IND vs WI: ಎರಡನೇ ಟಿ20ಐಗೆ ಭಾರತ ತಂಡದಲ್ಲಿ 2 ಬದಲಾವಣೆಯನ್ನು ಸೂಚಿಸಿದ ದಿನೇಶ್ ಕಾರ್ತಿಕ್!
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆಯನ್ನು ಮಾಡಬೇಕೆಂದು ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಸಲಹೆ ನೀಡಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಹಾಗೂ ಪ್ರಿನ್ಸ್ ಯಾದವ್ ಅವರನ್ನು ಆಡುವ ಬಳಗದಲ್ಲಿ ಸೇರಿಸಬೇಕೆಂದು ಅವರು ಸೂಚಿಸಿದ್ದಾರೆ.
ಎರಡನೇ ಪಂದ್ಯಕ್ಕೆ 2 ಬದಲಾವಣೆ ಸೂಚಿಸಿದ ದಿನೇಶ್ ಕಾರ್ತಿಕ್. -
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20ಐ ಪಂದ್ಯಕ್ಕೆ (IND vs WI) ಭಾರತ ತಂಡದ ಪ್ಲೇಯಿಂಗ್ XIನಲ್ಲಿ(India's Playing XI) ಎರಡು ಬದಲಾವಣೆ ಮಾಡಿಕೊಳ್ಳಬೇಕೆಂದು ಟೀಮ್ ಇಂಡಿಯಾ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸಲಹೆ ನೀಡಿದ್ದಾರೆ. ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ಬೆಂಚ್ ಕಾಯಬೇಕೆಂದ ಕಾರ್ತಿಕ್, ಪ್ರಿನ್ಸ್ ಯಾದವ್ ಹಾಗೂ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಅವರಿಗೆ ಪ್ಲೇಯಿಂಗ್ XIನಲ್ಲಿ ಆಡಿಸಬೇಕೆಂದು ಆಗ್ರಹಿಸಿದ್ದಾರೆ. ಮೊದಲನೇ ಪಂದ್ಯದಲ್ಲಿ ಈ ಇಬ್ಬರೂ ಬೆಂಚ್ ಕಾದಿದ್ದರು. ಆದರೂ ಶ್ರೇಯಸ್ ಅಯ್ಯರ್ ಶತಕದ ಬಲದಿಂದ ಭಾರತ ತಂಡ 8 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
2026ರ ಏಷ್ಯಾ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಕೊನೆಯ ಪಂದ್ಯವನ್ನು ವೈಭವ್ ಸೂರ್ಯವಂಶಿ ಇದೀಗ ಬೆಂಚ್ ಕಾದಿದ್ದರು. ಏಕೆಂದರೆ ಎಂದಿನಂತೆ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರನ್ನೇ ಇನಿಂಗ್ಸ್ ಆರಂಭಿಸಲು ಟೀಮ್ ಮ್ಯಾನೇಜ್‌ಮೆಂಟ್ ಅವಕಾಶ ಮಾಡಿಕೊಟ್ಟಿತ್ತು. ಆದರೂ ಮೊದಲನೇ ಪಂದ್ಯದಲ್ಲಿ ಈ ಇಬ್ಬರೂ ವಿಫಲರಾಗಿದ್ದರು. ಅಭಿಷೇಕ್ ಶರ್ಮಾ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಅಭಿಷೇಕ್ ಶರ್ಮಾ 29 ರನ್ ಗಳಿಸಿ ಔಟ್ ಆದರು.
IND vs WI: ಪದಾರ್ಪಣೆ ಪಂದ್ಯದಲ್ಲಿಯೇ 3 ವಿಕೆಟ್ ಕಿತ್ತು ಓಜಾ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ನಮನ್ ಧೀರ್!
ಕ್ರಿಕ್‌ಬಜ್ ಜೊತೆ ಮಾತನಾಡಿದ್ದ ದಿನೇಶ್ ಕಾರ್ತಿಕ್, "ಸಾಧ್ಯವಾದಷ್ಟು ಹಲವು ಆಟಗಾರರಿಗೆ ಪ್ಲೇಯಿಂಗ್ XIನಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಅವಕಾಶ ನೀಡಬೇಕು. ಇದರ ಭಾಗವಾಗಿ ಪ್ರಿನ್ಸ್ ಯಾದವ್ ಮತ್ತು ನಿತೀಶ್ ಕುಮಾರ್ ರೆಡ್ಡಿಗೂ ಎರಡನೇ ಪಂದ್ಯದಲ್ಲಿ ಅವಕಾಶ ನೀಡಬೇಕು. ವೈಭವ್ ಸೂರ್ಯವಂಶಿ ಚಾಂಪಿಯನ್ ಆಟಗಾರ ಹಾಗೂ ಇವರನ್ನು ಇನ್ನೂ ತಂಡದಲ್ಲಿ ಹೆಚ್ಚು ಟೆಸ್ಟ್ ಮಾಡಲಾಗಿಲ್ಲ. ಇವರು ಬೆಂಚ್‌ನಲ್ಲಿ ಕಾಯುವ ಮೂಲಕ ಹಸಿವಿನಿಂದ ಕೂಡಿದ್ದಾರೆ ಹಾಗೂ ಇದು ನ್ಯಾಯಯುತವಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟರೆ ಮಾತ್ರ ವೈಭವ್‌ಗೆ ಪ್ಲೇಯಿಗ್ XIನಲ್ಲಿ ಅವಕಾಶ ಸಿಗಲಿದೆ, ಆದರೆ ಇದು ತಪ್ಪು ಕರೆ," ಎಂದು ತಿಳಿಸಿದ್ದಾರೆ.
