ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Duleep Trophy 2026: ಪಶ್ಚಿಮ ವಲಯ ಎದುರು ಗೆದ್ದು ಸೆಮಿಫೈನಲ್‌ಗೇರಿದ ಉತ್ತರ ವಲಯ!

ಬೆಂಗಳೂರಿನ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಮೈದಾನದಲ್ಲಿ ಪಶ್ಚಿಮ ವಲಯ ಎದುರು 52 ರನ್‌ಗಳಿಂದ ಗೆದ್ದು ಬೀಗಿದ ಉತ್ತರ ವಲಯ ತಂಡ, 2026ರ ದುಲೀಪ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಆ ಮೂಲಕ ಅಂತಿಮ ನಾಲ್ಕರ ಸುತ್ತನಲ್ಲಿ ದಕ್ಷಿಣ ವಲಯ ಎದುರು ಉತ್ತರ ವಲಯ ಕಾದಾಟ ನಡೆಸಲಿದೆ.

ಪಶ್ಚಿಮ ವಲಯದ ಎದುರು 4 ವಿಕೆಟ್‌ ಕಿತ್ತ ಅಬಿದ್‌ ಮುಷ್ತಾಕ್‌.

ಬೆಂಗಳೂರು: ಅಬಿದ್‌ ಮುಷ್ತಾಕ್‌ (Abid Mushtaq) ಅವರ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಉತ್ತರ ವಲಯ ತಂಡ, 2026ರ ದುಲೀಪ್‌ ಟ್ರೋಫಿ (Duleep Trophy 2026) ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪಶ್ಚಿಮ ವಲಯ ಎದುರು 52 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಮಾಡಿತು. ಅಂತಿಮ ನಾಲ್ಕರ ಸುತ್ತಿನಲ್ಲಿ ದಕ್ಷಿಣ ವಲಯ ಎದುರು ಉತ್ತರ ವಲಯ ಕಾದಾಟ ನಡೆಸಲಿದೆ. ಅಂದ ಹಾಗೆ ನಾಲ್ಕನೇ ದಿನವಾದ ಬುಧವಾರ ಪಂದ್ಯವನ್ನು ಗೆಲ್ಲಲು ಉತ್ತರ ವಲಯಕ್ಕೆ ಕೇವಲ ಮೂರು ವಿಕೆಟ್‌ಗಳ ಅಗತ್ಯವಿತ್ತು. ಅದರಂತೆ ಅಬಿದ್‌ ಮುಷ್ತಾಕ್‌ ಅವರು ತಮ್ಮ ಮಾರಕ ಬೌಲಿಂಗ್‌ ದಾಳಿಯ ಮೂಲಕ ಉತ್ತಮ ವಲಯಕ್ಕೆ ಗೆಲುವು ದಕ್ಕಿಸಿಕೊಟರು.

ನಾಲ್ಕನೇ ದಿನ ಪಶ್ಚಿಮ ವಲಯ ತಂಡಕ್ಕೆ ಪಂದ್ಯವನ್ನು ಗೆಲ್ಲಲು 67 ರನ್‌ ಅಗತ್ಯವಿತ್ತು ಹಾಗೂ ಕೈಯಲ್ಲಿ ಕೇವಲ ಮೂರು ವಿಕೆಟ್‌ಗಳು ಇದ್ದವು. ನಾಲ್ಕನೇ ದಿನ ಬೆಳಿಗ್ಗೆ ಅಬಿದ್‌ ಮುಷ್ತಾಕ್‌ ಅವರು ಕೇವಲ ಎರಡನೇ ಎಸೆತದಲ್ಲಿಯೇ ತನುಷ್‌ ಕೋಟಿಯನ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ತುಷಾರ್‌ ದೇಶಪಾಂಡೆ ಅವರು 18ಎಸೆತಗಳಲ್ಲಿ 5 ರನ್‌ ಗಳಿಸಿ ಅಬಿದ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ 35 ಎಸೆತಗಳಲ್ಲಿ 25 ರನ್‌ ಗಳಿಸಿದ ಬಳಿಕ ಊರ್ವಿಲ್‌ ಪಟೇಲ್‌ ವಿಕೆಟ್‌ ಒಪ್ಪಿಸಿದರು. ನಾಲ್ಕನೇ ದಿನ ಕೇವಲ 6.3 ಓವರ್‌ಗಳಿಗೆ ಪಂದ್ಯವನ್ನು ಮುಗಿಸಿದರು.

IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್‌ ಜುರೆಲ್‌!

ಪಶ್ಚಿಮ ವಲಯ ತಂಡ ಮೂರನೇ ದಿನ 4 ವಿಕೆಟ್‌ಗಳಿಗೆ 211 ರನ್‌ಗಳನ್ನು ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಮುಶೀರ್‌ ಖಾನ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ 100 ರನ್‌ಗಳ ಜೊತೆಯಾಟದ ಮೂಲಕ ಪಶ್ಚಿಮ ವಲಯ ತಂಡವನ್ನು ಉತ್ತಮ ಸ್ಥಿತಿಯಲ್ಲಿಟ್ಟಿದ್ದರು. ಆದರೆ, 66 ರನ್‌ ಗಳಿಸಿ ಆಡುತ್ತಿದ್ದ ಗಾಯಕ್ವಾಡ್‌ ರನ್‌ಔಟ್‌ ಆಗುವ ಮೂಲಕ ನಿರಾಶೆ ಮೂಡಿಸಿದರು. ಇನ್ನು 96 ರನ್‌ ಗಳಿಸಿದ ಬಳಿಕ ಮುಶೀರ್‌ ಖಾನ್‌ ಅವರು ಔಟ್‌ ಆಗಿ ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. ಅಂತಿಮವಾಗಿ ಮೂರನೇ ದಿನದಾಟದ ಅಂತ್ಯಕ್ಕೆ ಉತ್ತರ ವಲಯ ತಂಡ, ಎದುರಾಳಿ ಪಶ್ಚಿಮ ವಲಯ ತಂಡವನ್ನು ಕಠಿಣ ಪರಿಸ್ಥಿತಿಗೆ ತಳ್ಳಿತ್ತು.ಆ ಮೂಲಕ ಕೊನೆಯ ದಿನ ಪಶ್ಚಿಮ ವಲಯ ತಂಡಕ್ಕೆ 67 ರನ್‌ ಗಳ ಅಗತ್ಯವಿತ್ತು ಹಾಗೂ ಕೈಯಲ್ಲಿ ಕೇವಲ ಮೂರು ವಿಕೆಟ್‌ಗಳು ಮಾತ್ರ ಬಾಕಿ ಇದ್ದವು.

