ENG vs SA: ದಕ್ಷಿಣ ಆಫ್ರಿಕಾ ವಿರುದ್ಧ 304 ರನ್ ಗಳಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್!
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ 304 ರನ್‌ಗಳಿಸುವ ಮೂಲಕ ಇಂಗ್ಲೆಂಡ್ ತಂಡ ವಿಶ್ವ ದಾಖಲೆಯನ್ನು ಬರೆದಿದೆ. ಟಿ20ಐ ಪಂದ್ಯವೊಂದರಲ್ಲಿ 300ಕ್ಕೂ ಅಧಿಕ ರನ್ ಗಳಿಸಿ ಮೊದಲ ಐಸಿಸಿಯ ಪೂರ್ಣ ಸದಸ್ಯತ್ವದ ತಂಡ ಎಂಬ ಸಾಧನೆಗೆ ಆಂಗ್ಲರು ಭಾಜನರಾಗಿದ್ದಾರೆ.

ಟಿ20ಐ ಪಂದ್ಯದಲ್ಲಿ 300 ರನ್ ಗಳಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್. -

ಮ್ಯಾಂಚೆಸ್ಟರ್: ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ (ENG vs SA) ಇಂಗ್ಲೆಂಡ್ ತಂಡ ವಿಶ್ವ ದಾಖಲೆಯನ್ನು ಬರೆದಿದೆ. ಈ ಪಂಂದ್ಯದಲ್ಲಿ ಇಂಗ್ಲೆಂಡ್ ತಂಡ (England) 304 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ರನ್ ಗಳಿಸಿದ ಮೂರನೇ ತಂಡ ಎನಿಸಿಕೊಂಡಿದೆ. ಅಲ್ಲದೆ, ಟಿ20ಐ ಪಂದ್ಯದಲ್ಲಿ ಈ ಮೊತ್ತವನ್ನು ದಾಖಲಿಸಿದ ಐಸಿಸಿಯ ಮೊದಲ ಪೂರ್ಣ ಸದಸ್ಯತ್ವದ ತಂಡ ಎಂಬ ಸಾಧನೆಗೆ ಆಂಗ್ಲರು ಭಾಜನರಾಗಿದ್ದಾರೆ. ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಇಂಗ್ಲೆಂಡ್ ತಂಡ, ಎರಡನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿತು. ತನ್ನ ಪಾಲಿನ 20 ಓವರ್‌ಗಳಿಗೆ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 304 ರನ್‌ಗಳನ್ನು ಗಳಿಸಿತು.
ಇಂಗ್ಲೆಂಡ್ ತಂಡದ ಪರ ಬ್ಯಾಟಿಂಗ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಫಿಲ್ ಸಾಲ್ಟ್. ಇವರು ಕೇವಲ 60 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ ಅಜೇಯ 141 ರನ್‌ಗಳನ್ನು ಕಲೆ ಹಾಕಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಜೋಸ್ ಬಟ್ಲರ್ ಅವರು 30 ಎಸೆತಗಳಲ್ಲಿ 83 ರನ್‌ಗಳ ಸ್ಪೋಟಕ ಇನಿಂಗ್ಸ್ ಆಡಿದ್ದರು. ಇವರು 7 ಸಿಕ್ಸರ್ ಹಾಗೂ 8 ಬೌಂಡರಿಗಳನ್ನು ಗಳಿಸಿದ್ದರು. ಇನ್ನು ಹ್ಯಾರಿ ಬ್ರೂಕ್ ಅವರು 21 ಎಸೆತಗಳಲ್ಲಿ ಅಜೇಯ 41 ರನ್‌ಗನಳನ್ನು ಸಿಡಿಸಿದ್ದರು.
ENG vs SA: 131 ರನ್‌ಗಳಿಗೆ ಆಲೌಟ್ ಆಗಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್!
ಎರಡನೇ ಟಿ20ಐ ಪಂದ್ಯದಲ್ಲಿ ಮೂಡಿ ಬಂದ ದಾಖಲೆಗಳು
18–ಜೋಸ್ ಬಟ್ಲರ್ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು, ಲಿಯಾಮ್ ಲಿವಿಂಗ್‌ಸ್ಟೋನ್ (17 ಎಸೆತಗಳು) ಮತ್ತು ಮೊಯೀನ್ ಅಲಿ (16 ಎಸೆತಗಳು) ಬಳಿಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ಅತಿ ವೇಗದ ಅರ್ಧಶತಕ ಇದಾಗಿದೆ.
