ನವದೆಹಲಿ: ಜೂನ್ 21 ರಂದು ಭಾನುವಾರ ಶ್ರೀಲಂಕಾದಲ್ಲಿ ತಮ್ಮ ನಾಯಕತ್ವದಲ್ಲಿ ಭಾರತ ಎ ತಂಡಕ್ಕೆ ತ್ರಿಕೋನ ಏಕದಿನ ಸರಣಿಯನ್ನು ಗೆಲ್ಲಿಸಿದ್ದ ತಿಲಕ್ ವರ್ಮಾ(Tilak Verma), ಜೂನ್ 22 ರಂದು ಸೋಮವಾರ ತವರಿಗೆ ಆಗಮಿಸಿ ಶ್ರೀನಿಧಿ ಯೂನಿವರ್ಸಿಟಿಯ ಟಿಜಿ20 (TG20) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಶತಕದ ಮೂಲಕ ಮೆಡಾಕ್ ಫಾಲ್ಕನ್ಸ್ ತಂಡವನ್ನು ಗೆಲ್ಲಿಸಿದ್ದಾರೆ. ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವಾರಂಗಲ್ ವಾರಿಯರ್ಸ್ ನೀಡಿದ್ದ 259 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮೆಡಾಕ್ ಫಾಲ್ಕನ್ಸ್ ತಂಡ, ತಿಲಕ್ ಅವರ ಸ್ಪೋಟಕ ಶತಕದ ಮೂಲಕ ಗೆದ್ದು ಬೀಗಿತು.
ಟೂರ್ನಿಯ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ನಡೆಸಿದ್ದ ವಾರಂಗಲ್ ವಾರಿಯರ್ಸ್ ತಂಡ, ತಮ್ಮ ನಾಯಕ ಹಾಗೂ ಆರಂಭಿಕ ಅಮನ್ ರಾವ್ ಪೇರಳ ಅವರು ಕೇವಲ 48 ಎಸೆತಗಳಲ್ಲಿ 13 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 142 ರನ್‌ಗಳನ್ನು ಬಾರಿಸಿದ್ದಾರೆ. ಇವರು ಕೇವಲ 32 ಎಸೆತಗಳಲ್ಲಿಯೇ ಶತಕವನ್ನು ಭಾರಿಸಿದ್ದರು. ಇದು ಟೂರ್ನಿಯಲ್ಲಿ ಮೊದಲ ಶತಕವಾಗಿದೆ.
IND vs IRE: ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಸ್ಥಾನಕ್ಕೆ ಸುರ್ಯಾಂಶ್ ಶೆಡ್ಗೆಗೆ ಸ್ಥಾನ!
ದೊಡ್ಡ ಮೊತ್ತದ ಗುರಿಯನ್ನು ನೀಡಿದ ಹೊರತಾಗಿಯೂ ವಾರಂಗಲ್ ವಾರಿಯರ್ಸ್ ತಂಡ, ಎದುರಾಳಿ ಮೆಡಾಕ್ ಫಾಲ್ಕನ್ಸ್ ತಂಡವನ್ನು ಕಟ್ಟಿ ಹಾಕುವಲ್ಲಿ ವಿಫಲವಾಯಿತು. ವಿಶೇಷವಾಗಿ ಟೀಮ್ ಇಂಡಿಯಾ ಬ್ಯಾಟರ್ ತಿಲಕ್ ವರ್ಮಾ ಅವರ ಬ್ಯಾಟಿಂಗ್ ಅಬ್ಬರನ್ನು ನಿಲ್ಲಿಸಲು ವಾರಿಯರ್ಸ್ ತಂಡದ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಸ್ಪೋಟಕ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ, ಕೇವಲ 56 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ ಅಜೇಯ 136 ರನ್ ಗಳಿಸಿ ಮೆಡಾಕ್ ಫಾಲ್ಕನ್ಸ್ ತಂಡವನ್ನು ಗೆಲ್ಲಿಸಿದರು.
ತಿಲಕ್ ವರ್ಮಾ ಜೊತೆಗೆ ಕೊನೆಯಲ್ಲಿ ಹಂತದಲ್ಲಿ ವಿಕ್ರಮ್ ನಾಯಕ್ ಅವರು ಕೂಡ ನಿರ್ಣಾಯಕ ಪ್ರದರ್ಶನವನ್ನು ತೋರಿದರು. ಅವರು ಆಡಿದ ಕೇವಲ 12 ಎಸೆತಗಳಲ್ಲಿ 27 ರನ್‌ಗಳನ್ನು ಗಳಿಸಿ, ಫಾಲ್ಕನ್ಸ್ ತಂಡದ ಮೂರು ವಿಕೆಟ್ ಗೆಲುವಿಗೆ ನೆರವು ನೀಡಿದರು. ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆದ್ದಿದ್ದು ವಿಶೇಷ. ಈ ಪಂದ್ಯದ ಗೆಲುವಿನ ಬಳಿಕ ತಿಲಕ್ ವರ್ಮಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ vs ಐರ್ಲೆಂಡ್ ಟಿ20; ಮುಖಾಮುಖಿ, ರನ್, ವಿಕೆಟ್ ದಾಖಲೆ ಹೇಗಿದೆ?
ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ತಿಲಕ್ ವರ್ಮಾ ಸಜ್ಜು
ನೂತನ ನಾಯಕ ಶ್ರೇಯಸ್ ಅಯ್ಯರ್ ಅವರ ಸಾರಥ್ಯದಲ್ಲಿ ಭಾರತ ಟಿ20 ತಂಡ ಜೂನ್ 26 ರಂದು ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯನ್ನು ಆರಂಭಿಸಲಿದೆ. ಈ ಸರಣಿಯಲ್ಲಿ ಭಾರತ ತಂಡ ಎರಡು ಪಂದ್ಯಗಳನ್ನು ಆಡಲಿದೆ. ಈ ಸರಣಿಯ ಮೂಲಕ ತಿಲಕ್ ವರ್ಮಾ ಭಾರತ ತಂಡಕ್ಕೆ ಮರಳಲಿದ್ದಾರೆ. ಈ ಸರಣಿಯ ಬಳಿಕ ಭಾರತ ತಂಡ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ.