ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI: ಭಾರತ ಟಿ 20 ತಂಡದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿಯ ಪಾತ್ರವನ್ನು ವಹಿಸಿದ ದಿನೇಶ್‌ ಕಾರ್ತಿಕ್!‌

ವೆಸ್ಟ್‌ ಇಂಡೀಸ್‌ ವಿರುದ್ಧ ಮೂರನೇ ಪಂದ್ಯದಲ್ಲಿ ಭಾರತ ತಂಡದ ಗೆಲುವಿನ ಬಳಿಕ ಮಾಜಿ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌, ನಿತೀಶ್‌ ಕುಮಾರ್‌ ರೆಡ್ಡಿ ಅವರ ಪಾತ್ರವನ್ನು ವಿವರಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಭಾರತ ತಂಡ 14 ರನ್‌ಗಳ ಗೆಲುವಿನ ಬಳಿಕ ಟಿ20ಐ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆಯನ್ನು ಪಡೆದಿದೆ.

ಭಾರತ ತಂಡದಲ್ಲಿ ನಿತೀಶ್‌ ರೆಡ್ಡಿಯ ಪಾತ್ರವನ್ನು ವಿವರಿಸಿದ ಕಾರ್ತಿಕ್‌!

ನಿತೀಶ್‌ ರೆಡ್ಡಿ ಪಾತ್ರವನ್ನು ವಿವರಿಸಿದ ದಿನೇಶ್‌ ರೆಡ್ಡಿ. -

Profile
Ramesh Kote Oct 12, 2026 4:00 PM

ಇಂದೋರ್:‌ ವೆಸ್ಟ್‌ ಇಂಡೀಸ್‌ ತಂಡವನ್ನು ಮೂರನೇ ಪಂದ್ಯದಲ್ಲಿ (IND vs WI) 14 ರನ್‌ಗಳಿಂದ ಮಣಿಸಿದ ಭಾರತ ತಂಡದಲ್ಲಿ ಆಲ್‌ರೌಂಡರ್‌ ನಿತೀಶ್‌ಕುಮಾರ್‌ ರೆಡ್ಡಿ (Nitish Kumar Reddy) ಅವರ ಪಾತ್ರವನ್ನು ದಿನೇಶ್‌ ಕಾರ್ತಿಕ್‌ (Dinesh Karthik) ವಿವರಿಸಿದ್ದಾರೆ. ಮೂರನೇ ಪಂದ್ಯದ ಗೆಲುವಿನ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ ಮೂರು ಪಂದ್ಯಗಳ ಅಂತ್ಯಕ್ಕೆ ಟಿ20ಐ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ.

ಪಂದ್ಯದ ಗೆಲುವಿನ ಬಳಿಕ ಟೀಮ್‌ ಇಂಡಿದ ಪ್ರದರ್ಶನದ ಬಗ್ಗೆ ಹಲವು ಮಾಜಿ ಆಟಗಾರರು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ದಿನೇಶ್‌ ಕಾರ್ತಿಕ್‌ ಅವರು, ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರ ಪ್ರದರ್ಶನದ ಬಗ್ಗೆ ಮಾತನಾಡಿದರು. ರಡ್ಡಿ ಬ್ಯಾಟಿಂಗ್‌ನಲ್ಲಿ 14 ಎಸೆತಗಳಲ್ಲಿ 21 ರನ್‌ ಹಾಗೂ ಬೌಲಿಂಗ್‌ನಲ್ಲಿ ಎರಡು ಓವರ್‌ಗಳಲ್ಲಿ ಒಂದು ವಿಕೆಟ್‌ ಪಡೆದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ಗೆ ಅನುಕೂಲಕರವಾದ ಫ್ಲಾಟ್ ಪಿಚ್‌ಗಳಲ್ಲಿ ಬೌಲರ್‌ಗಳಿಗೆ ಸಾಕಷ್ಟು ವೇಗವಿಲ್ಲದಿದ್ದರೆ, ಎದುರಾಳಿ ತಂಡಕ್ಕೆ ಗುರಿ ಬೆನ್ನಟ್ಟುವುದು ಸುಲಭವಾಗುತ್ತದೆ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ನವರಾತ್ರಿ ಮೊದಲ ದಿನವೇ ಟೀಮ್‌ ಇಂಡಿಯಾಕ್ಕೆ ಗೆಲುವಿನ ಸಿಂಚನ; ವಿಂಡೀಸ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ರೋಚಕ ಜಯ

