ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೆಲ ಅಂಕಿಅಂಶಗಳು ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತವೆ. ಅಂತದ್ದೇ ಒಂದು ಕುತೂಹಲಕಾರಿ ಸಂಗತಿ ಎಂದರೆ Royal Challengers Bengaluru ಮತ್ತು Gujarat Titans ನಡುವಿನ ಪಂದ್ಯಗಳ ಫಲಿತಾಂಶ. ಈ ಎರಡು ತಂಡಗಳ ನಡುವೆ ಈ ಹಿಂದೆ ನಡೆದ ಎಲ್ಲಾ 6 ಪಂದ್ಯಗಳಲ್ಲೂ ಗುರಿ ಬೆನ್ನತ್ತಿದ (ಚೇಸಿಂಗ್) ತಂಡವೇ ಗೆಲುವು ದಾಖಲಿಸಿದೆ ಎಂಬುದು ವಿಶೇಷ.
ಟಿ20 ಕ್ರಿಕೆಟ್‌ನಲ್ಲಿ ಟಾಸ್ ಮತ್ತು ಪಿಚ್ ಪರಿಸ್ಥಿತಿ ಬಹಳ ಮಹತ್ವದ್ದು. ವಿಶೇಷವಾಗಿ, ಚೇಸ್ ಮಾಡುವಾಗ ಗುರಿ ಸ್ಪಷ್ಟವಾಗಿರುವುದರಿಂದ ಬ್ಯಾಟ್ಸ್‌ಮನ್‌ಗಳು ಯೋಜಿತವಾಗಿ ಆಟ ಆಡಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ RCB ಮತ್ತು GT ನಡುವಿನ ಪಂದ್ಯಗಳಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳು ಹೆಚ್ಚಿನ ಬಾರಿ ಮೇಲುಗೈ ಸಾಧಿಸಿವೆ.
ಇದರ ಜೊತೆಗೆ, ಐಪಿಎಲ್‌ನಲ್ಲಿ ಡ್ಯೂ (dew) ಅಂದ್ರೆ ಹುಲ್ಲಿನ ಮೇಲೆ ಮೂಡುವ ತೇವಾಂಶದ ಫ್ಯಾಕ್ಟರ್ ಕೂಡ ಫಲಿತಾಂಶದ ಮೇಲೆ ಪ್ರಮುಖ ಪಾತ್ರವಹಿಸುತ್ತದೆ. ರಾತ್ರಿ ಪಂದ್ಯಗಳಲ್ಲಿ ಮೈದಾನದಲ್ಲಿ ತೇವಾಂಶ ಹೆಚ್ಚಾಗುವುದರಿಂದ ಬೌಲರ್‌ಗಳಿಗೆ ಚೆಂಡಿನ ಮೇಲಿನ ಹಿಡಿತ (ಗ್ರಿಪ್) ಕಡಿಮೆಯಾಗುತ್ತದೆ. ಇದರಿಂದ ಬ್ಯಾಟಿಂಗ್ ತಂಡಕ್ಕೆ ಅನುಕೂಲ. ಈ ಅಂಶವೂ RCB vs GT ಪಂದ್ಯಗಳಲ್ಲಿ ಚೇಸ್ ಮಾಡುವ ತಂಡಗಳ ಗೆಲುವಿಗೆ ಮುಖ್ಯ ಕಾರಣವಾಗಿರಬಹುದು.
IPL 2026: ಆರ್‌ಸಿಬಿ ತಂಡದ ಹೀಗೊಬ್ಬ ಅಭಿಮಾನಿ; ವಿಡಿಯೊ ವೈರಲ್
ಆದರೆ, ಈ ದಾಖಲೆ ಮುಂದುವರೆಯುತ್ತದೆಯೇ ಎಂಬುದು ಕುತೂಹಲಕಾರಿ ಪ್ರಶ್ನೆ. ಕ್ರಿಕೆಟ್ ಅನಿಶ್ಚಿತ ಆಟವಾಗಿದ್ದು, ಒಂದೇ ಪಂದ್ಯದಲ್ಲಿ ಎಲ್ಲವೂ ಬದಲಾಗಬಹುದು. ಮುಂದಿನ ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗುವಾಗ ಈ ಟ್ರೆಂಡ್ ಮುಂದುವರಿಯುತ್ತದೆಯೋ ಅಥವಾ ಮುರಿಯುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ (ಏಪ್ರಿಲ್ 24) ಈ ಹೈ ವೋಲ್ಟೇಜ್ ಕದನ ನಡೆಯಲಿದ್ದು, ಅಂಕಿ-ಅಂಶ ಬದಲಾಗುವುದೇ ಎಂಬ ಕುತೂಹಲ ಮೂಡಿದೆ.
