ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂಗ್ಲೆಂಡ್‌ ಕ್ರಿಕೆಟ್‌ ತಂಡಕ್ಕೆ ವಿಶೇಷ ಮೆಂಟರ್‌ ಆಗಿ ಕೆವಿನ್‌ ಪೀಟರ್ಸನ್‌ ನೇಮಕ!

ಇಂಗ್ಲೆಂಡ್‌ ವೈಟ್‌ಬಾಲ್‌ ಕ್ರಿಕೆಟ್‌ ತಂಡಕ್ಕೆ ವಿಶೇಷ ಮೆಂಟರ್‌ ಆಗಿ ಕೆವಿನ್‌ ಪೀಟರ್ಸನ್‌ ನೇಮಕಗೊಂಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯ ಮೂಲಕ ಕೆವಿನ್‌ ಪೀಟರ್ಸನ್‌ ತಮ್ಮ ಜವಾಬ್ದಾರಿಯನ್ನು ಅಧಿಕೃತವಾಗಿ ಪಡೆದಿದ್ದಾರೆ. ಈ ತಂಡಕ್ಕೆ ಬ್ರೆಂಡಮ್‌ ಮೆಕಲಮ್‌ ಆಗಿದ್ದಾರೆ.

ಇಂಗ್ಲೆಂಡ್‌ ತಂಡಕ್ಕೆ ಕೆವಿನ್‌ ಪೀಟರ್ಸನ್‌ ವಿಶೇಷ ಮೆಂಟರ್‌!

ಇಂಗ್ಲೆಂಡ್‌ ತಂಡಕ್ಕೆ ಕೆವಿನ್‌ ಪೀಟರ್ಸನ್‌ ಮೆಂಟರ್. -

Profile
Ramesh Kote Sep 7, 2026 4:37 PM

ನವದೆಹಲಿ: ಇಂಗ್ಲೆಂಡ್ ಮಾಜಿ ಬ್ಯಾಟರ್ ಕೆವಿನ್ ಪೀಟರ್ಸನ್ (Kevin Pietersen) ಇಂಗ್ಲೆಂಡ್ ತಂಡದ ಕೋಚಿಂಗ್‌ ವಿಭಾಗಕ್ಕೆ ಅಚ್ಚರಿಯ ರೀತಿಯಲ್ಲಿ ಮರಳಿದ್ದಾರೆ. ಅವರನ್ನು ಇಂಗ್ಲೆಂಡ್‌ನ ವೈಟ್-ಬಾಲ್ ತಂಡದ England Cricket) ‘ಸ್ಪೆಷಲಿಸ್ಟ್ ಮೆಂಟರ್’ ಆಗಿ ನೇಮಿಸಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ವಿವಾದಾತ್ಮಕವಾಗಿ ಅಂತ್ಯಗೊಂಡು 12 ವರ್ಷಗಳ ಬಳಿಕ, ಪೀಟರ್ಸನ್ ಮತ್ತೆ ಇಂಗ್ಲೆಂಡ್ ತಂಡದ ಭಾಗವಾಗಲಿದ್ದಾರೆ. ಅವರು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್‌ ಅವರ ಕೋಚಿಂಗ್ ಸಿಬ್ಬಂದಿಯನ್ನು ಸೇರಿಕೊಳ್ಳಲಿದ್ದು, ಸೆಪ್ಟೆಂಬರ್ ಅಂತ್ಯದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ವೈಟ್-ಬಾಲ್ ಪಂದ್ಯಗಳಿಂದ ತಮ್ಮ ಹೊಸ ಜವಾಬ್ದಾರಿ ಆರಂಭಿಸಲಿದ್ದಾರೆ.

“ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ತಂಡದ ಪ್ರಯಾಣದಲ್ಲಿ ನೆರವಾಗಲು ನನ್ನನ್ನು ಕೇಳಿರುವುದು ನನಗೆ ಅಪಾರ ಹೆಮ್ಮೆ ತಂದಿದೆ. 2014ರ ಬಳಿಕ ಮೊದಲ ಬಾರಿ ಮತ್ತೆ ಇಂಗ್ಲೆಂಡ್‌ನ ಜೆರ್ಸಿ ಧರಿಸುವುದು ಅತ್ಯಂತ ಗೌರವದ ಹಾಗೂ ವಿಶೇಷ ಕ್ಷಣವಾಗಿದೆ,” ಎಂದು ಕೆವಿನ್‌ ಪೀಟರ್ಸನ್‌ ಹೇಳಿದ್ದಾರೆ.