ಜಿಂಬಾಬ್ವೆ ವಿರುದ್ಧ ಟಿ20ಐ ಸರಣಿಯ ವೇಳೆ ಜುಲೈನಲ್ಲಿ ಭಾತ ತಂಡದ ಪರ ಆಡುವಾಗ ಪ್ರಿನ್ಸ್ ಯಾದವ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದ್ದರು. ಆದರೆ, ಇವರು ವಿಂಡೀಸ್ ಎದುರು ಏಕದಿನ ಸರಣಿಯಲ್ಲಿ ವೈಫಲ್ಯತೆ ಅನುಭವಿಸಿದ್ದರು.
2027ರ ಏಕದಿನ ವಿಶ್ವಕಪ್‌ಗೆ ಬುಮ್ರಾ-ಭುವಿ ಜೋಡಿ? ಭುವನೇಶ್ವರ್ ಕಮ್‌ಬ್ಯಾಕ್ ಬಳಿಕ ಆರ್ ಅಶ್ವಿನ್ ಭವಿಷ್ಯ!
ಸಂಜು ಸ್ಯಾಮ್ಸನ್‌ಗೆ ಅಜಿಂಕ್ಯ ರಹಾನೆ ಬೆಂಬಲ
ವೈಭವ್ ಸೂರ್ಯವಂಶಿ ಅವರು ಇನ್ನಷ್ಟು ಪಂದ್ಯಗಳಲ್ಲಿ ಬೆಂಚ್ ಕಾಯಬೇಕು ಹಾಗೂ ಭಾರತ ತಂಡದ ಪ್ಲೇಯಿಂಗ್ xiನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಅಜಿಂಕ್ಯ ರಹಾನೆ ಸಲಹೆ ನೀಡಿದ್ದಾರೆ.
"ಸಂಜು ಸ್ಯಾಮ್ಸನ್‌ಗೆ ಈ ಸರಣಿ ಬಹಳ ಮುಖ್ಯವಾಗಿದೆ. ಅವರು ಉತ್ತಮವಾಗಿ ಆಡಿದರೆ ಅದು ಅವರಿಗೆ ಅನುಕೂಲ. ಆದರೆ ಪ್ರದರ್ಶನ ನೀಡಲು ವಿಫಲರಾದರೆ, ವೈಭವ್ ಸೂರ್ಯವಂಶಿ ಈಗಾಗಲೇ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸಂಜು ಮೇಲೆ ಒತ್ತಡ ಹೆಚ್ಚುತ್ತಿದೆ. ಟಿ20 ಕ್ರಿಕೆಟ್‌ನಲ್ಲಿ ಇಂತಹ ಸ್ಪರ್ಧೆ ಸಹಜ. ಸೂರ್ಯವಂಶಿ ಉತ್ತಮ ಕೌಶಲ ಹೊಂದಿದ್ದಾರೆ, ಆದರೆ ತಂಡದ ಆಡಳಿತ ಮಂಡಳಿ ಇತರ ಅಂಶಗಳನ್ನೂ ಪರಿಗಣಿಸುತ್ತದೆ,” ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.
ʻಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಲು 4 ವರ್ಷ ಬೇಕಾಯಿತುʼ: ದಿನೇಶ್ ಕಾರ್ತಿಕ್!
ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಸರಣಿಯಲ್ಲಿ ವೈಭವ್ ಸೂರ್ಯವಂಶಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಆದರೆ ಜಿಂಬಾಬ್ವೆ ವಿರುದ್ಧ ಮತ್ತೆ ರನ್‌ಗಳ ಹಾದಿಗೆ ಮರಳಿದ ಎಡಗೈ ಬ್ಯಾಟರ್, ಕಳೆದ ಐದು ಟಿ20ಐ ಇನಿಂಗ್ಸ್‌ಗಳಲ್ಲಿ 40.80ರ ಸರಾಸರಿಯಲ್ಲಿ 204 ರನ್ ಗಳಿಸಿದ್ದಾರೆ.
ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸರಣಿಶ್ರೇಷ್ಠ ಆಟಗಾರನಾಗಿ ಆಯ್ಕೆಯಾಗಿದ್ದರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರ ಪ್ರದರ್ಶನದ ಮೇಲೆ ಹೆಚ್ಚಿನ ಗಮನ ನೆಟ್ಟಿದ್ದು, ವೈಭವ್ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.