ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ತಮ್ಮ ನೆಚ್ಚಿನ ಇಬ್ಬರು ಕ್ರಿಕೆಟಿಗರನ್ನು ಬಹಿರಂಗಪಡಿಸಿದ ಶುಭಮನ್‌ ಗಿಲ್‌!

ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆ ಎಂದು ಗುರುತಿಸಿಕೊಂಡಿರುವ ಶುಭಮನ್‌ ಗಿಲ್‌ ಇದೀಗ ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ತನಗೆ ಆದರ್ಶವಾಗಿರುವ ಇಬ್ಬರು ದಿಗ್ಗಜರ ಹೆಸರನ್ನು ಬಹಿರಂಗಪಡಿಸಿದ್ದಾರೆ. ತನಗೆ ಬಾಲ್ಯದಿಂದಲೂ ಸಚಿನ್‌ ತೆಂಡುಲ್ಕರ್‌ ಮತ್ತು ವಿರಾಟ್‌ ಕೊಹ್ಲಿ ನನಗೆ ಸಾಕಷ್ಟು ಸ್ಪೂರ್ತಿ ನೀಡಿದ್ದಾರೆಂದು ಗಿಲ್‌ ತಿಳಿಸಿದ್ದಾರೆ.

ತಮ್ಮ ನೆಚ್ಚಿನ ಇಬ್ಬರು ಕ್ರಿಕೆಟಿಗರನ್ನು ಆರಿಸಿದ ಶುಭಮನ್‌ ಗಿಲ್‌!

ತಮ್ಮ ನೆಚ್ಚಿನ ಇಬ್ಬರು ಆಟಗಾರರನ್ನು ಆರಿಸಿದ ಶುಭಮನ್‌ ಗಿಲ್‌. -

Profile Ramesh Kote Sep 12, 2025 7:56 PM

ನವದೆಹಲಿ: ರೋಹಿತ್‌ ಶರ್ಮಾ (Rohit Sharma) ಅವರು ಈಗಾಗಲೇ ಟೆಸ್ಟ್‌ ಮತ್ತು ಟಿ20ಐ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಬಿಸಿಸಿಐಗೆ ಭಾರತೀಯ ಟೆಸ್ಟ್‌ ತಂಡದ ನಾಯಕನ ಆಯ್ಕೆಯ ಸವಾಲು ಎದುರಾಗಿತ್ತು. ಈ ವೇಳೆ ಬಿಸಿಸಿಐ ದೀರ್ಘಕಾಲಿಕ ನಾಯಕತ್ವದ ಯೋಜನೆಯೊಂದಿಗೆ ಶುಭಮನ್‌ ಗಿಲ್‌ (Shubman Gill) ಅವರಿಗೆ ಮಣೆ ಹಾಕಿತು. ಬಳಿಕ ಗಿಲ್‌ ತಮ್ಮ ಚೊಚ್ಚಲ ನಾಯಕತ್ವದಲ್ಲಿ ಇಂಗ್ಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಯಲ್ಲಿ (IND vs ENG) ಯಶಸ್ವಿಯಾದರು. ಅವರು ಐದು ಪಂದ್ಯಗಳ ಕಠಿಣ ಟೆಸ್ಟ್‌ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿದ್ದರು. ಪ್ರಸ್ತುತ 2025ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದ ಭಾಗವಾಗಿದ್ದು, ಉಪನಾಯಕನಾಗಿ ಸೂರ್ಯಕುಮಾರ್‌ ಯಾದವ್‌ಗೆ ನೆರವು ನೀಡುತ್ತಿದ್ದಾರೆ.

ಇನ್ನೂ ಏಕದಿನ ಕ್ರಿಕೆಟ್‌ನಲ್ಲೂ ಕೂಡ ಶುಭಮನ್‌ ಗಿಲ್‌ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆ ಎಂದು ಗುರುತಿಸಿಕೊಂಡಿರುವ ಗಿಲ್‌, ಇದೀಗ ತಮ್ಮ ಕ್ರಿಕೆಟ್‌ ಬದುಕನ್ನು ಬೆಂಬಲಿಸಿದ ಇಬ್ಬರು ಆಟಗಾರರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆಪಲ್‌ ಮ್ಯೂಸಿಕ್‌ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನನಗೆ ಬಾಲ್ಯದಿಂದಲೂ ಸಚಿನ್‌ ತೆಂಡುಲ್ಕರ್‌ ಮತ್ತು ವಿರಾಟ್‌ ಕೊಹ್ಲಿ ಅವರೇ ಆದರ್ಶ. ಬಾಲ್ಯದಿಂದಲೂ ಈ ಇಬ್ಬರನ್ನು ಹಿಂಬಾಲಿಸುತ್ತಿದ್ದೇನೆಂದು ಹೇಳಿದ್ದಾರೆ.

