ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟಿ20ಐಗೆ ಭಾರತ ತಂಡಕ್ಕೆ 3 ಬದಲಾವಣೆ ಅಗತ್ಯ!

ಐರ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ತಂಡ 0-2 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತು. ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತ ತಂಡ ಮೊದಲನೇ ಟಿ20ಐ ಸರಣಿ ಇದಾಗಿತ್ತು. ಇದೀಗ ಭಾರತ ತಂಡ, ಇಂಗ್ಲೆಂಡ್‌ ಎದುರು ಐದು ಪಂದ್ಯಗಳ ಟಿ20ಐ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಗೂ ಮುನ್ನ ಭಾರತ ತಂಡ ಮೂರು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ.

ಭಾರತ ತಂಡದಲ್ಲಿ ಮೂರು ಬದಲಾವಣೆ ಅಗತ್ಯವಿದೆ.

ನವದೆಹಲಿ: ಐರ್ಲೆಂಡ್‌ ಎದುರು 0-2 ಅಂತರದಲ್ಲಿ ಟಿ20ಐ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದ ಬಳಿಕ ಭಾರತ ತಂಡ(India), ಇದೀಗ ಇಂಗ್ಲೆಂಡ್‌ ಎದುರು ಟಿ20ಐ ಸರಣಿಗೆ (IND vs ENG) ಸಜ್ಜಾಗುತ್ತಿದೆ. ಇಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ 5 ಪಂದ್ಯಗಳನು ಆಡಲಿದೆ. ಆದರೆ, ಕಳೆದ ಸರಣಿಯಲ್ಲಿ ಮಾಡಿದ ತಪ್ಪುಗಳನ್ನು ಭಾರತ ತಿದ್ದಿಕೊಳ್ಳಬೇಕಾದ ಅಗತ್ಯವಿದೆ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂರೂ ವಿಭಾಗಗಳಲ್ಲಿ ಟೀಮ್‌ ಇಂಡಿಯಾ ಸುಧಾರಣೆ ಕಾಣಬೇಕಾಗಿದೆ.

ಐರ್ಲೆಂಡ್‌ಗಿಂತ ಇಂಗ್ಲೆಂಡ್‌ ಅತ್ಯಂತ ಬಲಿಷ್ಠ ತಂಡವಾಗಿರುವ ಕಾರಣ ಭಾರತ ತಂಡ, ಮೊದಲನೇ ಟಿ20ಐ ಪಂದ್ಯಕ್ಕೆ ತನ್ನ ಅತ್ಯುತ್ತಮ ಸಂಯೋಜನೆಯೊಂದಿಗೆ ಕಣಕ್ಕೆ ಇಳಿಸಬೇಕಾಗಿದೆ. ಅಂದ ಹಾಗೆ ಈ ಸರಣಿಗೂ ಮುನ್ನ ಭಾರತ ತಂಡ ಮೂರು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ.

ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದರೂ 2028ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ವನಿತೆಯರು!

ಇಂಗ್ಲೆಂಡ್‌ ಟಿ20ಐ ಸರಣಿಗೂ ಮುನ್ನ ಭಾರತ ತಂಡ ಮಾಡಿಕೊಳ್ಳಬೇಕಾದ 3 ಬದಲಾವಣೆಗಳು

ಮಧ್ಯಮ ಓವರ್‌ಗಳಲ್ಲಿ ಸ್ಟ್ರೈಕ್‌ ರೋಟೇಟ್‌ ಮಾಡಬೇಕು

ಐರ್ಲೆಂಡ್‌ ಎದುರು ಎರಡೂ ಪಂದ್ಯಗಳಲ್ಲಿ ಭಾರತ ತಂಡದ ಬ್ಯಾಟಿಂಗ್‌ ಶೈಲಿ ಉತ್ತಮವಾಗಿರಲಿಲ್ಲ. ಮೊದಲನೇ ಪಂದ್ಯದಲ್ಲಿ ಭಾರತ ತಂಡ 183 ರನ್‌ಗಳ ಚೇಸಿಂಗ್‌ನಲ್ಲಿ 34 ರನ್‌ಗಳಿಂದ ಸೋತಿತ್ತು. ಎರಡನೇ ಪಂದ್ಯದಲ್ಲಿಯೂ ಕೂಡ ಭಾರತ ತಂಡದ ಬ್ಯಾಟಿಂಗ್‌ ಸುಧಾರಣೆಯಾಗಿರಲಿಲ್ಲ. ಅದರಲ್ಲಿಯೂ ವಿಶೇಷವಾಗಿ ಭಾರತ ತಂಡದ ಮಧ್ಯಮ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ತೊಂದರ ಅನುಭವಿಸುತ್ತಿದ್ದಾರೆ ಹಾಗೂ ಸ್ಟ್ರೈಕ್‌ ರೋಟೇಟ್‌ ಸರಿಯಾಗಿ ಮಾಡುತ್ತಿಲ್ಲ. ಶಿವಂ ದುಬೇ ಬಿಟ್ಟರೆ ಇನ್ನುಳಿದವರು ವಿಫಲರಾಗುತ್ತಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಈ ವಿಷಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕಾದ ಅಗತ್ಯವಿದೆ.

