ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ಬರೋಡ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ (Dhruv Jurel) ಅವರು ಬರೋಡ ವಿರುದ್ಧದ ಎಲೈಟ್ ಬಿ ಪಂದ್ಯದಲ್ಲಿ ಭರ್ಜರಿ ಶತಕಗವನ್ನು ಬಾರಿಸಿದ್ದಾರೆ. ಆ ಮೂಲಕ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಬಿಸಿಸಿಐ ಆಯ್ಕೆದಾರರಿಗೆ ಸಂದೇಶವನ್ನು ರವಾನಿಸಿದ್ದಾರೆ. ಅವರು ಉತ್ತರ ಪ್ರದೇಶ ತಂಡದ ಪರ ಈ ಇನಿಂಗ್ಸ್ ಮೂಡಿ ಬಂದಿದೆ. ಈ ಪಂದ್ಯದಲ್ಲಿ 101 ಎಸೆತಗಳನ್ನು ಆಡಿದ ಅಜೇಯ ಅಜೇಯ 160 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಉತ್ತರ ಪ್ರದೇಶ (Uttara Pradesh) ತಂಡ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 369 ರನ್‌ಗಳನ್ನು ಕಲೆ ಹಾಕಿದೆ.
ಸ್ಪೋಟಕ ಬ್ಯಾಟ್ ಮಾಡಿದ ಧ್ರುವ್ ಜುರೆಲ್ ಅವರು ತಮ್ಮ ಇನಿಂಗ್ಸ್‌ನಲ್ಲಿ 8 ಸಿಕ್ಸರ್ ಹಾಗೂ 15 ಬೌಂಡರಿಗಳನ್ನು ಬಾರಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಧ್ರುವ್ ಜುರೆಲ್ ಅವರ ಮೊದಲ ಶತಕ ಇದಾಗಿದೆ. ಆ ಮೂಲಕ ಪ್ರಸ್ತುತ ನಡೆಯುತ್ತಿರುವ 50 ಓವರ್‌ಗಳ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 61 ಎಸೆತಗಳಲ್ಲಿ 80 ರನ್‌ಗಳನ್ನು ಬಾರಿಸಿದ್ದರು. ನಂತರ ಚಂಡೀಗಢ ವಿರುದ್ಧದ ಪಂದ್ಯದಲ್ಲಿ 57 ಎಸೆತಗಳಲ್ಲಿ 67 ರನ್‌ಗಳನ್ನು ಗಳಿಸಿದ್ದರು.
INDW vs SLW: ಮಂಧಾನಾ-ಶಫಾಲಿ ಅಬ್ಬರ, ನಾಲ್ಕನೇ ಟಿ20ಐಯನ್ನೂ ಗೆದ್ದ ಭಾರತ ವನಿತೆಯರು!
ಈ ಶತಕದ ಮೂಲಕ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರು ಆಡಿದ ಮೂರು ಇನಿಂಗ್ಸ್‌ಗಳಿಂದ 153.50ರ ಸರಾಸರಿಯಲ್ಲಿ 307 ರನ್‌ಗಳನ್ನು ಬಾರಿಸಿದ್ದಾರೆ. ಜನವರಿ 11 ರಂದು ನ್ಯೂಜಿಲೆಂಡ್ ಹಾಗೂ ಭಾರತ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಧ್ರುವ್ ಜುರೆಲ್ ಅವರ ಬ್ಯಾಟ್‌ನಿಂದ ಈ ರನ್‌ಗಳು ಮೂಡಿ ಬಂದಿವೆ. ಹಾಗಾಗಿ ಬಿಸಿಸಿಐ ಆಯ್ಕೆದಾರರು ಕೂಎ ಜುರೆಲ್ ಮೇಲೆ ಕಣ್ಣಿಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರದ್ಧದ ಏಕದಿನ ಸರಣಿಯ ವೇಳೆ ಧ್ರುವ್ ಜುರೆಲ್ ಅವರು 50 ಓವರ್‌ಗಳ ಸ್ವರೂಪಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿಐೂ ಜುರೆಲ್ ಇದ್ದರು. ಆದರೆ ಅವರು ಇಲ್ಲಿ ಪ್ಲೇಯಿಂಗ್ Xiನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಅಂದ ಹಾಗೆ ಕಿವೀಸ್ ಎದುರಿನ ಏಕದಿನ ಸರಣಿಯ ಭಾರತ ತಂಡದಿಂದ ರಿಷಭ್ ಪಂತ್ ಅವರನ್ನು ಕೈ ಬಿಡಲಾಗುವುದು ಎಂದು ವರದಿಯಾಗಿದೆ. ಹಾಗಾಗಿ ಧ್ರುವ್ ಜುರೆಲ್ ಅವರನ್ನು ಒಡಿಐ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಭಾರತ vs ನ್ಯೂಜಿಲೆಂಡ್; ಇಂದೋರ್ ಏಕದಿನ ಪಂದ್ಯಕ್ಕೆ ವಿದ್ಯಾರ್ಥಿಗಳು, ವಿಕಲಚೇತನ ಅಭಿಮಾನಿಗಳಿಗೆ ವಿಶೇಷ ಟಿಕೆಟ್
ಬರೋಡ ವಿರುದ್ಧದ ಪಂದ್ಯದಲ್ಲಿ ಧ್ರುವ್ ಜುರೆಲ್ ಶತಕ ಸಿಡಿಸುವುದಕ್ಕೂ ಮುನ್ನ ಮೊದಲನೇ ವಿಕೆಟ್‌ಗೆ ಆರ್ಯನ್ ಜುಯೆಲ್ (38 ರನ್) ಹಾಗೂ ಅಭಿಷೇಕ್ ಗೋಸ್ವಾಮಿ (51 ರನ್) ಅವರು ಮೊದಲನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವನ್ನು ಆಡಿದ್ದರು. ನಂತರ ಜುರೆಲ್ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದರು. ನಂತರ ಉತ್ತರ ಪ್ರದೇಶ 18.2 ಓವರ್‌ಗಳಿಗೆ 92 ರನ್‌ಗಳಿಗೆ 3 ವಿಕೆಟ್‌ಗಳನ್ನುಕಳೆದುಕೊಂಡಿತ್ತು. ನಂತರ ಜುರೆಲ್ ಹಾಗೂ ರಿಂಕು ಸಿಂಗ್ 120 ಎಸೆತಗಳಲ್ಲಿ 131 ರನ್‌ಗಳನ್ನು ಕಲೆ ಹಾಕಿದ್ದರು. ನಂತರ ಪ್ರಶಾಂತ್ ತಿವಾರಿ ಅವರ ಜೊತೆಗೆ ಆರನೇ ವಿಕೆಟ್‌ಗೆ 52 ಎಸೆತಗಳಲ್ಲಿ 122 ರನ್‌ಗಳ ಜೊತೆಯಾಟವನ್ನು ಆಡಿದ್ದರು.