IND vs AFG: ಎರಡನೇ ಒಡಿಐ ಶತಕ ಸಿಡಿಸಿ ವಿರಾಟ್ ಕೊಹ್ಲಿ ಮೇಲೆ ಒತ್ತಡ ಹಾಕಿದ ಯಶಸ್ವಿ ಜೈಸ್ವಾಲ್!
ಅಫ್ಘಾನಿಸ್ತಾನ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ಒಡಿಐ ವೃತ್ತಿ ಜೀವನದ ಎರಡನೇ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಗಾಯದಿಂದ ಗುಣಮುಖರಾಗುತ್ತಿರುವ ವಿರಾಟ್ ಕೊಹ್ಲಿಯ ಮೇಲೆ ಒತ್ತಡವನ್ನು ಹಾಕಿದ್ದಾರೆ.
ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್. -
ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ (IND vs AFG) ವಿರಾಟ್ ಕೊಹ್ಲಿ (Virat Kohli) ಬದಲಿಗೆ ಬಂದಿರುವ ಯಶಸ್ವಿ ಜೈಸ್ವಾಲ್ (Yashasvi Jaiswal) ತಮ್ಮ ಬ್ಯಾಟಿಂಗ್‌ನಿಂದ ಅಬ್ಬರಿಸಿದ್ದಾರೆ. ಹಿಂದಿನ ಪಂದ್ಯದಲ್ಲಿ ಕೇವಲ 4 ರನ್‌ಗಳಿಗೆ ಔಟಾದ ನಂತರ, ಜೈಸ್ವಾಲ್ ಕೇವಲ 84 ಎಸೆತಗಳಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅವರ ಸ್ಫೋಟಕ ಶತಕ ಬಾರಿಸುವ ಮೂಲಕ ಆಯ್ಕೆದಾರರಿಗೆ ಸಂದೇಶವನ್ನು ರವಾನಿಸಿದ್ದಾರೆ. ಇದು ಅವರ ಏಕದಿನ ವೃತ್ತಿಜೀವನದ ಎರಡನೇ ಶತಕವಾಗಿದೆ. 2025 ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲನೇ ಶತಕವನ್ನು ಸಿಡಿಸಿದ್ದರು.
219 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಪರ ಯಶಸ್ವಿ ಜೈಸ್ವಾಲ್, ಮೊದಲ ಓವರ್‌ನಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಆರಂಭಿಕ ಓವರ್‌ನಲ್ಲಿ ದಾಖಲೆಯ 23 ರನ್‌ಗಳು ಗಳಿಸಿದ ನಂತರ, ಜೈಸ್ವಾಲ್ ಆಫ್ಘನ್ ಬೌಲರ್‌ಗಳಿಗೆ ಚೇತರಿಸಿಕೊಳ್ಳಲು ಯಾವುದೇ ಅವಕಾಶ ನೀಡಲಿಲ್ಲ. ಅವರು ಮೈದಾನದ ಎಲ್ಲಾ ಮೂಲೆಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿಸಿದರು. ಆ ಮೂಲಕ ಕೇವಲ 38 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ರಶೀದ್ ಖಾನ್ ಸೇರಿದಂತೆ ಅಫ್ಘಾನಿಸ್ತಾನದ ಸಂಪೂರ್ಣ ಬೌಲಿಂಗ್ ದಾಳಿಯು ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯಾಗಿ ಕಂಡುಬಂದಿತು.
IND vs AFG: ಪ್ರಸಿಧ್ ಕೃಷ್ಣ ಮಾರಕ ದಾಳಿ; ಒಡಿಐ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡ ಭಾರತ!
ಯಶಸ್ವಿ ಜೈಸ್ವಾಲ್‌ಗೆ ಇನ್ನೊಂದು ತುದಿಯಲ್ಲಿ ನಾಯಕ ರೋಹಿತ್ ಶರ್ಮಾ ಅವರಿಂದ ಅತ್ಯುತ್ತಮ ಬೆಂಬಲ ದೊರೆಯಿತು. ಅನುಭವಿ ಮತ್ತು ಯುವ ಆಟಗಾರನನ್ನು ಒಳಗೊಂಡ ಈ ಜೋಡಿ ಆಫ್ಘನ್ ಬೌಲರ್‌ಗಳ ಲೈನ್ ಮತ್ತು ಲೆನ್ತ್ ಅನ್ನು ತಪ್ಪಿಸಿತು. ಒಟ್ಟಾಗಿ, ರೋಹಿತ್ ಮತ್ತು ಯಶಸ್ವಿ ಮೊದಲ ವಿಕೆಟ್‌ಗೆ 170 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ತಂಡದ ಗೆಲುವವಿನಲ್ಲಿ ಈ ಇಬ್ಬರ ಜೊತೆಯಾಟ ನೆರವು ನೀಡಿತು.