ಪ್ಲೇಯಿಂಗ್‌ XIನಲ್ಲಿ ಟಿ20 ವಿಶೇಷ ಆಟಗಾರರಿಗೆ ಅವಕಾಶ ನೀಡಬೇಕು

ಭಾರತ ತಂಡಕ್ಕೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಕೊಡುಗೆ ನೀಡಬಲ್ಲ ಆಟಗಾರರ ಕಡೆಗೆ ಗೌತಮ್‌ ಗಂಭೀರ್‌ ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ ಗಮನ ನೀಡಬೇಕು. ಕಳೆದ ಎರಡೂ ಪಂದ್ಯಗಳಲ್ಲಿ ಭಾರತ ತಂಡದ ಆಡುವ ಬಳಗದಲ್ಲಿ ಮೂವರು ಆಲ್‌ರೌಂಡರ್‌ಗಳನ್ನು ಕಣಕ್ಕೆ ಇಳಿಸಲಾಗಿತ್ತು. ಮೊದಲನೇ ಪಂದ್ಯದಲ್ಲಿ ಶಿವಂ ದುಬೇ, ವಾಷಿಂಗ್ಟನ್‌ ಸುಂದರ್‌ ಹಾಗೂ ಅಕ್ಷರ್‌ ಪಟೇಲ್‌ ಆಡಿದ್ದರು. ಎರಡನೇ ಪಂದ್ಯದಲ್ಲಿ ವಾಷಿಂಗ್ಟನ್‌ ಸುಂದರ್‌ ಅವರ ಜಾಗದಲ್ಲಿ ಸೂರ್ಯಾಂಶ್‌ ಶೆಡ್ಗೆ ಅವರನ್ನು ಆಡಿಸಲಾಗಿತ್ತು.

IND vs ENG: ʻತಂಡದಲ್ಲಿ ನೀವು ಸ್ಥಾನವನ್ನು ಕಳೆದುಕೊಳ್ಳುತ್ತೀರಿʼ-ಸಂಜು ಸ್ಯಾಮ್ಸನ್‌ಗೆ ಆಕಾಶ್‌ ಚೋಪ್ರಾ ವಾರ್ನಿಂಗ್‌!

ಈ ಆಟಗಾರರು ತಂಡಕ್ಕೆ ಅಪಾರ ಮೌಲ್ಯ ಮತ್ತು ಸಮತೋಲನವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕೆಲವೊಮ್ಮೆ ನಿರ್ದಿಷ್ಟ ಪಾತ್ರಕ್ಕೆ ಪರಿಣತಿ ಹೊಂದಿರುವ ಆಟಗಾರರ ಉಪಸ್ಥಿತಿಯೇ ಪಂದ್ಯಗಳ ಫಲಿತಾಂಶವನ್ನು ತಮ್ಮ ಪರವಾಗಿ ತಿರುಗಿಸುವ ಸಾಮರ್ಥ್ಯ ಹೊಂದಿರುತ್ತದೆ. ಐರ್ಲೆಂಡ್ ವಿರುದ್ಧದ ಸಂಪೂರ್ಣ ಸರಣಿಯಲ್ಲೂ ಭಾರತೀಯ ತಂಡಕ್ಕೆ ಈ ಅಂಶ ಸ್ಪಷ್ಟವಾಗಿ ಗೋಚರಿಸಿತು. ಭಾರತ ಈ ಬದಲಾವಣೆಯನ್ನು ಮಾಡಿದರೆ, ಇಂಗ್ಲೆಂಡ್ ವಿರುದ್ಧದ ಮಹತ್ವದ ಸರಣಿಯಲ್ಲಿ ಪ್ರವಾಸಿಗರ ಗೆಲುವಿನ ಸಾಧ್ಯತೆಗಳು ಮತ್ತಷ್ಟು ಹೆಚ್ಚಾಗಬಹುದು.

ವೈಭವ್‌ ಸೂರ್ಯವಂಶಿಗೆ ಓಪನಿಂಗ್‌ ನೀಡಬೇಕು

ಐರ್ಲೆಂಡ್ ಸರಣಿಗೂ ಮುನ್ನ ಹೆಚ್ಚು ಚರ್ಚೆಯಾದ ಪ್ರಶ್ನೆಯೆಂದರೆ, ವೈಭವ್ ಸೂರ್ಯವಂಶಿ ಈ ಸರಣಿಯಲ್ಲಿ ಪದಾರ್ಪಣೆ ಮಾಡಲಿದ್ದಾರೆಯೇ? ಎಂಬುದಾಗಿತ್ತು. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಅವರಿಗೆ ಅವಕಾಶ ಸಿಗಲಿಲ್ಲ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಯಶಸ್ವಿ ಆರಂಭಿಕ ಜೋಡಿಯಾಗಿದ್ದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಮೇಲೆಯೇ ವಿಶ್ವಾಸವಿಟ್ಟಿತು. ಆದರೆ ಈ ಜೋಡಿಯಿಂದ ಎರಡೂ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.

ಇಬ್ಬರೂ ಸೇರಿ ಎರಡು ಪಂದ್ಯಗಳಲ್ಲಿ ಆರಂಭಿಕ ಜೋಡಿಯಾಗಿ ಕೇವಲ 16 ರನ್‌ಗಳನ್ನಷ್ಟೇ ಗಳಿಸಿದರು. ಗುರಿ ಬೆನ್ನಟ್ಟುವಲ್ಲಿ ಭಾರತ ವಿಫಲವಾಗಲು ಇದೂ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು.ಇದೀಗ ವೈಭವ್ ಸೂರ್ಯವಂಶಿ ಅತ್ಯುತ್ತಮ ಫಾರ್ಮ್‌ನಲ್ಲಿರುವುದರಿಂದ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಈ ಯುವ ಪ್ರತಿಭೆಗೆ ಭಾರತ ತಂಡ ಪದಾರ್ಪಣೆಯ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.