ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಬೆಥೆಲ್‌-ಡಕೆಟ್‌ ಓಪನರ್ಸ್‌; ಮೊದಲನೇ ಒಡಿಐಗೆ ಇಂಗ್ಲೆಂಡ್‌ ಪ್ಲೇಯಿಂಗ್‌ XI ಪ್ರಕಟ!

ಭಾರತ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XI ಅನ್ನು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಕಟಿಸಿದೆ. ಬೆನ್‌ ಡಕೆಟ್‌ ಜೊತೆಗೆ ಇನಿಂಗ್ಸ್‌ ಆರಂಭಿಸಲು ಜೇಕಬ್‌ ಬೆಥೆಲ್‌ ಅವರನ್ನು ಆರಿಸುವ ಮೂಲಕ ಇಸಿಬಿ ಅಚ್ಚರಿ ಮೂಡಿಸಿದೆ.

ಮೊದಲನೇ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್‌ ಪ್ಲೇಯಿಂಗ್‌ XI ಪ್ರಕಟ.

ನವದಹೆಲಿ: ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ (IND vs ENG) ಆರಂಭಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇದೆ. ಜುಲೈ 14 ರಂದು ಬರ್ಮಿಂಗ್‌ಹ್ಯಾಮ್‌ ಎಜ್‌ಬಾಸ್ಟನ್‌ನಲ್ಲಿ ಮೊದಲನೇ ಏಕದಿನ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XIಅನ್ನು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ (ECB) ಜುಲೈ 13 ರಂದು ಪ್ರಕಟಿಸಿದೆ. ಆದರೆ, ಬೆನ್‌ ಡಕೆಟ್‌ ಜೊತೆಗೆ ಇನಿಂಗ್ಸ್‌ ಆರಂಭಿಸಲು ಆಲ್‌ರೌಂಡರ್‌ ಜೇಕಬ್‌ ಬೆಥೆಲ್‌ ಅವರನ್ನು ಆಯ್ಕೆ ಮಾಡುವ ಮೂಲಕ ಇಸಿಬಿ ಅಚ್ಚರಿ ಮೂಡಿಸಿದೆ. ಈ ಪಂದ್ಯ ವಿಕೆಟ್‌ ಕೀಪರ್‌ ಜೋಸ್‌ ಬಟ್ಲರ್‌ಗೆ 200ನೇ ಪಂದ್ಯ ಎಂಬುದು ವಿಶೇಷ.

ಜೋಸ್‌ ಬಟ್ಲರ್‌ ಅವರು 2012ರ ಫೆಬ್ರವರಿ 21 ರಂದು ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಆಡಿದ 199 ಪಂದ್ಯಗಳಿಂದ 39.11ರ ಸರಾಸರಿಯಲ್ಲಿ 11 ಶತಕಗಳು ಹಾಗೂ 29 ಅರ್ಧಶತಕಗಳ ಮೂಲಕ 5,515 ರನ್‌ಗಳನ್ನು ಕಲೆ ಹಾಕಿದ್ದಾರೆ.

IND vs ENG: ಕೊಹ್ಲಿ ಕಮ್‌ಬ್ಯಾಕ್‌; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಇದುವರೆಗೆ 21 ಏಕದಿನ ಪಂದ್ಯಗಳನ್ನು ಆಡಿರುವ ಯುವ ಹಾಗೂ ಪ್ರತಿಭಾವಂತ ಜೇಕಬ್ ಬೆಥೆಲ್ ಅವರನ್ನು ಆರಂಭಿಕ ಬ್ಯಾಟರ್ ಆಗಿ ಬಡ್ತಿ ನೀಡಿರುವುದು, ಬೆನ್ ಡಕೆಟ್‌ಗೆ ಸ್ಥಿರ ಜೊತೆಯಾಟಗಾರನನ್ನು ಕಂಡುಹಿಡಿಯುವ ಇದರ ಉದ್ದೇಶವಾಗಿದೆ. ವಿಶೇಷವೆಂದರೆ, ಇತ್ತೀಚಿನ ದಿನಗಳಲ್ಲಿ ಡಕೆಟ್‌ಗೆ ಆರಂಭಿಕ ಜೊತೆಯಾಟಗಾರನಾಗುತ್ತಿರುವ ಐದನೇ ಆಟಗಾರ ಬೆಥೆಲ್. ಇದಕ್ಕೂ ಮುನ್ನ ಫಿಲ್ ಸಾಲ್ಟ್, ಜೇಮಿ ಸ್ಮಿತ್, ಜ್ಯಾಕ್‌ ಕ್ರಾವ್ಲಿ ಹಾಗೂ ರೆಹಾನ್ ಅಹ್ಮದ್ ಈ ಪಾತ್ರವನ್ನು ನಿರ್ವಹಿಸಿದ್ದರು.

ಇನ್ನೊಂದೆಡೆ, ನಾಯಕ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸುವ ಉದ್ದೇಶದಿಂದ ಸ್ಪಿನ್ನರ್‌ಗಳಿಗೆ ಹೆಚ್ಚಿನ ಮಣೆ ಹಾಕಿದೆ. ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್ ಹಾಗೂ ಆದಿಲ್ ರಶೀದ್ ಸ್ಪಿನ್ ದಾಳಿಯ ಜವಾಬ್ದಾರಿ ಹೊತ್ತಿದ್ದು, ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಅವರನ್ನೊಳಗೊಂಡ ಭಾರತದ ಬಲಿಷ್ಠ ಬ್ಯಾಟಿಂಗ್ ಕ್ರಮವನ್ನು ಕಟ್ಟಿಹಾಕುವ ಯೋಜನೆ ರೂಪಿಸಲಾಗಿದೆ.

ರೋಹಿತ್‌, ಕೊಹ್ಲಿಯ ವಿಶ್ವಕಪ್‌ ಭವಿಷ್ಯದ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಶುಭಮನ್‌ ಗಿಲ್‌!

ಇಂಗ್ಲೆಂಡ್‌ ತಂಡದ 4-0 ಅಂತರದ ಟಿ20ಐ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಜೋಫ್ರಾ ಆರ್ಚರ್, ಕಳೆದ ವರ್ಷದ ನವೆಂಬರ್ ಬಳಿಕ ಮೊದಲ ಬಾರಿ ಇಂಗ್ಲೆಂಡ್‌ನ ಏಕದಿನ ತಂಡಕ್ಕೆ ಮರಳಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಜಾಶ್ ಟಂಗ್ ಅವರೊಂದಿಗೆ ವೇಗದ ಬೌಲಿಂಗ್ ವಿಭಾಗದ ಹೊಣೆ ಹೊತ್ತಿರುವ ಆರ್ಚರ್, ತಂಡಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಗಸ್ ಅಟ್ಕಿನ್ಸನ್‌ಗೆ ಸ್ಥಾನ ಸಿಕ್ಕಿಲ್ಲ. ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಬಳಿಕ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಜುಲೈ 16ರಂದು ಕಾರ್ಡಿಫ್ ಹಾಗೂ ಜುಲೈ 19ರಂದು ಲಾರ್ಡ್ಸ್‌ನಲ್ಲಿ ಉಳಿದ ಎರಡು ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.

ಇಂಗ್ಲೆಂಡ್ ಪ್ಲೇಯಿಂಗ್‌ XI: ಜೇಕಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜಾಶ್ ಟಂಗ್ ಹಾಗೂ ಆದಿಲ್ ರಶೀದ್