ಒಟ್ಟಾರೆ, RCB ವಸರ್ಸ್ GT ನಡುವಿನ ಈ ವಿಶಿಷ್ಟ ದಾಖಲೆ ಐಪಿಎಲ್‌ಗೆ ಮತ್ತಷ್ಟು ರೋಚಕತೆ ಹೆಚ್ಚಿಸಿದ್ದು, ಅಭಿಮಾನಿಗಳಲ್ಲಿ ಕ,ುತೂಹಲ ಹುಟ್ಟುಹಾಕಿದೆ. ಮೊದಲು ಬ್ಯಾಟ್ ಮಾಡುವ ತಂಡ ಬೃಹತ್ ಮೊತ್ತದಾಖಲಿಸಿದರೆ ಒಂದು ಹೈ ಸ್ಕೋರಿಂಗ್ ಮತ್ತು ರೋಚಕ ಚೇಸಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದು.
ಆರ್‌ಸಿಬಿ-ಚೆನ್ನೈ ಪಂದ್ಯದ ಟಿಕೆಟ್ ಒಂದೇ ನಿಮಿಷದಲ್ಲಿ ಸೋಲ್ಡೌಟ್
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11
01. ವಿರಾಟ್ಚ ಕೊಹ್ಲಿ (ಓಪನರ್)
02. ಫಿಲ್ ಸಾಲ್ಟ್ (ಓಪನರ್)
03. ದೇವದತ್ ಪಡಿಕ್ಕಲ್ (ಬ್ಯಾಟರ್)
04. ರಜತ್ ಪಾಟೀದಾರ್ (ಬ್ಯಾಟರ್/ ನಾಕಯ)
05. ಟಿಮ್ ಡೇವಿಡ್ (ಆಲ್‌ರೌಂಡರ್)
06. ಜಿತೇಶ್ ಶರ್ಮಾ (ವಿಕೆಟ್‌ಕೀಪರ್)
07. ರೊಮಾರಿಯೋ ಶೆಫರ್ಡ್ (ಆಲ್‌ರೌಂಡರ್)
08. ಕೃಣಾಲ್ ಪಾಂಡ್ಯ (ಆಲ್‌ರೌಂಡರ್)
09. ಭುವನೇಶ್ವರ್ ಕುಮಾರ್ (ಫಾಸ್ಟ್ ಬೌಲರ್)
- ರಸಿಖ್ ಸಲಾಮ್ (ಫಾಸ್ಟ್ ಬೌಲರ್)
- ಜಾಶ್ ಹೇಝಲ್‌ವುಡ್ (ಫಾಸ್ಟ್ ಬೌಲರ್)
- ಸುಯಶ್ ಶರ್ಮಾ (ಸ್ಪಿನ್ನರ್ / ಇಂಪ್ಯಾಕ್ಟ್ ಪ್ಲೇಯರ್)
ಚಿನ್ನಸ್ವಾಮಿಯಲ್ಲಿ ಇಂದು ನಡೆಯಲಿರುವ RCB Vs GT ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಪಿಚ್ ವರದಿ ಹೇಗಿದೆ?
ಗುಜರಾತ್ ಟೈಟನ್ಸ್ ಸಂಭಾವ್ಯ ಪ್ಲೇಯಿಂಗ್ 11
01. ಸಾಯ್ ಸುದರ್ಶನ್ (ಓಪನರ್)
02. ಶುಭಮನ್ ಗಿಲ್ (ಓಪನರ್/ ನಾಯಕ)
03. ಜೋಸ್ ಬಟ್ಲರ್ (ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್)
04. ವಾಷಿಂಗ್ಟನ್ ಸುಂದರ್ (ಆಲ್‌ರೌಂಡರ್)
05. ಗ್ಲೆನ್ ಫಿಲಿಪ್ಸ್ (ಬ್ಯಾಟರ್)
06. ರಾಹುಲ್ ತೆವಾಟಿಯಾ (ಆಲ್‌ರೌಂಡರ್)
07. ರಶೀದ್ ಖಾನ್ (ಆಲ್‌ರೌಂಡರ್)
08. ಶಾರುಖ್ ಖಾನ್ (ಬ್ಯಾಟರ್)
09. ಕಗಿಸೊ ರಬಾಡ (ಫಾಸ್ಟ್ ಬೌಲರ್)
- ಮೊಹಮ್ಮದ್ ಸಿರಾಜ್ (ಫಾಸ್ಟ್ ಬೌಲರ್)
- ಪ್ರಸಿಧ್ ಕೃಷ್ಣ (ಫಾಸ್ಟ್ ಬೌಲರ್)
- ಸಾಯ್ ಕಿಶೋರ್ (ಸ್ಪಿನ್ನರ್/ ಇಂಪ್ಯಾಕ್ಟ್ ಪ್ಲೇಯರ್)