5.5 – ಇಂಗ್ಲೆಂಡ್ ತಂಡ ಕೇವಲ 5.5 ಓವರ್‌ಗಳಲ್ಲಿ 100 ರನ್ ಗಳಿಸಿತು, ಇದು ಟಿ20I ಇತಿಹಾಸದಲ್ಲಿ ಪೂರ್ಣ ಸದಸ್ಯತ್ವದ ತಂಡದಿಂದ ಎರಡನೇ ಅತಿ ವೇಗದ ಅರ್ಧಶತಕವಾಗಿದೆ.
4 –ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ತಮ್ಮ ನಾಲ್ಕನೇ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಇದು ಟಿ20ಐ ಇತಿಹಾಸದಲ್ಲಿ ಜಂಟಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಜೋಡಿಯಾಗಿದೆ.
16.06 – ಬಟ್ಲರ್ ಮತ್ತು ಸಾಲ್ಟ್ ಮೊದಲ ವಿಕೆಟ್‌ಗೆ ಕೇವಲ 47 ಎಸೆತಗಳಲ್ಲಿ 126 ರನ್ ಸೇರಿಸಿದರು. ಅವರು ತಮ್ಮ ಪಾಲುದಾರಿಕೆಯ ಸಮಯದಲ್ಲಿ 16.06 ರನ್ ರೇಟ್ ಅನ್ನು ದಾಖಲಿಸಿದರು.
19 –ಫಿಲ್ ಸಾಲ್ಟ್ 19 ಎಸೆತಗಳಲ್ಲಿ ತಮ್ಮ ಅರ್ಧಶತಕ ಗಳಿಸಿದರು, ಇದು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಗಳಿಸಿದ ನಾಲ್ಕನೇ ವೇಗದ ಅರ್ಧಶತಕವಾಗಿದೆ.
England’s record-breaking blitz levelled the T20I series against South Africa in style 🔥
— ICC (@ICC) September 13, 2025
📝 #ENGvSA: https://t.co/N2fx1e7Gpx pic.twitter.com/d3qA5h8bY5
166/1 – ಮೊದಲ ಹತ್ತು ಓವರ್‌ಗಳ ನಂತರ ಇಂಗ್ಲೆಂಡ್ ಗಳಿಸಿದ ಸ್ಕೋರ್ ಟಿ20ಐಗಳಲ್ಲಿ ಹತ್ತು ಓವರ್‌ಗಳ ನಂತರ ದಾಖಲಾಗಿರುವ ಅತ್ಯಧಿಕ ಮೊತ್ತವಾಗಿದೆ.
12.1 – ಇಂಗ್ಲೆಂಡ್ ಕೇವಲ 12.1 ಓವರ್‌ಗಳಲ್ಲಿ 200 ರನ್ ಗಳಿಸಿತು — ಟಿ20ಐ ಗಳಲ್ಲಿ ಯಾವುದೇ ತಂಡವು ಗಳಿಸಿದ ಅತ್ಯಂತ ವೇಗದ ಶತಕ ಇದಾಗಿದ್ದು, 2024 ರಲ್ಲಿ ಜಿಂಬಾಬ್ವೆ ವಿರುದ್ಧ ಗ್ಯಾಂಬಿಯಾ ನೈರೋಬಿ ಮಾಡಿದ ಹಿಂದಿನ 12.5 ಓವರ್‌ಗಳ ವೇಗದ ಶತಕವನ್ನು ಮೀರಿಸಿದೆ.
