ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

10,000 ಟಿ20 ರನ್ ಬಾರಿಸಿ ರೋಹಿತ್ ಶರ್ಮಾ ದಾಖಲೆ ಮುರಿದ ಡಾವಿಡ್ ಮಲನ್!

Dawid Malan surpasses Rohit Sharma: ಲೀಸೆಸ್ಟರ್‌ಶೈರ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಯಾರ್ಕ್ ಶೈರ್ 106 ರನ್ ಅಂತರದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ 48 ಎಸೆತಗಳಲ್ಲಿ 88 ರನ್ ಬಾರಿಸಿದ್ದ ಯಾರ್ಕ್‌ಶೈರ್‌ ನಾಯಕ ಡಾವಿಡ್ ಮಲನ್ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಪೂರ್ಣಗೊಳಿಸಿದ್ದಾರೆ. ಆ ಮೂಲಕ ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ.

ರೋಹಿತ್‌ ಶರ್ಮಾರ ದಾಖಲೆ ಮುರಿದ ಡಾವಿಡ್‌ ಮಲನ್‌!

ರೋಹಿತ್‌ ಶರ್ಮಾ ದಾಖಲೆ ಮುರಿದ ಡಾವಿಡ್‌ ಮಲನ್‌.

Profile Ramesh Kote Jun 9, 2025 6:39 PM

ಲೀಡ್ಸ್: ಇಂಗ್ಲೆಂಡ್‌ನ ಮಾಜಿ ಆಟಗಾರ ಹಾಗೂ ಯಾರ್ಕ್‌ಶೈರ್ ತಂಡದ ನಾಯಕ ಡಾವಿಡ್ ಮಲನ್ (Dawid malan) 10,000 ಟಿ20 ಬಾರಿಸುವ ಮೂಲಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ (Rohit sharma) ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಲೀಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ಮಲನ್ ಈ ಸಾಧನೆ ಮಾಡಿದ್ದಾರೆ. ಆ ಮೂಲಕ ಈ ದಾಖಲೆ ಬರೆದ ಇಂಗ್ಲೆಂಟ್‌ನ 5ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಈ ದಾಖಲೆ ಬರೆಯಲು ಡಾವಿಡ್ ಮಲನ್‌ಗೆ ಎರಡು ರನ್ ಅವಶ್ಯಕತೆ ಇತ್ತು. ಆದರೆ ಮ್ಯಾಟ್ ಸ್ಯಾಲಿಸ್ ಬರಿ ಎಸೆತದಲ್ಲಿ ಸಿಕ್ಸರ್ ಬಾರಿಸಿ 10,000 ಟಿ20 ರನ್ ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ಸ್ಫೋಟಕ ಪ್ರದರ್ಶನ ತೋರಿದ ಮಲನ್ 48 ಎಸೆತಗಳಲ್ಲಿ 88 ರನ್ ಬಾರಿಸಿ ಯಾರ್ಕ್‌ಶೈರ್ ತಂಡವು 213 ರನ್‌ ಬೃಹತ್ ಮೊತ್ತ ಗಳಿಸಲು ನೆರವು ನೀಡಿದರು.

ಟಿ20 ಸ್ವರೂಪದಲ್ಲಿ ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ತಮ್ಮ 362 ಇನಿಂಗ್ಸ್‌ನಲ್ಲಿ 10,000 ರನ್ ಪೂರೈಸಿದ್ದರು. ಆದರೆ ಡಾವಿಡ್ ಮಲನ್ ತಮ್ಮ 358ನೇ ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಪಾಕಿಸ್ತಾನದ ಬಾಬರ್ ಆಝಮ್ 285 ಇನಿಂಗ್ಸ್‌ನಲ್ಲಿ 10 ಸಾವಿರ ಟಿ20 ರನ್ ಪೂರ್ಣಗೊಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (285 ಇನಿಂಗ್ಸ್) ಹಾಗೂ ವಿರಾಟ್ ಕೊಹ್ಲಿ (299) ನಂತರದ ಸ್ಥಾನದಲ್ಲಿದ್ದಾರೆ.

IND vs ENG ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಕೀ ಬೌಲರ್‌ ಆರಿಸಿದ ಮ್ಯಾಥ್ಯೂ ಹೇಡನ್‌!

ಇಂಗ್ಲೆಂಡ್ ಪರ ಅತಿ ಹೆಚ್ಚು ಟಿ20 ರನ್ ಗಳಿಸಿದವರು

* 13,698 ರನ್- ಅಲೆಕ್ಸ್ ಹೇಲ್ಸ್ - 492 ಇನಿಂಗ್ಸ್

* 12,794 ರನ್- ಜೋಸ್ ಬಟ್ಲರ್ - 424 ಇನಿಂಗ್ಸ್

* 12,143 ರನ್- ಜೇಮ್ಸ್ ವಿನ್ಸ್- 422 ಇನಿಂಗ್ಸ್

* 10,176 ರನ್- ಜೇಸನ್ ರಾಯ್ - 386 ಇನಿಂಗ್ಸ್

* 10,086 ರನ್- ಡಾವಿಡ್ ಮಲನ್ - 358 ಇನಿಂಗ್ಸ್

IND vs ENG: ʻನಾಚಿಕೆಗೇಡಿನ ಸಂಗತಿʼ-ರೋಹಿತ್‌, ಕೊಹ್ಲಿ ಟೆಸ್ಟ್‌ ನಿವೃತ್ತಿ ಬಗ್ಗೆ ಕ್ರಿಸ್‌ ವೋಕ್ಸ್‌ ಪ್ರತಿಕ್ರಿಯೆ!

ಯಾರ್ಕ್‌ಶೈರ್‌ಗೆ 106 ರನ್ ಗೆಲುವು

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಯಾರ್ಕ್‌ಶೈರ್‌ ನಾಯಕ ಡಾವಿಡ್ ಮಲನ್ (88 ರನ್) ಹಾಗೂ ವಿಲಿಯಂ ಲಕ್ಸ್ಟನ್ (64 ರನ್) ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 213 ರನ್ ಗಳಿಸಿದೆ. ಲೋಗನ್ ವಾನ್ ಬಿಕ್ 47 ರನ್‌ ನೀಡಿ 3 ವಿಕೆಟ್‌ ಕಿತ್ತರು. 218 ರನ್‌ಗಳ ಕಠಿಣ ಗುರಿ ಹಿಂಬಾಲಿಸಿದ ಲೂಯಿಸ್ ಕಿಂಬರ್ ಪಡೆ, ಜಾಫರ್ ಚೋಹಾನ್ಸ್ (27ಕ್ಕೆ 4) ಹಾಗೂ ಡೊಮ್ ಬೆಸ್ (25ಕ್ಕೆ2) ಅವರ ಬೌಲಿಂಗ್ ದಾಳಿಗೆ ನಲುಗಿ 107 ರನ್ ಗಳಿಗೆ ಸರ್ವಪತನಗೊಂಡು 106 ರನ್‌ಗಳ ಭಾರೀ ಅಂತರದಿಂದ ಸೋಲು ಕಂಡಿತು.