Asia Cup 2025: ತಾವು ಖರೀದಿಸಿದ ಮೊಟ್ಟ ಮೊದಲ ಕಾರು ಯಾವುದೆಂದು ರಿವೀಲ್‌ ಮಾಡಿದ ಶುಭಮನ್‌ ಗಿಲ್‌!

ಈ ಬಗ್ಗೆ ವಿವರವಾಗಿ ಮಾಹಿತಿ ಹಂಚಿಕೊಂಡಿರುವ ಶುಭಮನ್‌ ಗಿಲ್‌, "ಕ್ರಿಕೆಟ್‌ನಲ್ಲಿ ನನಗೆ ಇಬ್ಬರು ಆರಾಧ್ಯ ದೇವರಿದ್ದಾರೆ. ಮೊದಲನೆಯವರು ಸಚಿನ್‌ ತೆಂಡೂಲ್ಕರ್‌. ಅವರು ನನ್ನ ತಂದೆಗೂ ಕೂಡ ನೆಚ್ಚಿನ ಆಟಗಾರರಾಗಿದ್ದಾರೆ. ಮತ್ತು ನಾನು ವಾಸ್ತವವಾಗಿ ಅವರಿಂದಾಗಿ ಕ್ರಿಕೆಟ್‌ಗೆ ಬಂದೆ. ಅವರು 2013ರಲ್ಲಿ ನಿವೃತ್ತರಾದರು ಮತ್ತು 2011-2013ರ ಸುಮಾರಿಗೆ ನಾನು

ಕ್ರಿಕೆಟ್‌ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. ಕೌಶಲಗಳು ಮಾತ್ರವಲ್ಲದೇ, ಆಟದಲ್ಲಿನ ಮಾನಸಿಕತೆ ಮತ್ತು ಯುದ್ಧತಂತ್ರದ ಭಾಗವನ್ನೂ ಕಲಿತೆ," ಎಂದು ಅವರು ತಿಳಿಸಿದ್ದಾರೆ.

Asia Cup 2025: ಪಾಕ್‌ ಪಂದ್ಯಕ್ಕೂ ಮುನ್ನ ಮಗನ ಬ್ಯಾಟಿಂಗ್ ಬಗ್ಗೆ ಅಭಿಷೇಕ್ ಶರ್ಮಾ ತಂದೆ ಪ್ರತಿಕ್ರಿಯೆ

ವಿರಾಟ್‌ ಕೊಹ್ಲಿಯವರೂ ಕೂಡ ನನಗೆ ಸ್ಪೂರ್ತಿ

ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಅವರು 2011-2013ರಿಂದ ವಿರಾಟ್‌ ಕೊಹ್ಲಿಯವರನ್ನು ಅನುಸರಿಸಲು ಪ್ರಾರಂಭಿಸಿದರು ಮತ್ತು ಕ್ರಿಕೆಟ್‌ ಮೇಲಿನ ಅವರ ಉತ್ಸಾಹ ನನ್ನ ಮೇಲೆ ತೀವ್ರಾವಾದ ಪರಣಾಮ ಬೀರಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಗಿಲ್‌, "ಆಗ (2011-2013) ನಾನು ವಿರಾಟ್ ಕೊಹ್ಲಿಯನ್ನು ಹತ್ತಿರದಿಂದ ಅನುಸರಿಸಲು ಪ್ರಾರಂಭಿಸಿದ ಸಮಯ. ಅವರು ತಮ್ಮ ವ್ಯವಹಾರದ ಬಗ್ಗೆ ಹೇಗೆ ನಡೆದುಕೊಂಡರು, ಆಟದ ಬಗ್ಗೆ ಅವರಿಗಿದ್ದ ಅಪಾರ ಉತ್ಸಾಹ ಮತ್ತು ಅವರ ಹಸಿವನ್ನು ನೋಡುವುದು ನನಗೆ ತುಂಬಾ ಇಷ್ಟವಾಯಿತು. ನೀವು ಎಲ್ಲಾ ಕೌಶಲಗಳನ್ನು ಮತ್ತು ಎಲ್ಲಾ ತಂತ್ರಗಳನ್ನು ಕಲಿಯಬಹುದು. ವಿರಾಟ್ ಅದನ್ನು ಹೇರಳವಾಗಿ ಹೊಂದಿದ್ದರು ಮತ್ತು ಅದು ನನಗೆ ನಿಜವಾಗಿಯೂ ಸ್ಫೂರ್ತಿ ನೀಡಿತು," ಎಂದು ಭಾರತದ ಟೆಸ್ಟ್ ನಾಯಕ ತಿಳಿಸಿದ್ದಾರೆ.