39 – ಫಿಲಿಪ್ ಸಾಲ್ಟ್ 39 ಎಸೆತಗಳಲ್ಲಿ ಶತಕವನ್ನು ಸಿಡಿಸಿದರು. ಆ ಮೂಲಕ ಟಿ20ಐನಲ್ಲಿ ವೇಗದ ಶತಕ ಗಳಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 2021 ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಪಾಕಿಸ್ತಾನದ ವಿರುದ್ಧ ಲಿಯಾಮ್ ಲಿವಿಂಗ್‌ಸ್ಟೋನ್ ಅವರ 42 ಎಸೆತಗಳ ಶತಕ ದಾಖಲೆಯನ್ನು ಸಾಲ್ಟ್ ಮುರಿದಿದ್ದಾರೆ.
42 – ಫಿಲ್ ಸಾಲ್ಟ್ ಟಿ20ಐ ಗಳಲ್ಲಿ 4 ಶತಕಗಳನ್ನು ದಾಖಲಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಲು 57 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದ ಭಾರತದ ಸೂರ್ಯಕುಮಾರ್ ಯಾದವ್ ಅವರನ್ನು ಸಾಲ್ಟ್ ಹಿಂದಿಕ್ಕಿದರು.
2 – ಸೂರ್ಯಕುಮಾರ್ ಯಾದವ್ (4) ಜೊತೆಗೆ ಟಿ20ಐನಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಕೂಡ ಸಾಲ್ಟ್ ಆದರು. ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಐದು ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
The moment we passed 3️⃣0️⃣0️⃣ runs!🙌
— England Cricket (@englandcricket) September 12, 2025
Ridiculous performance 👏 pic.twitter.com/J16JyK4ebe
141* - ಸಾಲ್ಟ್ ಅವರ ಅಜೇಯ ಇನಿಂಗ್ಸ್ ಇಂಗ್ಲೆಂಡ್ ಪರ ಟಿ20ಐ ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದ್ದು, 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರದೇ ಆದ 119 ರನ್‌ಗಳ ದಾಖಲೆಯನ್ನು ಮೀರಿಸಿದೆ.
304 - ಇಂಗ್ಲೆಂಡ್ ತಮ್ಮ ಅತ್ಯಧಿಕ ಟಿ20ಐ ಮೊತ್ತವನ್ನು ದಾಖಲಿಸಿದೆ, ಇದು ಪೂರ್ಣ ಸದಸ್ಯ ತಂಡದಿಂದ ಎರಡನೇ ಅತ್ಯಧಿಕವಾಗಿದೆ. 2024 ರಲ್ಲಿ ಭಾರತ ತಂಡ, ಬಾಂಗ್ಲಾದೇಶ ವಿರುದ್ದ 297 ರನ್ ಗಳಿಸಿದ್ದು ಹಿಂದಿನ ಅತ್ಯುತ್ತಮ ರನ್ ಆಗಿದೆ.
3 - ನೇಪಾಳ ಮತ್ತು ಜಿಂಬಾಬ್ವೆ ನಂತರ ಟಿ20ಐ ಗಳಲ್ಲಿ 300 ರನ್ ಗಳಿಸಿದ ಮೂರನೇ ತಂಡ ಇಂಗ್ಲೆಂಡ್.
48 - ಇಂಗ್ಲೆಂಡ್ ತನ್ನ ಇನಿಂಗ್ಸ್‌ನಲ್ಲಿ 48 ಬೌಂಡರಿಗಳನ್ನು ಬಾರಿಸಿತು. 2024ರಲ್ಲಿ ನೈರೋಬಿಯಲ್ಲಿ ಗ್ಯಾಂಬಿಯಾ ವಿರುದ್ಧ ಜಿಂಬಾಬ್ವೆ 57 ರನ್ ಗಳಿಸಿದ ನಂತರ ಟಿ20ಐ ಇನಿಂಗ್ಸ್‌ನಲ್ಲಿ ಎರಡನೇ ಅತ್ಯಧಿಕ ಬೌಂಡರಿಗಳ ದಾಖಲೆ ಇದಾಗಿದೆ.
3 - ನೇಪಾಳ (314/3) ಮತ್ತು ಜಿಂಬಾಬ್ವೆ (344/4) ನಂತರ ಇಂಗ್ಲೆಂಡ್ ಟಿ20ಐ ಪಂದ್ದಲ್ಲಿ ಮೂರನೇ ಅತ್ಯಧಿಕ ಸ್ಕೋರ್ ದಾಖಲಿಸಿದೆ.