಲ್‌ನಲ್ಲಿ ಇದನ್ನು ಸುಧಾರಿಸಲು ಎದುರು ನೋಡುತ್ತಿದೆ. ಚೆನ್ನೈ ಕೊನೆಯ ಬಾರಿ ಐಪಿಎಲ್ ಪ್ರಶಸ್ತಿಯನ್ನು 2023 ರಲ್ಲಿ ಗೆದ್ದಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟನ್ಸ್ ಅನ್ನು ಸೋಲಿಸಿ ಚಾಂಪಿಯನ್ ಆಗಿತ್ತು.
IPL 2026: ಕೋಲ್ಕತಾ ನೈಟ್ ರೈಡರ್ಸ್‌ಗೆ ರಾಹುಲ್ ದ್ರಾವಿಡ್ ಕೋಚ್ ಆಗುವ ಸಾಧ್ಯತೆ!
ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಹೊರ ಬೀಳಲಿರುವ ಸ್ಟಾರ್ಕ್
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಮಿಚೆಲ್ ಸ್ಟಾರ್ಕ್, ಟಿ ನಟರಾಜನ್ ಅವರನ್ನು ಹೊರಬೀಳುವ ಸಾಧ್ಯತೆ ಇದೆ. ಸ್ಟಾರ್ಕ್ 10.75 ಕೋಟಿ ರೂ. ಮೊತ್ತವನ್ನು ಕಳೆದ ಸೀಸನ್‌ನಲ್ಲಿ ಪಡೆದಿದ್ದರು. ಗಾಯದ ಸಮಸ್ಯೆಯ ಕಾರಣ ಲಖನೌ ಸೂಪರ್ ಜಯಂಟ್ಸ್, ಮಯಾಂಕ್ ಯಾದವ್, ಆಕಾಶ್ ದೀಪ್ ಮತ್ತು ಡೇವಿಡ್ ಮಿಲ್ಲರ್ ಅವರನ್ನು ರಿಲೀಸ್ ಮಾಡಬಹುದು. ಇನ್ನು ಕೋಲ್ಕತಾ ನೈಟ್ ರೈಡರ್ಸ್ 23.75 ಕೋಟಿ ಆಟಗಾರ ವೆಂಕಟೇಶ್ ಅಯ್ಯರ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.