ನವದೆಹಲಿ: ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs ENG) 16 ಸದಸ್ಯರ ಇಂಗ್ಲೆಂಡ್ ತಂಡವನ್ನು (England ODI Squad) ಪ್ರಕಟಿಸಲಾಗಿದ್ದು, ಹಿರಿಯ ವೇಗಿ ಜೋಫ್ರಾ ಆರ್ಚರ್ (Jofra Archer) ಅವರು ದೀರ್ಘಾವಧಿ ಬಳಿಕ ತಂಡಕ್ಕೆ ಮರಳಿದ್ದಾರೆ. ಇನ್ನು ಸಸೆಕ್ಸ್ ಆಲ್‌ರೌಂಡರ್ ಜೇಮ್ಸ್ ಕೋಲ್ಸ್ ಅವರು ಇದೇ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆರ್ಚರ್ ಜೊತೆಗೆ ವೇಗದ ಬೌಲಿಂಗ್ ವಿಭಾಗಕ್ಕೆ ಇದೇ ಮೊದಲ ಬಾರಿ ಏಕದಿನ ತಂಡಕ್ಕೆ ಜಾಶ್ ಟಾಂಗ್ ಆಯ್ಕೆಯಾಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಟಿ20ಐ ಸರಣಿ ಸದ್ಯ ನಡೆಯುತ್ತಿದ್ದು, ಏಕದಿನ ಸರಣಿ ಜುಲೈ 14 ರಂದು ಆರಂಭವಾಗಲಿದೆ.
ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ವೇಗದ ಬೌಲರ್‌ಗಳಾದ ಗಸ್ ಅಟ್ಕಿನ್ಸನ್ ಹಾಗೂ ಸಾಕಿಬ್ ಮೊಹ್ಮೂದ್ ಅವರು ಕೂಡ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಒಡಿಐ ತಂಡವನ್ನು ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದಾರೆ.
ಶ್ರೀಲಂಕಾ ವಿರುದ್ಧ ಆಡಿದ್ದ 15 ಸದಸ್ಯರ ತಂಡದಲ್ಲಿ ಇದೀಗ ನಾಲ್ಕು ಬದಲಾವಣೆಗಳನ್ನು ತರಲಾಗಿದೆ. ಬ್ರೈಡನ್ ಕಾರ್ಸ್, ಝ್ಯಾಕ್ ಕ್ರಾವ್ಲಿ, ಜೇಮಿ ಓವರ್ಟನ್ ಹಾಗೂ ಲ್ಯೂಕ್ ವುಡ್ ಅವರನ್ನು ಕ್ರಮವಾಗಿ ಜೋಫ್ರಾ ಆರ್ಚರ್, ಅಟ್ಕಿನ್ಸನ್, ಮಹ್ಮೂದ್ ಹಾಗೂ ಕೋಲ್ಸ್ ತುಂಬಿದ್ದಾರೆ. ಆ ಮೂಲಕ ಇನ್ನುಳಿದಂತೆ ಅದೇ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.
IND vs ENG: ಎರಡನೇ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಮೊದಲನೇ ಏಕದಿನ ಪಂದ್ಯ ಜುಲೈ 14 ರಂದು ಎಜ್‌ಬಾಸ್ಟನ್‌ನಲ್ಲಿ ನಡೆದರೆ, ಎರಡನೇ ಪಂದ್ಯ ಕಾರ್ಡಿಫ್‌ನಲ್ಲಿ ಜಯಲೈ 16 ರಂದು ಜರುಗಲಿದೆ. ಇನ್ನು ಮೂರನೇ ಹಾಗೂ ಕೊನೆಯ ಪಂದ್ಯ ಜುಲೈ 19 ರಂದು ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧ ಟಿ20ಐ ಸರಣಿ ಆಡುತ್ತಿರುವ ಭಾರತ
ಪ್ರಸ್ತುತ ಇಂಗ್ಲೆಂಡ್ ಆತಿಥ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20ಐ ಸರಣಿ ನಡೆಯುತ್ತಿದೆ. ಚೆಸ್ಟರ್-ಲೀ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆದಿದ್ದ ಮೊದಲ ಟಿ20ೈ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಯಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್‌ಗಳನ್ನು ಗಳಿಸಿತ್ತು. ಆದರೆ ನಿರಂತರ ಮಳೆಯಿಂದಾಗಿ ಇಂಗ್ಲೆಂಡ್‌ನ ಇನಿಂಗ್ಸ್ ಆರಂಭವಾಗಲೇ ಇಲ್ಲ. ಇದರ ಪರಿಣಾಮ ಪಂದ್ಯವನ್ನು ರದ್ದುಗೊಳಿಸಲಾಯಿತು. ಈಗ ಎರಡನೇ ಟಿ20 ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಉದ್ದೇಶದಿಂದ ಉಭಯ ತಂಡಗಳು ಗೆಲುವಿಗಾಗಿ ಕಣಕ್ಕಿಳಿಯಲಿವೆ.
IND vs ENG: ವೈಭವ್ ಸೂರ್ಯವಂಶಿಗೆ ಆಡಿಸದ ಬಗ್ಗೆ ಎಬಿ ಡಿ ವಿಲಿಯರ್ಸ್ ಪ್ರತಿಕ್ರಿಯೆ!
ಭಾರತ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ
ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕೋಲ್ಸ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹ್ಮೂದ್, ಆದಿಲ್ ರಶೀದ್, ಜೋ ರೂಟ್, ಜಾಶ್ ಟಾಮ್