ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Duleep Trophy Final: ಇಶಾನ್‌ ಕಿಶನ್‌ ದಾಖಲೆಯ ದ್ವಿಶತಕ, ಬೃಹತ್‌ ಮೊತ್ತ ಕಲೆಹಾಕಿದ ಪೂರ್ವ ವಲಯ!

East Zone vs South Zone: ದಕ್ಷಿಣ ವಲಯ ಎದುರು ಇಶಾನ್‌ ಕಿಶನ್‌ ದ್ವಿಶತಕ ಹಾಗೂ ಕುಮಾರ್‌ ಕುಶಾಗ್ರ ಅವರ ಶತಕದ ಬಲದಿಂದ ಪೂರ್ವ ವಲಯ ತಂಡ, 2026ರ ದುಲೀಪ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದ ಎರಡನೇ ದಿನ ಬೃಹತ್‌ ಮೊತ್ತವನ್ನು ಕಲೆ ಹಾಕಿದೆ. ಪೂರ್ವ ವಲಯ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 708 ರನ್‌ಗಳನ್ನು ಗಳಿಸಿ ಆಲ್‌ಔಟ್‌ ಆಗಿದೆ.

ದಕ್ಷಿಣ ವಲಯ ಎದುರು ದ್ವಿಶತಕ ಬಾರಿಸಿದ ಇಶಾನ್‌ ಕಿಶನ್‌ ಬ್ಯಾಟಿಂಗ್‌ ವೈಖರಿ.

ಚೆನ್ನೈ: ಇಶಾನ್‌ ಕಿಶನ್‌ (Ishan Kishan) ದ್ವಿಶತಕ ಹಾಗೂ ಕುಮಾರ್‌ ಕುಶಾಗ್ರ (Kumar Kushagra) ಶತಕದ ಬಲದಿಂದ ಪೂರ್ವ ವಲಯ ತಂಡ, ದಕ್ಷಿಣ ವಲಯ ಎದುರು 2026ರ ದುಲೀಪ್‌ ಟ್ರೋಫಿ ಫೈನಲ್‌ (Duleep Trophy 2026) ಪಂದ್ಯದ ಎರಡನೇ ದಿನವೂ ಪ್ರಾಬಲ್ಯ ಸಾಧಿಸಿದೆ. ಪೂರ್ವ ವಲಯ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 163 ಓವರ್‌ಗಳಿಗೆ 708 ರನ್‌ಗಳಿಗೆ ಆಲ್‌ಔಟ್‌ ಆಯಿತು. ಎರಡನೇ ದಿನ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ನಾಯಕ ಇಶಾನ್‌ ಕಿಶನ್‌, ದ್ವಿಶತಕವನ್ನು ಬಾರಿಸಿ ತಮ್ಮ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು.

ಎರಡನೇ ದಿನವಾದ ಸೋಮವಾರ ಬೆಳಿಗ್ಗೆ 4 ವಿಕೆಟ್‌ಗಳ ನಷ್ಟಕ್ಕೆ 385 ರನ್‌ಗಳಿಗೆ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಪೂರ್ವ ವಲಯ ತಂಡದ ಪರ ನಾಯಕ ಇಶಾನ್‌ ಕಿಶನ್‌ ಭರ್ಜರಿ ಆಟವನ್ನು ಪ್ರದರ್ಶಿಸಿದರು. ಇಶಾನ್‌ ಕಿಶನ್‌ ಹಾಗೂ ಕುಮಾರ್‌ ಕುಶಾಗ್ರ ಜೋಡಿ ಐದನೇ ವಿಕೆಟ್‌ಗೆ ದೀರ್ಘಾವಧಿ ಬ್ಯಾಟ್‌ ಮಾಡಿತು. ಈ ಇಬ್ಬರೂ 287 ಎಸೆತಗಳಲ್ಲಿ 230 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 470ರ ಗಡಿಯನ್ನು ದಾಟಿಸಿದರು.