ಮತ್ತೊಂದು ತುದಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಗಮನ ಸೆಳೆದರು. ಅವರು 69 ಎಸೆತಗಳಲ್ಲಿ 79 ರನ್‌ಗಳ ಆಕ್ರಮಣಕಾರಿ ಇನಿಂಗ್ಸ್ ಆಡಿದರು. ಆದರೆ, ಕೇವಲ 21 ರನ್ ಅಂತರದಲ್ಲಿ ಶತಕ ವಂಚಿತರಾದರು. ಆದರೆ, ಟೀಮ್ ಮ್ಯಾನೇಜ್‌ಮೆಂಟ್ ವಿಶ್ವಾಸವನ್ನು ಮೂಡಿಸಿದ್ದಾರೆ.
Smiles and cheers all around for a Yashasvi Jaiswal special😌👏
— BCCI (@BCCI) June 20, 2026
Scorecard ▶️ https://t.co/kHgF4bqTg3#TeamIndia | #INDvAFG | @IDFCFIRSTBank | @ybj_19 pic.twitter.com/tAiVmZo636
ರೋಹಿತ್ ಶರ್ಮಾ ವಿಕೆಟ್ ಪತನದ ನಂತರವೂ ಯಶಸ್ವಿ ಜೈಸ್ವಾಲ್ ಅವರ ಏಕಾಗ್ರತೆ ಮತ್ತು ದೃಢನಿಶ್ಚಯ ಅಚಲವಾಗಿತ್ತು. ಹೊಸ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬಂದ ನಂತರ ಅವರು ಸ್ಕೋರಿಂಗ್ ದರ ಕುಸಿಯಲು ಬಿಡಲಿಲ್ಲ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಮುಂದುವರಿಸಿದ ಜೈಸ್ವಾಲ್, ಸಿಂಗಲ್ಸ್ ಮತ್ತು ಡಬಲ್ಸ್‌ಗಳೊಂದಿಗೆ ಸ್ಟ್ರೈಕ್ ಅನ್ನು ತಿರುಗಿಸುತ್ತಾ ಕಳಪೆ ಎಸೆತಗಳನ್ನು ಬೌಂಡರಿಗೆ ಕಳುಹಿಸುತ್ತಿದ್ದರು.
📸📸
— BCCI (@BCCI) June 20, 2026
Hang it in the Louvre, Yashasvi Jaiswal 🖼️
Scorecard ▶️ https://t.co/kHgF4bqTg3#TeamIndia | #INDvAFG | @IDFCFIRSTBank | @ybj_19 pic.twitter.com/yOk8wWUmJr
ಅವರು ಕೇವಲ 84 ಎಸೆತಗಳಲ್ಲಿ ಐತಿಹಾಸಿಕ ಶತಕವನ್ನು ಪೂರೈಸಿದರು. ಮುಂಬರುವ ಇಂಗ್ಲೆಂಡ್ ಸರಣಿಗೆ ಮುಂಚಿತವಾಗಿ ಜೈಸ್ವಾಲ್ ಪ್ರದರ್ಶಿಸಿದ ಈ ಫಾರ್ಮ್, ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್‌ಗೆ ಭರವಸೆಯನ್ನು ಮೂಡಿಸಿದೆ. ಇವರು ಆಡಿದ 86 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ ಅಜೇಯ 110 ರನ್‌ಗಳನ್ನು ದಾಖಲಿಸಿದರು. ಆ ಮೂಲಕ ವಿರಾಟ್ ಕೊಹ್ಲಿ ಮೇಲೆ ಒತ್ತಡವನ್ನು ಹೇರಿದ್ದಾರೆ.