ದುಲೀಪ್‌ ಟ್ರೋಫಿ ಪಂದ್ಯದಲ್ಲಿ ಹಲವು ಆಟಗಾರರ ಮಹತ್ವದ ಪ್ರದರ್ಶನದ ನೆರವಿನಿಂದ ಉತ್ತರ ವಲಯ ಬಲಿಷ್ಠ ಸ್ಥಿತಿಗೆ ತಲುಪಿದೆ. ಮೊದಲ ಇನಿಂಗ್ಸ್‌ನಲ್ಲಿ ಅಂಶುಲ್‌ ಕಾಂಬೋಜ್‌ 60 ರನ್‌ ಗಳಿಸಿ ತಂಡದ ಇನಿಂಗ್ಸ್‌ಗೆ ಆಸರೆಯಾದರು. ಒಂದು ಹಂತದಲ್ಲಿ 161 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ಉತ್ತರ ವಲಯ ತಂಡವನ್ನು ಕಾಂಬೋಜ್‌ ತಮ್ಮ ಉತ್ತಮ ಬ್ಯಾಟಿಂಗ್‌ ಮೂಲಕ ಮೇಲೆತ್ತಿದರು. ಅವರ ನೆರವಿನಿಂದ ತಂಡ 251 ರನ್‌ ಗಳಿಸಿತು.



ಬಳಿಕ ಹಳೆಯ ಚೆಂಡಿನೊಂದಿಗೆ ಬೌಲಿಂಗ್‌ನಲ್ಲೂ ಮಿಂಚಿದ ಕಾಂಬೋಜ್‌, ಮುಂಬೈನ ಬ್ಯಾಟರ್‌ಗಳಾದ ಶ್ಯಾಮ್ಸ್‌ ಮುಲಾನಿ ಮತ್ತು ತನುಷ್‌ ಕೋಟಿಯನ್‌ ಅವರನ್ನು ಸತತವಾಗಿ ಔಟ್‌ ಮಾಡಿದರು. ಇದರಿಂದ ಉತ್ತರ ವಲಯ ಮೊದಲ ಇನಿಂಗ್ಸ್‌ನಲ್ಲಿ 64 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಆಯುಷ್‌ ಬದೋನಿ ತಂಡಕ್ಕೆ ಮತ್ತಷ್ಟು ಬಲ ತುಂಬಿದರು. ಅವರು ಪಂದ್ಯದಲ್ಲಿ ತಮ್ಮ ಎರಡನೇ ಅರ್ಧಶತಕ ದಾಖಲಿಸಿ ಉತ್ತರ ವಲಯ ತಂಡವನ್ನು ಪ್ರಬಲ ಸ್ಥಿತಿಗೆ ಕೊಂಡೊಯ್ದರು.

12 ತಿಂಗಳ ಬಳಿಕ ಮರಳಿದ ಅರ್ಷ್‌ದೀಪ್‌ ಸಿಂಗ್‌ ಮಿಂಚು

ಸುಮಾರು 12 ತಿಂಗಳ ಬಳಿಕ ನಾಲ್ಕು ದಿನಗಳ ಕ್ರಿಕೆಟ್‌ಗೆ ಮರಳಿದ ಅರ್ಷ್‌ದೀಪ್‌ ಸಿಂಗ್‌ ಕೂಡ ಗಮನಾರ್ಹ ಪ್ರದರ್ಶನ ನೀಡಿದರು.ಅರ್ಷ್‌ದೀಪ್‌ ಪಂದ್ಯದಲ್ಲಿ ಒಟ್ಟು 4 ವಿಕೆಟ್‌ ಕಬಳಿಸಿದ್ದು, ಅದರಲ್ಲಿ 3 ವಿಕೆಟ್‌ಗಳನ್ನು ಮೊದಲ ಇನಿಂಗ್ಸ್‌ನಲ್ಲೇ ಪಡೆದರು. ಚೆಂಡನ್ನು ತಡವಾಗಿ ಸ್ವಿಂಗ್‌ ಮಾಡುವ ಅವರ ಸಾಮರ್ಥ್ಯ ಪಶ್ಚಿಮ ವಲಯದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ನಿರಂತರವಾಗಿ ತೊಂದರೆ ನೀಡಿತು. ಅಂಶುಲ್‌ ಕಾಂಬೋಜ್‌ ಮತ್ತು ಅರ್ಷ್‌ದೀಪ್‌ ಸಿಂಗ್‌ ಅವರ ಬೌಲಿಂಗ್‌ ಕೊಡುಗೆ, ಜೊತೆಗೆ ಆಯುಷ್‌ ಬದೋನಿ ಅವರ ಅರ್ಧಶತಕದ ನೆರವಿನಿಂದ ಉತ್ತರ ವಲಯ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.