ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ(ENG vs NZ) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ (Joe Root) ಅರ್ಧಶತಕವನ್ನು ಗಳಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 14,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಅಂದ ಹಾಗೆ ಈ ಪಂದ್ಯ ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿದ್ದು, ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜೋ ರೂಟ್ ಈ ಮೈಲುಗಲ್ಲು ತಲುಪಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ಕಲೆ ಹಾಕಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಜೋ ರೂಟ್ ಭಾಜನರಾಗಿದ್ದಾರೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಈ ಸಾಧನೆಗೆ ಭಾಜನರಾದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಚಿನ್ ಈ ದಾಖಲೆಯನ್ನು ಬರೆಯಲು 171 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ರೂಟ್ 165 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಸಚಿನ್‌ಗಿಂತ ರೂಟ್ 6 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ವೇಗವಾಗಿ 14,000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವ ಮೂಲಕ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ.
IND vs AFG: ಎರಡನೇ ಒಡಿಐ ಶತಕ ಸಿಡಿಸಿ ವಿರಾಟ್ ಕೊಹ್ಲಿ ಮೇಲೆ ಒತ್ತಡ ಹಾಕಿದ ಯಶಸ್ವಿ ಜೈಸ್ವಾಲ್!
14,000 ರನ್‌ಗಳನ್ನು ಪೂರ್ಣಗೊಳಿಸಲು ಜೋ ರೂಟ್‌ಗೆ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ ಎರಡು ರನ್ ಅಗತ್ಯವಿತ್ತು. ಅದರಂತೆ ಏಳನೇ ಓವರ್‌ನಲ್ಲಿ ಮ್ಯಾಟ್ ಹೆನ್ರಿಗೆ ಸಿಂಗಲ್ ರನ್ ಪಡೆಯುವ ಮೂಲಕ ಜೋ ರೂಟ್ ಈ ದಾಖಲೆಯನ್ನು ಬರೆದಿದ್ದಾರೆ. ಪಂದ್ಯಗಳ ಲೆಕ್ಕದಲ್ಲಿ ಜೋ ರೂಟ್, ಸಚಿನ್‌ಗಿಂತ ಕಡಿಮೆ ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಇನಿಂಗ್ಸ್ ವಿಷಯದಲ್ಲಿ ರೂಟ್‌ಗಿಂತ (302 ಇನಿಂಗ್ಸ್) ಕ್ರಿಕೆಟ್ ದೇವರು (279 ಇನಿಂಗ್ಸ್) ಕಡಿಮೆ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ಸಚಿನ್ ತೆಂಡೂಲ್ಕರ್: 15921 ರನ್‌ಗಳು (200 ಪಂದ್ಯಗಳು)
ಜೋ ರೂಟ್: 14017 ರನ್‌ಗಳು (165 ಪಂದ್ಯಗಳು)
2010ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 14,000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಅವರು 16 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್ ಆಗಿ ಸಚಿನ್ ಇದ್ದರು, ಇದೀಗ ಇವರ ಸಾಲಿಗೆ ಜೋ ರೂಟ್ ಎಂಟ್ರಿಕೊಟ್ಟಿದ್ದಾರೆ. ಇದೀಗ ಸಚಿನ್ (15,921 ರನ್‌ಗಳು) ಅವರ ಟೆಸ್ಟ್ ರನ್‌ಗಳ ದಾಖಲೆಯನ್ನು ಮುರಿಯಲು ರೂಟ್‌ಗೆ ಇನ್ನು ಕೇವಲ 1921 ರನ್‌ಗಳ ಅಗತ್ಯವಿದೆ.
IND vs AFG: ಮೂವರು ಬ್ಯಾಟ್ಸ್‌ಮನ್‌ಗಳನ್ನು ಒಂದೇ ರೀತಿ ಔಟ್ ಮಾಡಿದ ಪ್ರಸಿಧ್ ಕೃಷ್ಣ!
ಜೋ ರೂಟ್ ಅವರು ಸಚಿನ್ ತೆಂಡೂಲ್ಕರ್ ಅವರ 15,921 ಟೆಸ್ಟ್ ರನ್‌ಗಳ ದಾಖಲೆಯನ್ನು ಹಿಂದಿಕ್ಕಬೇಕಾದರೆ ಇನ್ನೂ 1,922 ರನ್‌ಗಳನ್ನು ಗಳಿಸಬೇಕಾಗಿದೆ. ರೂಟ್ ಅವರ ಪ್ರಸ್ತುತ ಸರಾಸರಿ 50.72 ಆಗಿರುವುದರಿಂದ, ಈ ಗುರಿ ತಲುಪಲು ಅವರಿಗೆ ಅಂದಾಜು 37.9ರ ಇನಿಂಗ್ಸ್‌ಗಳು, ಅಂದರೆ ಸುಮಾರು 38 ಇನಿಂಗ್ಸ್‌ಗಳ ಅಗತ್ಯವಿದೆ. ಸಾಮಾನ್ಯವಾಗಿ ಒಂದು ಟೆಸ್ಟ್ ಪಂದ್ಯದಲ್ಲಿ ಎರಡು ಇನಿಂಗ್ಸ್‌ಗಳನ್ನು ಆಡುತ್ತಾರೆ ಎಂಬ ಲೆಕ್ಕಾಚಾರದ ಪ್ರಕಾರ, ಅವರು ಸುಮಾರು 19 ಟೆಸ್ಟ್ ಪಂದ್ಯಗಳನ್ನು ಆಡಿದರೆ ಈ ದಾಖಲೆಯನ್ನು ಮುರಿಯುವ ಅವಕಾಶ ಸಿಗಬಹುದು. ಇದರಲ್ಲೂ ಕೆಲ ನಾಟೌಟ್ ಇನಿಂಗ್ಸ್‌ಗಳು ಬಂದರೆ, ಅಗತ್ಯವಿರುವ ಇನಿಂಗ್ಸ್‌ಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.