“ನಮ್ಮ ವೈಟ್-ಬಾಲ್ ತಂಡದಲ್ಲಿ ಅಪಾರ ಪ್ರತಿಭೆ ಇದೆ. ಈ ಆಟಗಾರರೊಂದಿಗೆ ಕಠಿಣವಾಗಿ ಕೆಲಸ ಮಾಡಿ ಅವರ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ತಲುಪಿಸಲು ನಾನು ಉತ್ಸುಕನಾಗಿದ್ದೇನೆ. ಮುಂದಿನ 12 ತಿಂಗಳು ಬ್ರೆಂಡನ್ ಅವರ ಚಿಂತನಾ ತಂಡದ ಭಾಗವಾಗುವುದು ಅದ್ಭುತ ಅವಕಾಶ. ಕೆಲಸ ಆರಂಭಿಸಲು ನಾನು ಕಾತುರನಾಗಿದ್ದೇನೆ,” ಎಂದು ಮಾಜಿ ನಾಯಕ ತಿಳಿಸಿದ್ದಾರೆ.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದ್ವಿಶತಕ ಬಾರಿಸಿ ಹಲವು ದಾಖಲೆ ಮುರಿದ ಇಶಾನ್‌ ಕಿಶನ್‌

ಕೆವಿನ್‌ ಪೀಟರ್ಸನ್ ಈ ಹಿಂದೆ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. 2023ರ ಆರಂಭದಲ್ಲೂ ಅವರು ಅಲ್ಪಾವಧಿಗೆ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳೊಂದಿಗೆ ಕೆಲಸ ಮಾಡಿದ್ದರು.

ಪೀಟರ್ಸನ್ ನೇಮಕವನ್ನು ಸ್ವಾಗತಿಸಿದ ಮೆಕಲಮ್‌

ಪೀಟರ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್‌ ಸ್ವಾಗತಿಸಿದ್ದಾರೆ.

“ಕೆಪಿ ಮತ್ತು ಕ್ರಿಕೆಟ್‌ನಲ್ಲಿ ಅವರು ಸಾಧಿಸಿರುವುದರ ಬಗ್ಗೆ ನನಗೆ ಅಪಾರ ಗೌರವವಿದೆ. ಇಂಗ್ಲಿಷ್ ಕ್ರಿಕೆಟ್ ಮೇಲೆ ಅವರು ಅದ್ಭುತ ಪರಿಣಾಮ ಬೀರಿದ್ದಾರೆ. ಅವರಂತಹ ಅನುಭವ, ಜ್ಞಾನ ಮತ್ತು ಗೌರವ ಹೊಂದಿರುವ ವ್ಯಕ್ತಿ ಈ ತಂಡದೊಂದಿಗೆ ಕೆಲಸ ಮಾಡಲು ಬಯಸಿರುವುದು ಅದ್ಭುತ ಬೆಳವಣಿಗೆ,” ಎಂದು ಹೆಡ್‌ ಕೋಚ್‌ ಬ್ರೆಂಡನ್‌ ಮೆಕಲಮ್‌ ಹೇಳಿದ್ದಾರೆ.

“ವಿಶೇಷವಾಗಿ ನಮ್ಮ ಬ್ಯಾಟರ್‌ಗಳಿಗೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಗುತ್ತಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ. ಅತ್ಯುನ್ನತ ಮಟ್ಟದಲ್ಲಿ ಯಶಸ್ವಿಯಾಗಲು ಏನು ಬೇಕು ಎಂಬುದರ ಬಗ್ಗೆ ಕೆಪಿಗೆ ವಿಶಿಷ್ಟವಾದ ಅರಿವಿದೆ. ಇದು ನಮ್ಮ ಆಟಗಾರರಿಗೆ ಬಹಳ ಉಪಯುಕ್ತವಾಗಲಿದೆ. ನಾವು ಯಾವಾಗಲೂ ಪರಸ್ಪರ ಗೌರವ ಹೊಂದಿದ್ದೇವೆ. ಈಗ ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.

"2025ರ ಆರಂಭದಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ, ಮೆಕಲಮ್‌ ನೇತೃತ್ವದ ಇಂಗ್ಲೆಂಡ್ ತಂಡದ ವಾತಾವರಣದ ಬಗ್ಗೆ ಪೀಟರ್ಸನ್ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮೆಕಲಮ್‌, ಪೀಟರ್ಸನ್ ಅವರ ಟೀಕೆಗಳು “ವಾಸ್ತವಾಂಶಗಳಿಗೆ ವಿರುದ್ಧವಾಗಿವೆ,” ಎಂದು ಹೇಳಿದ್ದರು.

ಆಫ್ಘಾನ್‌ ವಿರುದ್ಧ ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಬಳಗ

ಇಂಗ್ಲೆಂಡ್‌ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು

ಕೆವಿನ್ ಪೀಟರ್ಸನ್ ಅವರನ್ನು ಇಂಗ್ಲೆಂಡ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. 2005ರ ಆ್ಯಶಸ್ ಸರಣಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಪೀಟರ್ಸನ್ ಇಂಗ್ಲೆಂಡ್ ಪರ 104 ಟೆಸ್ಟ್, 136 ಏಕದಿನ ಮತ್ತು 37 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ 2014ರ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಆ್ಯಶಸ್ ಸರಣಿಯಲ್ಲಿ ಬಂದಿತ್ತು.

12 ವರ್ಷಗಳ ಬಳಿಕ ಮತ್ತೆ ಇಂಗ್ಲೆಂಡ್ ತಂಡದ ಸಹಾಯಕ ಸಿಬ್ಬಂದಿ ಮರಳಿರುವ ಪೀಟರ್ಸನ್, ಇದೀಗ ವಿಶ್ವಕಪ್ ಗುರಿಯೊಂದಿಗೆ ತಂಡದ ಬ್ಯಾಟರ್‌ಗಳಿಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.