“ಅವರು ಉತ್ತಮ ಬೌಲರ್ ಆಗಿ ಬೆಳೆಯುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಪ್ರತಿ ಪಂದ್ಯದಲ್ಲೂ ಅವರ ಆತ್ಮವಿಶ್ವಾಸ ಹೆಚ್ಚುತ್ತಿರುವುದು ಕಾಣಿಸುತ್ತಿದೆ. ಆರಂಭದಲ್ಲಿ ಅವರಿಗೆ ಹೊಸ ಚೆಂಡಿನಲ್ಲಿ ಬೌಲ್‌ ಮಾಡುವ ಅವಕಾಶ ನೀಡಲಾಗಿತ್ತು. ಆದರೆ, ತಂಡಕ್ಕೆ ಅವರಿಂದ ಬೇಕಾದ ಫಲಿತಾಂಶ ಸಿಗುತ್ತಿಲ್ಲ ಎಂಬುದನ್ನು ಅರಿತು, ಈಗ ಮಧ್ಯಮ ಓವರ್‌ಗಳಲ್ಲಿ ಬೌಲ್ ಮಾಡಲು ಅವಕಾಶ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಹೆಚ್ಚಿನ ಒತ್ತಡವಿಲ್ಲದ ಓವರ್‌ಗಳನ್ನು ನೀಡುವ ಮೂಲಕ ಅವರಿಗೆ ಉತ್ತಮ ಅವಕಾಶ ಕಲ್ಪಿಸಿದ್ದಾರೆ,” ಎಂದು ದಿನೇಶ್ ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿ ಹೇಳಿದ್ದಾರೆ.

ನಮನ್‌ ದೀರ್‌ ಬೆಳವಣಿಗೆ ಬಗ್ಗೆ ರಹಾನೆ ಪ್ರತಿಕ್ರಿಯೆ

ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ನಮನ್ ಧೀರ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ಅಜಿಂಕ್ಯ ರಹಾನೆ, ನಮನ್ ಧೀರ್ ಅವರ ಇತ್ತೀಚಿನ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವುದರ ಜೊತೆಗೆ ಇನಿಂಗ್ಸ್‌ನ ಅಂತಿಮ ಹಂತದಲ್ಲಿ ತಂಡಕ್ಕೆ ನೆರವಾಗುವ ಸಾಮರ್ಥ್ಯ ನಮನ್ ಧೀರ್ ಅವರಿಗಿದೆ ಎಂಬ ವಿಶ್ವಾಸ ನಾಯಕ ಶ್ರೇಯಸ್ ಅಯ್ಯರ್ ಅವರಲ್ಲಿದೆ ಎಂದು ರಹಾನೆ ಅಭಿಪ್ರಾಯಪಟ್ಟಿದ್ದಾರೆ.

IND vs WI: 2,000 ರನ್‌ ಪೂರ್ಣಗೊಳಿಸಿ ಸೂರ್ಯಕುಮಾರ್‌ ಯಾದವ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

“ಶ್ರೇಯಸ್ ಅಯ್ಯರ್ ಅವರಿಗೆ ನಮನ್ ಧೀರ್ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ. ಹೌದು, ನಮನ್ ಧೀರ್ ಬೌಲಿಂಗ್‌ನಲ್ಲಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಮುಖ್ಯವಾದದ್ದು ವಿಕೆಟ್‌ಗಳನ್ನು ಪಡೆಯುವುದು. ಟಿ20 ಮಾದರಿಯಲ್ಲಿ ವಿಕೆಟ್‌ಗಳನ್ನು ಕಬಳಿಸಿದರೆ ಪಂದ್ಯಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ಇಲ್ಲಿ ಅತ್ಯಂತ ಮುಖ್ಯವಾದ ಅಂಶ. ನಮನ್ ಧೀರ್ ತಮ್ಮ ಬೌಲಿಂಗ್ ಸುಧಾರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ ಎಂಬ ವಿಶ್ವಾಸ ನನಗಿದೆ,” ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.