IND vs ENG: ಕೊಹ್ಲಿ ಕಮ್‌ಬ್ಯಾಕ್; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
India's Strongest Playing XI: ಟಿ20ಐ ಸರಣಿಯಲ್ಲಿ 0-4 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿರುವ ಭಾರತ ತಂಡ, ಇದೀದ ಇಂಗ್ಲೆಂಡ್ ಎದುರು ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ಜಸ್‌ಪ್ರೀತ್ ಬುಮ್ರಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.
ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ -
ಬರ್ಮಿಗ್‌ಹ್ಯಾಮ್: ಟಿ20ಐ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ, ಇದೀಗ ಇದೇ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs ENG) ಸಜ್ಜಾಗುತ್ತಿದೆ. ಮೊದಲನೇ ಪಂದ್ಯ ಜುಲೈ 14 ರಂದು ಮಂಗಳವಾರ ಇಲ್ಲಿನ ಎಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್ ಬುಮ್ರಾ ಸೇರಿದಂತೆ ಹಲವು ಹಿರಿಯ ಆಟಗಾರರು ತಂಡಕ್ಕೆ ಮರಳಲಿದ್ದಾರೆ.
ನಾಯಕ ಶುಭಮನ್ ಗಿಲ್‌ಗೆ ಎಲ್ಲಾ ಹಿರಿಯ ಆಟಗಾರರು ಲಭ್ಯರಾಗಿದ್ದು, ಮೊದಲನೇ ಪಂದ್ಯಕ್ಕೆ ಅತ್ಯುತ್ತಮ ರಣತ್ರಂತ್ರವನ್ನು ರಚಿಸಲಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದ ಹಲವು ಹಿರಿಯ ಆಟಗಾರರು ಈ ಸರಣಿಗೆ ಮರಳಿದ್ದಾರೆ. ವಿರಾಟ್ ಕೊಹ್ಲಿ ಅವರು ಗಾಯದಿಂದ ಗುಣಮುಖರಾಗಿದ್ದು, ಇಂಗ್ಲೆಂಡ್ ಎದುರು ಆಡಲಿದ್ದಾರೆ. ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು.
ಭಾರತಕ್ಕೆ ಸೇಡು ತೀರಿಸುವ ತವಕ; ನಾಳೆಯಿಂದ ಆಂಗ್ಲರ ವಿರುದ್ಧ ಏಕದಿನ ಸರಣಿ
ಮೊಟ್ಟ ಮೊದಲ ಬಾರಿ ಟಿ20ಐ ಭಾರತ ತಂಡವನ್ನು ಮುನ್ನಡೆಸಿದ ಬಳಿಕ ಶ್ರೇಯಸ್ ಅಯ್ಯರ್ 50ಓವರ್‌ಗ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಅವರು ಇಂಗ್ಲೆಂಡ್ ಎದುರ ಟಿ20ಐ ಸರಣಿಯಲ್ಲಿ ಎರಡು ಅರ್ಧಶತಕವನ್ನು ಸಿಡಿಸಿರುವುದು, ಇದೀಗ ಏಕದಿನ ಸರಣಿಗೆ ನೆರವಾಗಬಹುದು. ಇನ್ನು ಕನ್ನಡಿಗ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಹಾಗೂ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೂಡ ನಿರ್ವಹಿಸಲಿದ್ದಾರೆ. ಆಫ್ಘನ್ ಎದುರು ಹಿಂದಿನ ಪಂದ್ಯದಲ್ಲಿ ಅವರು 139 ರನ್‌ಗಳ ಜವಾಬ್ದಾರಿಯುತ ಇನಿಂಗ್ಸ್ ಆಡಿದ್ದರು.
ಎಂದಿನಂತೆ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಆಫ್ಘನ್ ಎದುರಿನ ಒಡಿಐ ಸರಣಿಯಲ್ಲಿ ಶುಭಮನ್ ಗಿಕ್ 238 ರನ್‌ಗಳನ್ನು ಕಲೆ ಹಾಕಿದ್ದರೆ, ರೋಹಿತ್ ಶರ್ಮಾ 143 ರನ್ ಗಳಿಸಿದ್ದರು. ಇಂಗ್ಲೆಂಡ್ ಕಂಡೀಷನ್ಸ್‌ನಲ್ಲಿಯೂ ಈ ಜೋಡಿ ಭಾರತಕ್ಕೆ ಉತ್ತಮ ಆರಂಭವನ್ನು ತಂದುಕೊಡಲು ಎದುರು ನೋಡುತ್ತಿದೆ.
IND vs ENG: ಸೂರ್ಯಕುಮಾರ್ ಯಾದವ್ ಬಗ್ಗೆ ದೊಡ್ಡ ಹೇಳಿದ ಆರ್ ಅಶ್ವಿನ್!
ಜಸ್‌ಪ್ರೀತ್ ಬುಮ್ರಾ ಇನ್
ಜಸ್‌ಪ್ರೀತ್ ಬುಮ್ರಾ ಆಗಮನಿದಂದ ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಆನೆ ಬಲ ಬಂದಂತಾಗಿದೆ. ಅವರು ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ ಹಾಗೂ ಗುರ್ನೂರ್ ಬ್ರಾರ್ ಅವರನ್ನು ಒಳಗೊಂಡ ವೇಗದ ಬೌಲಿಂಗ್ ವಿಭಾಗಕ್ಕೆ ಸೇರಿಕೊಳ್ಳಲಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ವಿಭಾಗದಲ್ಲಿ ಆಡಲಿದ್ದಾರೆ.
ಇಂಗ್ಲೆಂಡ್ ಎದುರು ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ
- ಶುಭಮನ್ ಗಿಲ್ (ನಾಯಕ, ಆರಂಭಿಕ ಬ್ಯಾಟ್ಸ್‌ಮನ್)
- ರೋಹಿತ್ ಶರ್ಮಾ (ಆರಂಭಿಕ ಬ್ಯಾಟ್ಸ್‌ಮನ್)
- ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)
- ಶ್ರೇಯಸ್ ಅಯ್ಯರ್ (ಬ್ಯಾಟ್ಸ್‌ಮನ್)
- ಕೆಎಲ್ ರಾಹುಲ್ (ವಿಕೆಟ್ ಕೀಪರ್, ಬ್ಯಾಟರ್)
- ಶಿವಂ ದುಬೇ (ಬ್ಯಾಟಿಂಗ್ ಆಲ್‌ರೌಂಡರ್)
- ಅಕ್ಷರ್ ಪಟೇಲ್ (ಸ್ಪಿನ್ ಆಲ್‌ರೌಂಡರ್)
- ಕುಲ್ದೀಪ್ ಯಾದವ್ (ಸ್ಪಿನ್ನರ್)
- ಅರ್ಷದೀಪ್ ಸಿಂಗ್( ವೇಗದ ಬೌಲರ್)
- ಜಸ್‌ಪ್ರೀತ್ ಬುಮ್ರಾ (ವೇಗದ ಬೌಲರ್)
- ಗುರ್ನೂರ್ ಬ್ರಾರ್ (ವೇಗದ ಬೌಲರ್)