ಭಾರತ vs ಐರ್ಲೆಂಡ್ ಟಿ20; ಮುಖಾಮುಖಿ, ರನ್, ವಿಕೆಟ್ ದಾಖಲೆ ಹೇಗಿದೆ?
India vs Ireland T20Is: ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಜಸ್‌ಪ್ರೀತ್ ಬುಮ್ರಾ ಹೆಸರಿನಲ್ಲಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ 4.26 ರ ಅತ್ಯುತ್ತಮ ಎಕಾನಮಿಯಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಏಳು ವಿಕೆಟ್‌ಗಳನ್ನು ಗಳಿಸಿದ್ದಾರೆ.
India vs Ireland T20Is -
ನವದೆಹಲಿ, ಜೂ.23: ಟೀಮ್ ಇಂಡಿಯಾದ ಮುಂದಿನ ಟಿ20 ಕ್ಯಾಲೆಂಡರ್ ಜೂನ್ 24 ರಂದು ಬೆಲ್‌ಫಾಸ್ಟ್‌ನಲ್ಲಿ ಪ್ರಾರಂಭವಾಗುವ ಐರ್ಲೆಂಡ್(India vs Ireland T20Is) ವಿರುದ್ಧದ ಎರಡು ಪಂದ್ಯಗಳ ಸರಣಿಯೊಂದಿಗೆ ಆರಂಭವಾಗುತ್ತದೆ. ಬಿಸಿಸಿಐ 15 ಸದಸ್ಯರ ಬಲಿಷ್ಠ ತಂಡವನ್ನು ಘೋಷಿಸಿದ್ದು, 15 ವರ್ಷದ ಪ್ರತಿಭೆ ವೈಭವ್ ಸೂರ್ಯವಂಶಿಯನ್ನೂ ಸರಣಿಗೆ ಆಯ್ಕೆ ಮಾಡಿದೆ. ಐಪಿಎಲ್ 2026 ರಲ್ಲಿ ಸೂರ್ಯವಂಶಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಕಳೆದ ಭಾನುವಾರ ಲಂಕಾ ವಿರುದ್ಧದ ತ್ರಿಕೋನ ಏಕದಿನ ಫೈನಲ್‌ನಲ್ಲಿ ಅತಿ ವೇಗ ಅರ್ಧಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ಈ ಸರಣಿಯಲ್ಲೂ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.
ಐರ್ಲೆಂಡ್ ತಂಡ ನೂತನ ನಾಯಕ ಲೋರ್ಕನ್ ಟಕರ್ ಅವರ ಸಾರಥ್ಯದಲ್ಲಿ ಮೊದಲ ಸರಣಿ ಆಡಲಿದೆ. 2026ರ ಪುರುಷರ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಪಾಲ್ ಸ್ಟಿರ್ಲಿಂಗ್ ರಾಜೀನಾಮೆ ನೀಡಿದ ಕಾರಣ ಟಕರ್‌ಗೆ ನಾಯಕತ್ವ ನೀಡಲಾಯಿತು. ಭಾರತ ತಂಡ ಕೂಡ ನೂತನ ನಾಯಕ ಶ್ರೇಯಸ್ ಅಯ್ಯರ್ ಅವರ ಸಾರಥ್ಯದಲ್ಲಿ ಆಡಲಿದೆ.
ಮುಖಾಮುಖಿ ದಾಖಲೆ
ಭಾರತ ಮತ್ತು ಐರ್ಲೆಂಡ್ ತಂಡಗಳು ಟಿ20ಐಗಳಲ್ಲಿ ಎಂಟು ಬಾರಿ ಮುಖಾಮುಖಿಯಾಗಿದ್ದು ಭಾರತ ಅಜೇಯವಾಗಿದೆ. ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾದದ್ದು 2024 ರ ನ್ಯೂಯಾರ್ಕ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸಮಯದಲ್ಲಿ, ಆ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು.
ಕಳಪೆ ಪ್ರದರ್ಶನದ ಮಧ್ಯೆಯೂ ಸಿಎಸ್‌ಕೆ ಮುಖ್ಯ ಕೋಚ್ ಆಗಿ ಸ್ಟೀಫನ್ ಫ್ಲೆಮಿಂಗ್ ಮುಂದುವರಿಕೆ
ಅತಿ ಹೆಚ್ಚು ರನ್‌ಗಳು
ಇತ್ತಂಡಗಳ ವೈಯಕ್ತಿಕ ರನ್ ದಾಖಲೆ ನೋಡುವುದಾದರೆ, ರೋಹಿತ್ ಶರ್ಮಾ ನಾಲ್ಕು ಪಂದ್ಯಗಳಲ್ಲಿ 138.62 ಸ್ಟ್ರೈಕ್ ರೇಟ್‌ನಲ್ಲಿ 201 ರನ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಂಡ್ರ್ಯೂ ಬಲ್ಬಿರ್ನಿ ಏಳು ಪಂದ್ಯಗಳಿಂದ 130.89 ಸರಾಸರಿಯಲ್ಲಿ 161 ರನ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ರೋಹಿತ್ ಟಿ20ಯಿಂದ ನಿವೃತ್ತಿಯಾಗಿದ್ದಾರೆ.
ಅತಿ ಹೆಚ್ಚು ಸಿಕ್ಸರ್
ಏಳು ಪಂದ್ಯಗಳಲ್ಲಿ 11 ಸಿಕ್ಸರ್‌ಗಳೊಂದಿಗೆ ಆಂಡ್ರ್ಯೂ ಬಲ್ಬಿರ್ನಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಒಂಬತ್ತು ಸಿಕ್ಸರ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದರೆ, ದೀಪಕ್ ಹೂಡಾ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎಂಟು ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಕೇವಲ ಒಂದು ಪಂದ್ಯ ಆಡಿರುವ ಕೆ.ಎಲ್ ರಾಹುಲ್ ಆರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
'ಬಾಲ್ಯದ ಕನಸು ನನಸಾದ ಕ್ಷಣ'; ಟೀಮ್ ಇಂಡಿಯಾ ಜೆರ್ಸಿ ಧರಿಸಿ ಭಾವುಕರಾದ ವೈಭವ್ ಸೂರ್ಯವಂಶಿ
ಅತಿ ಹೆಚ್ಚು ವಿಕೆಟ್
ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಜಸ್‌ಪ್ರೀತ್ ಬುಮ್ರಾ ಹೆಸರಿನಲ್ಲಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ 4.26 ರ ಅತ್ಯುತ್ತಮ ಎಕಾನಮಿಯಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಏಳು ವಿಕೆಟ್‌ಗಳನ್ನು ಗಳಿಸಿದ್ದಾರೆ.