ಇಂಗ್ಲೆಂಡ್‌ ಕ್ರಿಕೆಟ್‌ ತಂಡಕ್ಕೆ ವಿಶೇಷ ಮೆಂಟರ್‌ ಆಗಿ ಕೆವಿನ್‌ ಪೀಟರ್ಸನ್‌ ನೇಮಕ!

ಕುಮಾರ್ ಕುಶಾಗ್ರ ಭರ್ಜರಿ ಶತಕ

ಇಶಾನ್‌ ಕಿಶನ್‌ ಜೊತೆಗೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ಕುಮಾರ್‌ ಕುಶಾಗ್ರ ಭರ್ಜರಿ ಶತಕವನ್ನು ಬಾರಿಸಿದರು. ಅವರು ಆಡಿದ 132 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 101 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಪೂರ್ವ ವಲಯ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿ ತ್ರಿಪುರಣ ವಿಜಯ್‌ಗೆ ವಿಕೆಟ್‌ ಒಪ್ಪಿಸಿದರು.



ಇಶಾನ್‌ ಕಿಶನ್‌ ದಾಖಲೆಯ ದ್ವಿಶತಕ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ನಾಯಕ ಇಶಾನ್‌ ಕಿಶನ್‌, ಮೊದಲನೇ ದಿನವೇ ಶತಕವನ್ನು ಬಾರಿಸಿದ್ದರು. ನಂತರ ಎರಡನೇ ದಿನವೂ ಅದೇ ಆಟವನ್ನು ಮುಂದುವರಿಸಿದರು. ಸೋಮವಾರವೂ ದಕ್ಷಿಣ ವಲಯ ತಂಡದ ಬೌಲರ್‌ಗಳನ್ನು ಕಾಡಿದ ಇಶಾನ್‌ ಕಿಶನ್‌, ದಾಖಲೆಯ ದ್ವಿಶತಕವನ್ನು ಬಾರಿಸಿದರು. ಅವರು ಆಡಿದ 334 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 34 ಬೌಂಡರಿಗಳೊಂದಿಗೆ 270 ರನ್‌ಗಳನ್ನು ಕಲೆ ಹಾಕಿದರು.ಆ ಮೂಲಕ ಪೂರ್ವ ವಲಯ ತಂಡ 700ರ ಗಡಿ ದಾಟಿಸಲು ನೆರವು ನೀಡಿದರು.



ಎರಡನೇ ದಿನ ಅನುಕುಲ್‌ ರಾಯ್‌ 45 ರನ್‌ ಹಾಗೂ ಕೊನೈನ್ ಖುರೇಷಿ ಅವರು 40 ರನ್‌ಗಳ ಕೊಡುಗೆಯನ್ನು ನೀಡಿದರು. ಮೊಹಮ್ಮದ್‌ ಶಮಿ ಕೂಡ ಕೊನೆಯಲ್ಲಿ 28 ರನ್‌ಗಳ ಕೊಡುಗೆಯನ್ನು ನೀಡಿದರು. ಅಂತಿಮವಾಗಿ ಪೂರ್ವ ವಲಯ ತಂಡ 708 ರನ್‌ಗಳ ಬೃಹತ್‌ ಮೊತ್ತವನ್ನು ಕಲೆ ಹಾಕಿತು.

ತ್ರಿಪುರಣ ವಿಜಯ್‌ಗೆ 4 ವಿಕೆಟ್‌

ಇಲ್ಲಿನ ಎಂ ಎ ಚಿದಂಬರಂ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದ್ದ ಕಾರಣ ದಕ್ಷಿಣ ವಲಯದ ಬೌಲರ್‌ಗಳು ಒಂದೊಂದು ವಿಕೆಟ್‌ ಪಡೆಯಲು ಪರದಾಡಿದ್ದರು. ತ್ರಿಪುರಣ ವಿಜಯ್‌ 4 ವಿಕೆಟ್‌ ಕಿತ್ತರೆ, ಶ್ರೇಯಸ್‌ ಗೋಪಾಲ್‌ ಹಾಗೂ ಚಾಮಾ ವಿ ಮಿಲಿಂದ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.